»   » ಪುನೀತ್-ಹರ್ಷ ಚಿತ್ರಕ್ಕೆ ಟೈಟಲ್ ಫಿಕ್ಸ್!

ಪುನೀತ್-ಹರ್ಷ ಚಿತ್ರಕ್ಕೆ ಟೈಟಲ್ ಫಿಕ್ಸ್!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಹರ್ಷ.ಎ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಮೂಡಿ ಬರುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ.

ಸದ್ಯ, ಕಲಾವಿದರ ಆಯ್ಕೆ ಮುಗಿಸಿರುವ ನಿರ್ದೇಶಕ ಹರ್ಷ, ಚಿತ್ರದ ಟೈಟಲ್ ಏನೂ ಎಂಬುದು ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ, ಪುನೀತ್-ಹರ್ಷ ಜೋಡಿಯ ಹೊಸ ಚಿತ್ರದ ಟೈಟಲ್ ಫಿಕ್ಸ್ ಆಗಿದ್ದು, ನಿರ್ದೇಶಕ ಹರ್ಷ ಆಂಜನೇಯನ ಭಕ್ತ ಎಂಬುದನ್ನ ಮತ್ತೆ ಪ್ರೂವ್ ಮಾಡಿದ್ದಾರೆ.[ಪುನೀತ್ ರಾಜ್ ಕುಮಾರ್-ಹರ್ಷ ಮಹಾಸಂಗಮದ ಇಂಟ್ರೆಸ್ಟಿಂಗ್ ಡೀಟೈಲ್ಸ್]

Puneeth Rajkumar's Next Film Titled As A Anjaniputra

ಹೌದು, ತಮಿಳಿನ 'ಪೂಜೈ' ಚಿತ್ರದ ರೀಮೇಕ್ ಆಗಿರುವ ಈ ಚಿತ್ರಕ್ಕೆ ಕನ್ನಡದಲ್ಲಿ 'ಅಂಜನಿಪುತ್ರ' ಎಂಬ ಶೀರ್ಷಿಕೆ ಇಡಲಾಗಿದೆಯಂತೆ. [ಪವರ್ ಸ್ಟಾರ್ ಹೊಸ ಚಿತ್ರಕ್ಕೆ 'ಕಿರಿಕ್' ಸಾನ್ವಿ ನಾಯಕಿ!]

ಈಗಾಗಲೇ 'ಭಜರಂಗಿ', 'ವಜ್ರಕಾಯ', ಜೈ ಮಾರುತಿ 800 ಮಾಡಿದ್ದು, ಕಪಿಚೇಷ್ಟೆ ಚಿತ್ರವನ್ನ ಆರಂಭಿಸಿದ್ದಾರೆ. ಇದರ ಜೊತೆ 'ಮೈ ನೇಮ್ ಈಸ್ ಆಂಜಿ' ಎಂಬ ಚಿತ್ರವನ್ನ ಕೂಡ ಹರ್ಷ ಅನೌನ್ಸ್ ಮಾಡಿದ್ದಾರೆ. ಈ ಮಧ್ಯೆ ಪುನೀತ್ ರಾಜ್ ಕುಮಾರ್ ಚಿತ್ರಕ್ಕೂ ಮಾರುತಿ ಕೃಪಾಕಟಾಕ್ಷದಿಂದ 'ಅಂಜನಿ ಪುತ್ರ' ಎಂದು ಟೈಟಲ್ ಇಡಲಾಗಿದೆ.[ಪವರ್ ಸ್ಟಾರ್ ಮುಂದಿನ ಚಿತ್ರದಲ್ಲಿ ಬಹುಭಾಷಾ ನಟಿ ಅಭಿನಯ]

ಅಂದ್ಹಾಗೆ, ಪುನೀತ್ ರಾಜ್ ಕುಮಾರ್ ಗೆ 'ಕಿರಿಕ್ ಪಾರ್ಟಿ' ಹೀರೋಯಿನ್ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದು, ವಿಶೇಷ ಪಾತ್ರದಲ್ಲಿ ಬಹುಭಾಷಾ ನಟಿ ರಮ್ಯಾಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಎಂ.ಎನ್.ಕೆ ಮೂವೀಸ್ ಅಡಿಯಲ್ಲಿ ಎಂ.ಎನ್.ಕುಮಾರ್ ಮತ್ತು ಜಯಶ್ರೀ ದೇವಿ ಈ ಚಿತ್ರವನ್ನ ಜಂಟಿ ನಿರ್ಮಾಣ ಮಾಡುತ್ತಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಲಿದ್ದಾರೆ.

English summary
Puneeth Rajkumar starrer new film which is the remake of Tamil hit 'Poojai' has been titled as 'Anjaniputra'. the movie is directed by A Harsha and Produced by M.N.Kumar and Jayashree Devi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada