ಪುನೀತ್ ನಿರ್ಮಾಣದ ಎರಡನೇ ಚಿತ್ರಕ್ಕೆ ಟೈಟಲ್ ಫಿಕ್ಸ್
ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾ 'ಕವಲುದಾರಿ' ಚಿತ್ರೀಕರಣ ಸದ್ಯ ನಡೆಯುತ್ತಿದೆ. ಅದರ ಹಿಂದೆಯೇ ಈಗ ಪುನೀತ್ ತಮ್ಮ ಬ್ಯಾನರ್ ನಲ್ಲಿ ಎರಡನೇ ಸಿನಿಮಾ ಶುರುಮಾಡಿದ್ದು, ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ.
ಪುನೀತ್ ಚಿತ್ರಕ್ಕೆ 'ಮಯಾಬಜರ್' ಎಂಬ ಹೆಸರನ್ನು ಇಡಲಾಗಿದೆ. 'ಮಯಾಬಜರ್' ಎನ್ನುವ ಟೈಟಲ್ ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ. ಇದೇ ತಿಂಗಳ 24ರಂದು ಈ ಹೊಸ ಚಿತ್ರ ಸೆಟ್ಟೇರಲಿದೆ. ನಿರ್ದೇಶಕ ರಾಧಕೃಷ್ಣ ಎನ್ನುವವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. 'ಒಂದು ಮೊಟ್ಟಯ ಕಥೆ' ಖ್ಯಾತಿಯ ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ ಹಾಗೂ ಅಚ್ಚುತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲಿದ್ದು, ಪ್ರಕಾಶ್ ರೈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಈ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿ ಬ್ಯುಸಿ ಆಗಿದೆ. ಮಿಧುನ್ ಮುಕುಂದನ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡುತ್ತಿದ್ದು, ಅಭಿಷೇಕ್ ಕಾಸರಗೋಡು ಕ್ಯಾಮೆರಾ ವರ್ಕ್ ಮಾಡಲಿದ್ದಾರೆ. ಈ ಹಿಂದೆ ಕಿರುಚಿತ್ರ ನಿರ್ದೇಶನ ಮಾಡಿ ಅನುಭವ ಇರುವ ರಾಧಕೃಷ್ಣ ಪಿ ಆರ್ ಕೆ ಬ್ಯಾನರ್ ಮೂಲಕ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.


Click it and Unblock the Notifications











