»   » 'ರಾಜಕುಮಾರ' ಚಿತ್ರದ ಚಿತ್ರೀಕರಣ ಮುಕ್ತಾಯ!

'ರಾಜಕುಮಾರ' ಚಿತ್ರದ ಚಿತ್ರೀಕರಣ ಮುಕ್ತಾಯ!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ರಾಜಕುಮಾರ' ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ.

ಸದ್ಯ, ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಸಿಕೊಂಡಿರುವ 'ರಾಜಕುಮಾರ' ಸದ್ಯದಲ್ಲೇ ತೆರೆಮೇಲೆ ಬರಲು ತಯಾರಿ ನಡೆಸುತ್ತಿದೆ. ಎಲ್ಲ ಅಂದು ಕೊಂಡಂತೆ ಆದ್ರೆ, ರಾಜಕುಮಾರ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಫೆಬ್ರವರಿ 24 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ.[ಪುನೀತ್ 'ರಾಜಕುಮಾರ' ಹೈ ವೋಲ್ಟೇಜ್ ಟೀಸರ್ ಔಟ್]

Puneeth RajKumar's Rajakumara Movie Shooting Complete

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಖ್ಯಾತಿಯ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ರಾಜಕುಮಾರ' ಈಗಾಗಲೇ ಎರಡು ವಿಭಿನ್ನ ಟೀಸರ್ ಗಳ ಮೂಲಕ ಗಮನ ಸೆಳೆದಿದೆ. ಇನ್ನೂ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಗೆಟಪ್ ಗಳಂತೂ ಚಿತ್ರದ ಬಗ್ಗೆ ಹೈ-ಎಕ್ಸ್ ಪೆಕ್ಟೇಶನ್ ಹುಟ್ಟಿಹಾಕಿದೆ.[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!]

Puneeth RajKumar's Rajakumara Movie Shooting Complete

ಇನ್ನೂ ಇತ್ತೀಚೆಗೆ ಚಿತ್ರದ ಡಬ್ಬಿಂಗ್ ನಡೆಯುತ್ತಿದ್ದ ವೇಳೆ ಭೇಟಿ ನೀಡಿದ್ದ ಜಗ್ಗೇಶ್ ಅವರು, 'ರಾಜಕುಮಾರ' ಚಿತ್ರದ ಇಂಟರ್ ವಲ್ ಸೀನ್ ನೋಡಿ ಅತ್ಯುತ್ತಮ ಎಂದು ಕಾಮೆಂಟ್ ಮಾಡಿದ್ದರು. ಹೀಗೆ, ಚಿತ್ರದ ತಯಾರಾಗುತ್ತಿರುವಾಗಲೇ ಇಷ್ಟೆಲ್ಲಾ ವಿಶೇಷತೆಗಳನ್ನ ಒಳಗೊಂಡಿರುವ 'ರಾಜಕುಮಾರ' ಈಗ ಶೂಟಿಂಗ್ ಪ್ಯಾಕಪ್ ಮಾಡಿ, ತೆರೆಗೆ ಬರುವ ಸಿದ್ದತೆ ಮಾಡುತ್ತಿದೆ.['ರಾಜಕುಮಾರ'ನ ಇಂಟರ್ ವಲ್ ದೃಶ್ಯ ನೋಡಿ ರೋಮಾಂಚನಗೊಂಡ ಜಗ್ಗೇಶ್! ]

Puneeth RajKumar's Rajakumara Movie Shooting Complete

ಅಂದ್ಹಾಗೆ, 'ರಾಜಕುಮಾರ' ಚಿತ್ರ ಬಹುದೊಡ್ಡ ತಾರಬಳಗ ಹೊಂದಿದೆ. ಸೌತ್ ಸುಂದರಿ ಪ್ರಿಯಾ ಆನಂದ್, ಇದೇ ಮೊದಲ ಭಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚೊಚ್ಚಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಕಾಣಿಸಿಕೊಡಿದ್ದಾರೆ. ಬಹುಭಾಷ ನಟ ಪ್ರಕಾಶ್ ರೈ, ತಮಿಳು ನಟ ಶರತ್ ಕುಮಾರ್, ಅನಂತ್ ನಾಗ್, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು, ದತ್ತಣ್ಣ ಹಾಗೂ 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದುರಂತದಲ್ಲಿ ಸಾವುಗೀಡಾಗಿದ್ದ ಖಳನಟ ಅನಿಲ್ ಸೇರಿದಂತೆ ಹಲವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

English summary
Kannada Actor Puneeth Rajkumar Starrer Kannada Movie 'Rajakumara' Shooting Complete.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada