twitter
    For Quick Alerts
    ALLOW NOTIFICATIONS  
    For Daily Alerts

    'ಪರಮಾತ್ಮ'ನಿಗೆ 11 ವರ್ಷ; ಇಂದಿಗೂ ಇದೆ ಹಿಟ್ಟಾ ಫ್ಲಾಪಾ ಎಂಬ ಗೊಂದಲ; ಕ್ರೇಜ್, ದಾಖಲೆ ಬಗ್ಗೆ ಕೆಮ್ಮಂಗಿಲ್ಲ!

    |

    'ಪರಮಾತ್ಮ' ಇದು ಕೇವಲ ಒಂದು ಚಿತ್ರವಲ್ಲ 'ಎಮೋಷನ್' ಎಂದು ಹೆಮ್ಮೆಯಿಂದ ಹೇಳುವವರೇ ಹೆಚ್ಚು. ಚಿತ್ರ ಬಿಡುಗಡೆಯಾದಾಗ ಅದಕ್ಕೆ ಸಿಗಬೇಕಿದ್ದ ಪ್ರಶಂಸೆ ಮತ್ತು ಯಶಸ್ಸು ಸಿಗದೇ ನಂತರದ ದಿನಗಳಲ್ಲಿ ಆ ಚಿತ್ರದ ಬೆಲೆ ಜನರಿಗೆ ಅರ್ಥವಾಗಿ ಇದೊಂದು 'ಮೋಸ್ಟ್ ಅಂಡರ್‌ರೇಟೆಡ್ ಸಿನಿಮಾ ಗುರು ಜನ ನೋಡಲಿಲ್ಲ ಅಷ್ಟೇ' ಎನಿಸಿಕೊಳ್ಳುವ ಚಿತ್ರಗಳಿವೆ. ಅದೇ ಸಾಲಿಗೆ ಸೇರುತ್ತೆ ಪುನೀತ್ ರಾಜ್‌ಕುಮಾರ್ ಹಾಗೂ ಯೋಗರಾಜ್ ಭಟ್ ಕಾಂಬಿನೇಶನ್‌ನ ಪರಮಾತ್ಮ.

    ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿ ಚಿತ್ರ ಅಷ್ಟಕ್ಕಷ್ಟೇ ಎಂದವರು ಹಾಗೂ ನೆಗೆಟಿವ್ ವಿಮರ್ಶೆಗಳನ್ನು ನಂಬಿ ಚಿತ್ರಮಂದಿರಕ್ಕೆ ತೆರಳದೇ ಉಳಿದುಕೊಂಡ ಬಹುತೇಕರು ಇಂದಿಗೂ ಸಹ ಪರಮಾತ್ಮ ಚಿತ್ರವನ್ನು ತಮ್ಮ ತಮ್ನ ಮೊಬೈಲ್ ಹಾಗೂ ಲ್ಯಾಪ್ ಟಾಪ್‌ಗಳಲ್ಲಿ ಇರಿಸಿಕೊಂಡು ಆಗಾಗ ವೀಕ್ಷಿಸುತ್ತಿರುತ್ತಾರೆ. ಹೀಗೆ ಬಿಡುಗಡೆಯಾದಾಗ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ವರ್ಷಗಳು ಕಳೆದಂತೆ ಜನರ ಮನಸ್ಸಿಗೆ ಹತ್ತಿರವಾದ ಪರಮಾತ್ಮ ಚಿತ್ರ ಬಿಡುಗಡೆಗೊಂಡು ಇಂದಿಗೆ ( ಅಕ್ಟೋಬರ್ 6 ) 11 ವರ್ಷಗಳು ಕಳೆದಿವೆ.

