ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಿಗೆ ಸಖತ್ ಸುದ್ದಿ: ದಸರಾಗೆ ಕಾದಿದೆ ಬಿಗ್ ಸರ್ಪ್ರೈಸ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ 'ಯುವರತ್ನ' ಸಿನಿಮಾದ ಚಿತ್ರೀಕರಣ ಮುಗಿಸಿ ಇದೀಗ ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೆ 'ಯುವರತ್ನ' ಸಿನಿಮಾದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಜೇಮ್ಸ್ ಚಿತ್ರೀಕರಣದಲ್ಲಿರುವ ಅಪ್ಪು ಮತ್ತು ತಂಡದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇನ್ನೂ ಮತ್ತೊಂದೆಡೆ ಯುವರತ್ನ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ವೈರಸ್ ನಿಂದ ಸಿನಿಮಾ ಶೂಟಿಂಗ್ ಮತ್ತು ರಿಲೀಸ್ ಮುಂದಕ್ಕೆ ಹೋಗಿದೆ. ಇದೀಗ ಅಭಿಮಾನಿಗಳು ಚಿತ್ರದ ಹಾಡಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಹಾಡುಗಳು ಬಿಡುಗಡೆಯಾಗುವ ಮೊದಲೇ ಚಿತ್ರದಿಂದ ಮತ್ತೊಂದು ಲುಕ್ ರಿವೀಲ್ ಮಾಡುವುದಾಗಿ ಅನೌನ್ಸ್ ಮಾಡಿದೆ. ಮುಂದೆ ಓದಿ..

ಅಪ್ಪು ಅಭಿಮಾನಿಗಳಿಗೆ ದಸರಾ ಗಿಫ್ಟ್

ಅಪ್ಪು ಅಭಿಮಾನಿಗಳಿಗೆ ದಸರಾ ಗಿಫ್ಟ್

ಪವರ್ ಸ್ಟಾರ್ ಅಭಿಮಾನಿಗಳು ಅನೇಕ ತಿಂಗಳಿಂದ ಯುವರತ್ನ ಹಾಡಿಗಾಗಿ ಕಾಯುತ್ತಿದ್ದಾರೆ. ಸದ್ಯದಲ್ಲೇ ಆಡಿಯೋ ರಿಲೀಸ್ ಮಾಡುವುದಾಗಿಯೂ ಸಿನಿಮಾತಂಡ ಹೇಳಿತ್ತು. ಆದರೀಗ ಹಾಡುಗಳು ಬಿಡುಗಡೆಯಾಗುವ ಮೊದಲೇ ಚಿತ್ರದಿಂದ ಮತ್ತೊಂದು ಲುಕ್ ರಿವೀಲ್ ಮಾಡಲು ನಿರ್ಧರಿಸಿದೆ. ಹೌದು, ಯುವರತ್ನ ತಂಡ ಪವರ್ ಸ್ಟಾರ್ ಗಡ್ಡ ಬಿಟ್ಟಿರುವ ಹೊಸ ಲುಕ್ ಅನ್ನು ದಸರಾ ಹಬ್ಬಕ್ಕೆ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಕೊಡಲು ನಿರ್ಧರಿಸಿದೆ.

ಹೊಸ ಲುಕ್ ಬಗ್ಗೆ ಬಹಿರಂಗ ಪಡಿಸಿದ ಸಿನಿಮಾತಂಡ

ಹೊಸ ಲುಕ್ ಬಗ್ಗೆ ಬಹಿರಂಗ ಪಡಿಸಿದ ಸಿನಿಮಾತಂಡ

ಈ ಬಗ್ಗೆ ಸಿನಿಮಾತಂಡ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಡ್ಡ ಬಿಟ್ಟಿರುವ ಲುಕ್ ಅನ್ನು ದಸರಾಗೆ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಅಪ್ಪು ಲುಕ್ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.

ಗಡ್ಡದ ಲುಕ್ ಗೆ ಫಿದಾ ಆಗಿದ್ದ ಅಭಿಮಾನಿಗಳು

ಗಡ್ಡದ ಲುಕ್ ಗೆ ಫಿದಾ ಆಗಿದ್ದ ಅಭಿಮಾನಿಗಳು

ಲಾಕ್ ಡೌನ್ ಸಮಯದಲ್ಲಿ ಪುನೀತ್ ರಾಜ್ ಕುಮಾರ್ ಉದ್ದ ಗಡ್ಡ ಬಿಟ್ಟಿದ್ದರು. ಅಪ್ಪು ಹೊಸ ಸ್ಟೈಲ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಅಂದ್ಹಾಗೆ ಈ ದಾಡಿ ಲುಕ್ ಯುವರತ್ನ ಸಿನಿಮಾಗಾಗಿ ಎನ್ನುವುದು ಬಹಿರಂಗವಾಗಿದೆ. ಬಳಿಕ ಗಡ್ಡ ಶೇವ್ ಮಾಡಿ ಉದ್ದ ಮೀಸೆಯಲ್ಲಿ ಕಾಣಿಸಿಕೊಂಡಿದ್ದರು. ಯುವರತ್ನ ಸಿನಿಮಾ ಚಿತ್ರೀಕರಣ ಮುಗಿದ ಬಳಿಕ ಮೀಸೆಯನ್ನು ಶೇವ್ ಮಾಡಿ ಹಳೆ ಲುಕ್ ಗೆ ಮರಳಿದ್ದಾರೆ.

Recommended Video

6 ತಿಂಗಳ ನಂತರ ತೆರೆದ ಚಿತ್ರ ಮಂದಿರ | Filmibeat Kannada
ಜೇಮ್ಸ್ ಚಿತ್ರೀಕರಣದಲ್ಲಿ ಪುನೀತ್

ಜೇಮ್ಸ್ ಚಿತ್ರೀಕರಣದಲ್ಲಿ ಪುನೀತ್

ಪುನೀತ್ ಸದ್ಯ ಬಳ್ಳಾರಿ ಜಿಲ್ಲೆಯಲ್ಲಿದ್ದಾರೆ. ಜೇಮ್ಸ್ ಚಿತ್ರದ ಚಿತ್ರೀಕರಣ ಹೊಸಪೇಟೆ ತಾಲೂಕಿನ‌ ಕಮಲಾಪುರದ ಆರೆಂಜ್ ಕೌಂಟಿಯಲ್ಲಿ ನಡೆಯುತ್ತಿದೆ. ಮೊದಲು ನಾಲ್ಕು ದಿನ ಅಲ್ಲಿನ ರೆಸಾರ್ಟ್ ನಲ್ಲಿ ಶೂಟಿಂಗ್ ನಡೆಯಲಿದೆ. ನಂತರ ಗಂಗಾವತಿ ಬಳಿ ಚಿತ್ರೀಕರಣ ಮಾಡಲಿದ್ದಾರೆ. ಜೇಮ್ಸ್ ಚಿತ್ರಕ್ಕಾಗಿ ಗಂಗಾವತಿಯಲ್ಲಿ ಭವ್ಯ ಸೆಟ್ ಹಾಕಲಾಗಿದೆ. ಪುನೀತ್ ಗೆ ನಾಯಕಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ರಾಜಕುಮಾರ ಸಿನಿಮಾ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ.

More from Filmibeat

English summary
Yuvarathnaa movie's Puneeth Rajkumar New Beard Look In releasing on this Dasara.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X