ಗೂಗಲ್‌ಗೂ ಗೊತ್ತು ಅಪ್ಪು ಗತ್ತು: ಪುನೀತ್‌ ರಾಜ್‌ಕುಮಾರ್ ಹೆಸರು ಮಾಡಿತು ದಾಖಲೆ!

ನಟ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ದೈಹಿಕವಾಗಿ ಅಗಲಿದ್ದಾರೆ. ಆದರೆ ಅವರು ಜನಮಾನಸದಲ್ಲಿ ಸದಾ ಅಜರಾಮರ. ನಟ ಪುನೀತ್‌ ರಾಜ್‌ಕುಮಾರ್‌ ಅವರು ಮಾಡಿರುವ ಸಾಧನೆಗಳು, ಒಳ್ಳೆಯ ಕೆಲಸಗಳ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಅದರಲ್ಲೂ ಅವರು ದಿವಂಗತರಾದ ಬಳಿಕವೆ ಅವರ ಹಲವು ಕೆಲಸಗಳು ಹೆಚ್ಚಾಗಿ ಗಮನ ಸೆಳೆದಿವೆ.

ಅಷ್ಟಕ್ಕೂ ಅಪ್ಪು ಇದ್ದಾಗ ಮಾಡಿದ ಅದೆಷ್ಟೊ ಉತ್ತಮ ಕಾರ್ಯಗಳು ಅವರು ಇಲ್ಲವಾದ ಬಳಿಕ ಬೆಳಕಿಗೆ ಬಂದಿವೆ. ಅದರಲ್ಲೂ ಅವರು ಮಾಡಿದ ಸಮಾಜ ಸೇವೆಗಳು ಮತ್ತೊಬ್ಬರಿಗೆ ಸ್ಪೂರ್ತಿದಾಯಕ. ಪುನೀತ್‌ ರಾಜ್‌ಕುಮಾರ್‌ ಅವರು ಕೇವಲ ಸಿನಿಮಾರಂಗದಲ್ಲಷ್ಟೇ ದಾಖಲೆಗಳನ್ನು ಮಾಡಿಲ್ಲ. ಒಟ್ಟಾರೆ ಅವರ ಜೀವನವೇ ಒಂದು ಆದರ್ಶ.

ಆದರೆ ಅಪ್ಪು ಮರಣದ ಬಳಿಕವೂ ಒಂದು ವಿಶೇಷ ದಾಖಲೆ ಮಾಡಿದ್ದಾರೆ. ಅಪ್ಪು ನಿಧನರಾದ ದಿನದಂದೇ ವಿಶೇಷ ದಾಖಲೆಯಿಂದು ನಿರ್ಮಾಣವಾಗಿದೆ. ಅಪ್ಪು ಹೆಸರಲ್ಲಿ ಆದ ರೆಕಾರ್ಡ್‌ 2021ರ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ.

ಅಪ್ಪು ಹೆಸರೊಂದೇ ಸಾಕು ದಾಖಲೆ ಬರೆಯಲು!

ಅಪ್ಪು ಹೆಸರೊಂದೇ ಸಾಕು ದಾಖಲೆ ಬರೆಯಲು!

ನಟ ಪುನೀತ್‌ ರಾಜ್‌ಕುಮಾರ್‌ ಇದ್ದಾಗ ಹಲವು ಉತ್ತಮ ಕೆಲಸಗಳ ಮೂಲಕ ಗಮನ ಸೆಳೆದಿದ್ದರು. ಅವರ ಸಿನಿಮಾಗಳು ದಾಖಲೆ ಮಾಡುತ್ತಿದ್ದವು. ಆದರೆ ಅಪ್ಪು ಇಲ್ಲವಾದ ಬಳಿಕವೂ ಅವರ ಹೆಸರು ದಾಖಲೆ ಮಾಡಿದೆ ಅಂದರೆ ನಂಬಲೇ ಬೇಕು. ಹೌದು ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಏಕೈಕ ನಟ ಪುನೀತ್‌ ರಾಜ್‌ಕುಮಾರ್. ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ತಿಳಿದು ಕೊಳ್ಳಲು ಪುನೀತ್‌ ರಾಜ್‌ಕುಮಾರ್‌ ಹೆಸರಲ್ಲಿ ಕೊಟ್ಯಂತರ ಜನ ಗೂಗಲ್‌ನಲ್ಲಿ ಅವರ ಬಗ್ಗೆ ಹುಡುಕಿದ್ದಾರೆ. ಅಪ್ಪು ಬಗ್ಗೆ ತಿಳಿದು ಕೊಂಡಿದ್ದಾರೆ. ಇದು ಈ ವರ್ಷದ ದಾಖಲೆಗಳ ಪುಟ ಸೇರಿದೆ.

8 ಗಂಟೆಯಲ್ಲಿ 10ಮಿಲಿಯನ್ ಸರ್ಚ್!

8 ಗಂಟೆಯಲ್ಲಿ 10ಮಿಲಿಯನ್ ಸರ್ಚ್!