    ಹೀಗೆ ಹನ್ನೊಂದು ವರ್ಷಗಳನ್ನು ಪೂರೈಸಿರುವ ಪರಮಾತ್ಮ ಚಿತ್ರದ ಕುರಿತು ಅಪ್ಪು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ ಚಿತ್ರದ ವಿಶೇಷತೆಗಳೇನು, ಚಿತ್ರ ಮಾಡಿದ ದಾಖಲೆಗಳೇನು ಎಂಬುದನ್ನು ಮೆಲುಕು ಹಾಕುತ್ತಿದ್ದಾರೆ. ಇನ್ನು ಪರಮಾತ್ಮ ಚಿತ್ರದ ಕ್ರೇಜ್ ಹೇಗಿತ್ತು, ಬಿಡುಗಡೆಗೂ ಮುನ್ನ ಸಿನಿಮಾ ಮಾಡಿದ್ದ ದಾಖಲೆಗಳೇನು ಹಾಗೂ ಇಂದಿಗೂ ಚಿತ್ರದ ಫಲಿತಾಂಶದ ಬಗ್ಗೆ ಗೊಂದಲ ಯಾವ ರೀತಿ ಇದೆ ಎಂಬುದರ ಕುರಿತ ಕಿರು ವಿವರ ಈ ಕೆಳಕಂಡಂತಿದೆ.

    ಪರಮಾತ್ಮ ರಿಲೀಸ್‌ಗೂ ಮುನ್ನ ಹುಟ್ಟುಹಾಕಿದ್ದ ಕ್ರೇಜ್ ಅಷ್ಟಿಷ್ಟಲ್ಲ

    ಪರಮಾತ್ಮ ರಿಲೀಸ್‌ಗೂ ಮುನ್ನ ಹುಟ್ಟುಹಾಕಿದ್ದ ಕ್ರೇಜ್ ಅಷ್ಟಿಷ್ಟಲ್ಲ

    ಇನ್ನು ಪರಮಾತ್ಮ ಸಿನಿಮಾ ಬಿಡುಗಡೆಗೂ ಮುನ್ನ ಭರ್ಜರಿ ಕ್ರೇಜ್ ಹುಟ್ಟುಹಾಕಿತ್ತು. ಚಿತ್ರ ಬಿಡುಗಡೆ ದಿನ ಮಾಧ್ಯಮದ ಮುಂದೆ ಅಭಿಮಾನಿಗಳು ಬಂದು ಬೆಳಗ್ಗಿನ ಜಾವದಿಂದ ಚಿತ್ರಮಂದಿರದ ಮುಂದೆ ಕಾಯುತ್ತಿದ್ದೇನೆ ಟಿಕೆಟ್ ಸಿಗುತ್ತಿಲ್ಲ ಎಂಬ ಹೇಳಿಕೆಗಳನ್ನು ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದವು. ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದ ಪುನೀತ್ ಹಾಗೂ ಯೋಗರಾಜ್ ಭಟ್ ಮೊದಲ ಬಾರಿಗೆ ಕೈಜೋಡಿಸಿದ್ದ ಕಾರಣ ಚಿತ್ರದ ಮೇಲೆ ಬೃಹತ್ ನಿರೀಕ್ಷೆಯನ್ನು ಹುಟ್ಟಿಸಿತ್ತು. ಪರಮಾತ್ಮ ಬಿಡುಗಡೆ ದಿನದ ಕ್ರೇಜ್ ಕುರಿತಾದ ಸುದ್ದಿ ಆಂಧ್ರ ಪ್ರದೇಶದ ಸುದ್ದಿ ವಾಹಿನಿಗಳಲ್ಲಿಯೂ ಸಹ ಪ್ರಸಾರವಾಗಿತ್ತು. ಹೀಗೆ ಹನ್ನೊಂದು ವರ್ಷದ ಹಿಂದೆಯೇ ಕನ್ನಡ ಸಿನಿಮಾವೊಂದು ಬಿಡುಗಡೆ ದಿನ ಅಬ್ಬರಿಸಿತ್ತು.

