»   » ವಾವ್.! ಮೊದಲ ಹಂತದ ಶೂಟಿಂಗ್ ಮುಗಿಸಿದ ಪುನೀತ್ ರ 'ರಾಜಕುಮಾರ'

ವಾವ್.! ಮೊದಲ ಹಂತದ ಶೂಟಿಂಗ್ ಮುಗಿಸಿದ ಪುನೀತ್ ರ 'ರಾಜಕುಮಾರ'

Posted By:
Subscribe to Filmibeat Kannada

ಕಳೆದ ವರ್ಷ ಸೆಟ್ಟೇರಿದ್ದ ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಸಿನಿಮಾ ಕಳೆದ ತಿಂಗಳು ಶೂಟಿಂಗ್ ಗೆ ಚಾಲನೆ ನೀಡಿತ್ತು. ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾ ಆನಂದ್, ಪುನೀತ್ ರಾಜ್ ಕುಮಾರ್ ಮತ್ತು ಚಿತ್ರತಂಡದವರ ಜೊತೆ ಆಸ್ಟ್ರೇಲಿಯಾಗೆ ಹಾರಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಫಸ್ಟ್ ಹಾಫ್ ಶೂಟಿಂಗ್ ಮುಗಿಸಿದ ಸಂತಸದಲ್ಲಿದ್ದಾರೆ.[ಆಸ್ಟ್ರೇಲಿಯಾಗೆ ಹಾರಿದ ಪುನೀತ್ ರ 'ರಾಜಕುಮಾರ' ಚಿತ್ರತಂಡ]

Puneeth Rajkumar's 'Rajakumara' completes first schedule

ಹೌದು ಮೊನ್ನೆ ಮೊನ್ನೆ ಆಸ್ಟ್ರೇಲಿಯಾಗೆ ವಿಮಾನ ಹತ್ತಿದ್ದ 'ರಾಜಕುಮಾರ' ಚಿತ್ರತಂಡದವರು ಇದೀಗ ಮೊದಲ ಹಂತದ ಚಿತ್ರೀಕರಣವನ್ನು ಭರ-ಭರನೇ ಮುಗಿಸಿದ್ದಾರೆ. ಫಸ್ಟ್ ಹಾಫ್ ಚಿತ್ರೀಕರಣ ಕಂಪ್ಲೀಟ್ ಆದ ಸಂಭ್ರಮವನ್ನು ಖುದ್ದು ಸಂತೋಷ್ ಆನಂದ್ ರಾಮ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ.[ಅಪ್ಪು ಹುಟ್ಟುಹಬ್ಬಕ್ಕೆ ಇದಕ್ಕಿಂತ ಉಡುಗೊರೆ ಬೇಕಾ?]


Puneeth Rajkumar's 'Rajakumara' completes first schedule

ಮುಂದಿನ ಹಂತದ ಶೂಟಿಂಗ್ ಅನ್ನು ಬೆಂಗಳೂರಿನಲ್ಲಿ ನಡೆಸಲು ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ. ತದನಂತರ ಇಡೀ 'ರಾಜಕುಮಾರ' ತಂಡ ಮೈಸೂರು, ಗೋವಾ, ವಾರಾಣಾಸಿ ಅಂತ ಚಿತ್ರೀಕರಣಕ್ಕಾಗಿ ಟ್ರಿಪ್ ಹೊಡೆಯಲಿದೆ.[ಪುನೀತ್ ಅವರ 'ರಾಜಕುಮಾರ'ದಲ್ಲಿ ಎರಡು ಕಥೆ ಇದೆಯಂತೆ]


Puneeth Rajkumar's 'Rajakumara' completes first schedule

ಇನ್ನುಳಿದಂತೆ ಚಿತ್ರದಲ್ಲಿ ತಮಿಳು ನಟ ಶರತ್ ಕುಮಾರ್ ಅವರು ಪುನೀತ್ ಅವರ ತಂದೆಯ ಪಾತ್ರದಲ್ಲಿ ಮಿಂಚಲಿದ್ದಾರೆ. ಅಲ್ಲದೇ ಬಹುಭಾಷಾ ನಟ ಪ್ರಕಾಶ್ ರೈ, ಕಾಮಿಡಿ ನಟ ಚಿಕ್ಕಣ್ಣ, ಸಾಧು ಕೋಕಿಲ, ರಂಗಾಯಣ ರಘು ಮತ್ತು ರಾಕ್ ಲೈನ್ ಸುಧಾಕರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

English summary
Kannada Actor Puneeth Rajkumar and Actress Priya Anand starrer Kannada Movie 'Rajakumara' has completed its first schedule of shooting in Australia. The next schedule is slated for Bengaluru. The movie is directed by Director Santhosh Ananddram, who is helming his second project after delivering a blockbuster debut 'Mr.and Mrs. Ramachari'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada