»   » ಅಣ್ಣನ ಚಿತ್ರದ ಹಾಡಿಗೆ ಮುದ್ದು ತಮ್ಮನಿಂದ, ಪವರ್ ಫುಲ್ ವಾಯ್ಸ್

ಅಣ್ಣನ ಚಿತ್ರದ ಹಾಡಿಗೆ ಮುದ್ದು ತಮ್ಮನಿಂದ, ಪವರ್ ಫುಲ್ ವಾಯ್ಸ್

Posted By:
Subscribe to Filmibeat Kannada

ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಗೆ ತಯಾರಾಗಿದ್ದು, ಅಕ್ಟೋಬರ್ 25 ನೇ ತಾರೀಖಿನಂದು ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ.

ಕಾಡುಗಳ್ಳ ವೀರಪ್ಪನ್ ಅವರ ನಿಜ ಜೀವನ ಚರಿತ್ರೆಯಾಧರಿತ ಕಥೆಯನ್ನು ಹೊಂದಿದ 'ಕಿಲ್ಲಿಂಗ್ ವೀರಪ್ಪನ್' ಎರಡು ಭಾಷೆಗಳಲ್ಲಿ (ಕನ್ನಡ, ತೆಲುಗು) ತೆರೆ ಕಾಣಲಿದೆ.

ಇದೀಗ ಈ ಚಿತ್ರದಿಂದ ಬಂದಿರುವ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಮುದ್ದಿನ ಅಣ್ಣ (ಶಿವರಾಜ್ ಕುಮಾರ್) ನಟಿಸಿರುವ ಚಿತ್ರದ ಹಾಡೊಂದಕ್ಕೆ ತಮ್ಮ ಧ್ವನಿ ನೀಡಿದ್ದಾರೆ.['ಕಿಲ್ಲಿಂಗ್ ವೀರಪ್ಪನ್' ಚಿತ್ರ ಬಿಡುಗಡೆಗೆ ಮುತ್ತುಲಕ್ಷ್ಮಿ ನಕ್ರಾ?]

shiva rajkumar

ಈ ಬಗ್ಗೆ ನಿರ್ದೇಶಕ ಆರ್ ಜಿ ವಿ ಅವರು ಪುನೀತ್ ರಾಜ್ ಕುಮಾರ್ ತಮ್ಮ ಚಿತ್ರಕ್ಕೆ ಹಾಡಿರುವ ಫೊಟೋಗಳನ್ನು ತಮ್ಮ ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಸ್ಪೆಷಲ್ ಆಫೀಸರ್ ಪಾತ್ರ ವಹಿಸಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಪಾರುಲ್ ಯಾದವ್, ಯಜ್ಞಾ ಶೆಟ್ಟಿ, ನಿರ್ದೇಶಕ ಗಡ್ಡಾ ವಿಜಿ, ಸಂದೀಪ್ ಭಾರದ್ವಾಜ್ ಮುಂತಾದವರು ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ.[ವೀರಪ್ಪನ್ ಬೇಟೆಗೆ ಸಜ್ಜಾದ ಶಿವಣ್ಣ ತಂಡ]

ನವೆಂಬರ್ 6 ರಂದು ಇಡೀ ಪ್ರಪಂಚದಾದ್ಯಂತ ಸುಮಾರು 3000 ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. 'ವಜ್ರಕಾಯ' ಭರ್ಜರಿ ಯಶಸ್ಸಿನ ನಂತರ ಶಿವಣ್ಣ ಅವರಿಗೆ 'ಕಿಲ್ಲಿಂಗ್' ವೀರಪ್ಪನ್' 2015ಕ್ಕೆ ಬಿಗ್ ಹಿಟ್ ಸಿನಿಮಾವಾಗುತ್ತಾ ಅಂತಾ ಕಾದು ನೋಡಬೇಕು.

English summary
Powerstar Puneeth Rajkumar has completed singing a powerful song for Killing Veerappan. The movie features Kannada Actor Shiva Rajkumar, Kannada Actress Parul Yadav, Actress Yagna Shetty in the lead role. The movie is directed by Ram Gopal Varma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada