twitter
    For Quick Alerts
    ALLOW NOTIFICATIONS  
    For Daily Alerts

    ವರ್ಷದ ಹಿಂದೆ ಹೀಗಿತ್ತು; ಶಿವಣ್ಣ, ಉಪ್ಪಿ, ದುನಿಯಾ ವಿಜಯ್ ಜತೆ ನಗುಮೊಗದ 'ರಾಜಕುಮಾರ'

    |
    Puneeth Rajkumars old photos from Salaga pre release event are goes viral

    ಇದೇ ತಿಂಗಳ 29ಕ್ಕೆ ಪುನೀತ್ ರಾಜ್ ಕುಮಾರ್ ಇಹಲೋಕ ತ್ಯಜಿಸಿ ವರ್ಷ ಕಳೆಯಲಿದೆ. ಇನ್ನೇನು ಮೂರು ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಬರಲಿದೆ, ಅಪ್ಪು ಪ್ರತಿವರ್ಷದಂತೆ ಈ ವರ್ಷವೂ ಸಹ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋ ಮಾಡಿ ಪೋಸ್ಟ್ ಮಾಡಲಿದ್ದಾರೆ ಎಂಬುದು ಅಭಿಮಾನಿಗಳ ಮನದಲ್ಲಿತ್ತು.

    ಆದರೆ ಇದಕ್ಕೆ ದೇವರು ಅವಕಾಶ ನೀಡಲೇ ಇಲ್ಲ. ರಾಜ್ಯೋತ್ಸವಕ್ಕೆ 3 ದಿನ ಬಾಕಿ ಇರುವಾಗ ಅಪ್ಪು ಅಪಾರ ಅಭಿಮಾನಿಗಳನ್ನು ಬಿಟ್ಟು ಬಾರದ ಊರಿಗೆ ಪಯಣ ಬೆಳೆಸಿದ್ದರು. ಇನ್ನು ಅಪ್ಪು ನಿಧನಕ್ಕೂ ಮುನ್ನ ಹಲವು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅವುಗಳಲ್ಲಿ ಪ್ರಮುಖವಾಗಿ ಗಮನಸೆಳೆದದ್ದು ಭಜರಂಗಿ 2 ಹಾಗೂ ಸಲಗ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಗಳು.

    ಈ ಎರಡೂ ಪ್ರೀ ರಿಲೀಸ್ ಕಾರ್ಯಕ್ರಮಗಳಲ್ಲಿ ಶಿವರಾಜ್ ಕುಮಾರ್ ತಮ್ಮ ಪ್ರೀತಿಯ ಸೋದರ ಅಪ್ಪು ಜತೆ ವೇದಿಕೆ ಹಂಚಿಕೊಂಡಿದ್ದರು. ಭಜರಂಗಿ 2 ಪ್ರೀ ರಿಲೀಸ್ ಕಾರ್ಯಕ್ರಮ ಅಕ್ಟೋಬರ್ 26ರಂದು ಹಾಗೂ ಸಲಗ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಅಕ್ಟೋಬರ್ 11ರಂದು ನಡೆದಿತ್ತು. ಅಂದರೆ ನಿನ್ನೆಗೆ ( ಅಕ್ಟೋಬರ್ 11 ) ಸಲಗ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದು ವರ್ಷ ಕಳೆದಿದೆ.

    ಹೀಗೆ ವರ್ಷದ ಹಿಂದಿನ ಹಳೆಯ ಫೋಟೋಗಳು ಈ ಸಂದರ್ಭದಲ್ಲಿ ವೈರಲ್ ಆಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಪ್ಪು ಇತರೆ ಚಂದನವನದ ತಾರೆಯರ ಜತೆ ಎಂದಿನಂತೆ ನಗುನಗುತ್ತಾ ಸಮಯ ಕಳೆದಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪುನೀತ್ ಜೊತೆ ಶಿವಣ್ಣ ಹಾಗೂ ಉಪೇಂದ್ರ ಆಗಮಿಸಿದ್ದರು. ಚಿತ್ರದ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಖುದ್ದಾಗಿ ಅಪ್ಪು ಮನೆಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.

    ಇನ್ನು ಕೊನೆಯುಸಿರೆಳೆಯುವ ಕೆಲ ಗಂಟೆಗಳ ಮುನ್ನ ಭಜರಂಗಿ 2 ಚಿತ್ರಕ್ಕೆ ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದ ಅಪ್ಪು ಅದಕ್ಕೂ ಮುನ್ನ ಕೊನೆಯದಾಗಿ ಆಲ್ ದಿ ಬೆಸ್ಟ್ ಹೇಳಿದ್ದು ಇದೇ ಸಲಗ ಚಿತ್ರಕ್ಕಾಗಿ.

    English summary
    Puneeth Rajkumar's old photos from Salaga pre release event are goes viral
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X