    ಆಡಿಯೊ, ಸ್ಯಾಟಲೈಟ್ ದಾಖಲೆ

    ಆಡಿಯೊ, ಸ್ಯಾಟಲೈಟ್ ದಾಖಲೆ

    ಪರಮಾತ್ಮ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಹಾಡುಗಳು. ಚಿತ್ರದ ಸಂಪೂರ್ಣ ಆಲ್ಬಮ್ ಚಾರ್ಟ್‌ಬಸ್ಟರ್ ಹಿಟ್ ಆಗಿತ್ತು. ಎಲ್ಲಿ ನೋಡಿದರಲ್ಲಿ ಪರಮಾತ್ಮ ಹಾಡುಗಳ ಹಾವಳಿ ಶುರುವಾಗಿತ್ತು. ಇಂದಿಗೂ ಸಹ ಈ ಹಾಡುಗಳ ಕೇಳುಗರ ಸಂಖ್ಯೆ ಕಡಿಮೆಯೇನಿಲ್ಲ. ಹೀಗೆ ದೊಡ್ಡ ಮಟ್ಟದ ಹಿಟ್ ಆಗಿದ್ದ ಪರಮಾತ್ಮ ಚಿತ್ರದ ಆಡಿಯೊ ಹಕ್ಕು 77 ಲಕ್ಷಕ್ಕೆ ಮಾರಾಟವಾಗಿತ್ತು. ಆಡಿಯೊ ಬಿಡುಗಡೆಯಾದ ಮೊದಲ 3 ದಿನಗಳಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಆಡಿಯೊ ಸಿಡಿಗಳು ಮಾರಾಟವಾಗಿದ್ದವು. ಇನ್ನು ಚಿತ್ರದ ಸ್ಯಾಟಲೈಟ್ ಹಕ್ಕು 3ರಿಂದ 4 ಕೋಟಿಗೆ ಮಾರಾಟವಾಗಿತ್ತು ಹಾಗೂ ಅಂದಿಗೆ ಇದು ದಾಖಲೆ ಕೂಡ ಹೌದು.

    ಇಂದಿಗೂ ಇದೆ ಹಿಟ್ ಫ್ಲಾಪ್ ಪ್ರಶ್ನೆ

    ಇಂದಿಗೂ ಇದೆ ಹಿಟ್ ಫ್ಲಾಪ್ ಪ್ರಶ್ನೆ

    ಪರಮಾತ್ಮ ಬಿಡುಗಡೆಯಾದಾಗ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಚಿತ್ರ ನಿರೀಕ್ಷಿಸಿದ ಗೆಲುವನ್ನು ಕಾಣಲಿಲ್ಲ ಎಂಬ ಫಲಿತಾಂಶ ಸಿಕ್ಕಿತ್ತು. ಆದರೆ ಪರಮಾತ್ಮ ಚಿತ್ರಕ್ಕೆ ಅಪಾರವಾದ ಅಭಿಮಾನಿ ಬಳಗವಿದೆ. ಹೀಗಾಗಿಯೇ ಪರಮಾತ್ಮ ಹಿಟ್ಟಾ ಅಥವಾ ಫ್ಲಾಪಾ ಎಂಬ ಗೊಂದಲವಿದೆ. ಪರಮಾತ್ಮನ ಚಿತ್ರದ ಗಳಿಕೆ ಬಗ್ಗೆ ಹುಡುಕಿದಾಗ ಗೂಗಲ್ ಕೂಡ ಪರಮಾತ್ಮ ಹಿಟ್ಟಾ ಅಥವಾ ಫ್ಲಾಪಾ ಎಂಬುದನ್ನು ತಿಳಿಯಿರಿ ಎಂಬ ಸಲಹೆಯನ್ನು ನೀಡುತ್ತದೆ. ಈ ಮೂಲಕ ಪರಮಾತ್ಮ ಹಿಟ್ಟಾ ಅಥವಾ ಫ್ಲಾಪಾ ಎಂದು ಗೊಂದಲದಲ್ಲಿ ಗೂಗಲ್‌ನಲ್ಲಿ ಹುಡುಕಿದವರ ಸಂಖ್ಯೆ ಹೆಚ್ಚಿದೆ ಎಂಬುದು ತಿಳಿಯುತ್ತದೆ. ಹೀಗೆ ಬಿಡುಗಡೆಯಾದಾಗ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ ಅರ್ಧಶತಕ ಬಾರಿಸಿದ್ದ ಪರಮಾತ್ಮ ಅಂದು ಮಿಶ್ರ ಪ್ರತಿಕ್ರಿಯೆ ಪಡೆದು ನಂತರದ ದಿನಗಳಲ್ಲಿ ಜನರ ಮನಸ್ಸನ್ನು ಗೆದ್ದು ಅಪಾರವಾದ ಸಿನಿ ಪ್ರಿಯರ ಮನಸ್ಸಿನಲ್ಲಿ ಹಿಟ್ ಚಿತ್ರವಾಗಿ ಉಳಿದುಕೊಂಡಿದೆ.

    English summary
    Puneeth Rajkumar's Paramathma completes 11 years today. Checkout records.
    Thursday, October 6, 2022, 16:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X