ಇನ್ನೂ ಪುನೀತ್‌ ರಾಜ್‌ಕುಮಾರ್‌ಗೆ ವಿಶ್ವದಾದ್ಯಂತ ಅಭಿಮಾನಿ ಬಳಗ ಇದೆ. ಅಂದರೆ ಅವರು ನಾಡು, ದೇಶದ ಗಡಿ ದಾಟಿ ಜನರನ್ನು ತಲುಪಿದ್ದಾರೆ. ಹಾಗಾಗಿ ವಿಶ್ವಾದ್ಯಂತ ಹಲವು ದೇಶಗಳಲ್ಲಿ ಜನರು ಅಪ್ಪು ಬಗ್ಗೆ ಹೆಚ್ಚಿನದನ್ನು ತಿಳಿಯಲು ಗೂಗಲ್‌ನಲ್ಲಿ ಹುಡುಕಾಡಿರುವುದು ಕಂಡು ಬಂದಿದೆ. ಇನ್ನೂ ಅಪ್ಪು ಕಾಲವಾದ ದಿನ ಅಕ್ಟೋಬರ್ 29-2021ರಂದೇ ಪುನೀತ್ ರಾಜ್‌ಕುಮಾರ್‌ ಎನ್ನುವ ಹೆಸರು ದಾಖಲೆ ಮಾಡಿತ್ತು. ಕೇವಲ 8 ಗಂಟೆಯಲ್ಲಿ 10ಮಿಲಿಯನ್‌ಗೂ ಅಧಿಕ ಮಂದಿ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರನ್ನು ಗೂಗಲ್‌ನಲ್ಲಿ ಹುಡುಕಿದ್ದಾರೆ. ಇದೊಂದು ಉದಾಹರಣೆ ಸಾಕು ಅಪ್ಪು ಜನರ ಮನಸ್ಸಿಗೆ ಅದೆಷ್ಟು ಹತ್ತಿರ ಆಗಿದ್ದರು ಎಂದು ತಿಳಿಯಲು.

ಅಪ್ಪು ಸ್ಥಾನ ತುಂಬುತ್ತಾರೆ ಯುವ ರಾಜ್‌ಕಮಾರ್!

ಅಪ್ಪು ಸ್ಥಾನ ತುಂಬುತ್ತಾರೆ ಯುವ ರಾಜ್‌ಕಮಾರ್!

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಮಾಡಬೇಕಿದ್ದ ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂದರೆ ಅಪ್ಪು ಅವರ ಕಥೆ ಒಪ್ಪಿ ಹಲವು ನಿರ್ದೇಶಕರಿಗೆ ಡೇಟ್ ಕೊಟ್ಟಿದ್ದರು. ಈಗ ಅಪ್ಪು ಇಲ್ಲ. ಆದರೆ ಅವರಿಗಾಗಿ ಬರೆದ ಕಥೆಗಳನ್ನು ತೆರೆಯ ಮೇಲೆ ತರಬೇಕು ಎಂಬ ಆಸೆ ಸಿನಿಮಾ ಮಂದಿಗಿದೆ. ಅವರ ಅಭಿಮಾನಿಗಳು ಕೂಡ ಅಪ್ಪು ಮಾಡಬೇಕಿದ್ದ ಸಿನಿಮಾಗಳನ್ನು ನೋಡಲು ಕಾತರರಾಗಿದ್ದಾರೆ. ಜೇಮ್ಸ್‌ ಚಿತ್ರದಲ್ಲಿ ಅಪ್ಪು ಅವರೇ ಅಭಿನಯಿಸಿದ್ದಾರೆ. ಹಾಗಾಗಿ ಈ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ರಿಲೀಸ್‌ ದಿನಾಂಕವನ್ನೂ ಚಿತ್ರತಂಡ ಪ್ರಕಟ ಮಾಡಲಿದೆ.

ಪುನೀತ್‌ ರಾಜ್‌ಕುಮಾರ್‌ ಮಾಡಬೇಕಿದ್ದ ಚಿತ್ರಗಳಲ್ಲಿ ಬದಲಾವಣೆ!

ಪುನೀತ್‌ ರಾಜ್‌ಕುಮಾರ್‌ ಮಾಡಬೇಕಿದ್ದ ಚಿತ್ರಗಳಲ್ಲಿ ಬದಲಾವಣೆ!

ಇನ್ನು ಸದ್ಯದ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಸುದ್ದಿ ಅಂದರೆ ಅದು, ಪುನೀತ್‌ ಪಾತ್ರವನ್ನು ರಾಘಣ್ಣನ ಪುತ್ರ ಯುವರಾಜ್‌ಕುಮಾರ್‌ ಮಾಡುತ್ತಾರೆ ಎನ್ನುವುದು. ನಿರ್ದೇಶಕ ಸಂತೋಷ್ ಆನಂದ್‌ರಾಮ್‌ ಅಪ್ಪುಗಾಗಿ ಮಾಡಿಕೊಂಡಿದ್ದ ಕಥೆಗೆ ಈಗ ಯುವ ರಾಜ್‌ಮಾರ್‌ ನಾಯಕ ನಟ ಆಗಲಿದ್ದಾರೆ ಎನ್ನುವ ಸುದ್ದಿ ಸಂಚಲನ ಮೂಡಿಸಿದೆ. ಆದರೆ ಅಪ್ಪು ಅಭಿನಯಿಸಬೇಕಿದ್ದ 'ದ್ವಿತ್ವ' ಚಿತ್ರದ ಮುಂದಿನ ಬದಲಾವಣೆ ಏನು? ದಿನಕರ್ ತೂಗುದೀಪ್‌ ಅಪ್ಪುಗಾಗಿ ಮಾಡಿದ್ದ ಕತೆಯನ್ನು ಏನು ಮಾಡುತ್ತಾರೆ ಎನ್ನುವ ವಿಚಾರಗಳು ಇನ್ನಷ್ಟೇ ಗೊತ್ತಾಗಬೇಕಿದೆ.

More from Filmibeat

English summary
Puneeth Rajkumar's Name Set New Record After His Death,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X