For Quick Alerts
  ALLOW NOTIFICATIONS  
  For Daily Alerts

  "ಒಂದು ಕಡೆ ಬೇಸರ.. ಮತ್ತೊಂದು ಕಡೆ ಖುಷಿ ಕೂಡ ಇದೆ": ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೊದಲ ಸಂದರ್ಶನ

  |

  ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಕನಸಿನ ಸಿನಿಮಾ 'ಗಂಧದಗುಡಿ' ಬಿಡುಗಡೆಗೆ ಇನ್ನೊಂದು ದಿನ ಬಾಕಿ ಇರೋದು. ಈಗಾಗಲೇ ಆನ್‌ಲೈನ್‌ನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಪ್ರೀಮಿಯರ್‌ ಶೋಗಳ ಟಿಕೆಟ್ಸ್ ಸೋಲ್‌ಔಟ್ ಆಗಿದೆ. ಕೆಲವೇ ಗಂಟೆಗಳಲ್ಲಿ ಅಭಿಮಾನಿಗಳು ಅಪ್ಪುನ ಕೊನೆ ಬಾರಿ ತೆರೆ ಮೇಲೆ ಕಣ್ತುಂಬಿಕೊಳ್ಳಬಹುದು. ಇನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೊದಲ ಬಾರಿಗೆ ಸಿನಿಮಾ ಬಗ್ಗೆ ಮತನಾಡಿದ್ದಾರೆ.

  ಪತಿ ಅಗಲಿಕೆಯ ನೋವಿನಿಂದ ಇನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊರಬಂದಿಲ್ಲ. ಕಳೆದೊಂದು ವರ್ಷದಿಂದ ಅಪ್ಪು ನೆನೆದು ಕಣ್ಣೀರು ಹಾಕದ ದಿನವಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅಶ್ವಿನಿ ವೇದಿಕೆ ಏರಿದರೂ ಎಲ್ಲೂ ಮಾತನಾಡಿರಲಿಲ್ಲ. ಬಹುತೇಕ ವೇದಿಕೆಗಳಲ್ಲಿ ಮೈಕ್‌ ಹಿಡಿದು ಧನ್ಯವಾದ ಹೇಳಿ ಮಾತು ಮುಗಿಸಿದ್ದರು. ಕಳೆದ ವಾರ ನಡೆದ 'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಮಾತನಾಡುವ ನಿರೀಕ್ಷೆ ಇತ್ತು. ಆದರೆ ಮಾತನಾಡಲಿಲ್ಲ. ಕುಟುಂಬ ಸದಸ್ಯರೆಲ್ಲಾ 'ಬೊಂಬೆ ಹೇಳುತೈತೆ' ಹಾಡು ಹಾಡುತ್ತಿದ್ದಂತೆ ದುಃಖ ಉಮ್ಮಳಿಸಿ ಅಳುತ್ತಲೇ ವೇದಿಕೆಯಿಂದ ಹೊರಟುಬಿಟ್ಟಿದ್ದರು.

  ಅಪ್ಪು ಎಪಿಕ್ ಜರ್ನಿ 'ಗಂಧದಗುಡಿ' ಎಷ್ಟು ನಿಮಿಷಗಳ ಚಿತ್ರ? ಇಂಟರ್‌ವೆಲ್ ಇರುತ್ತಾ?ಅಪ್ಪು ಎಪಿಕ್ ಜರ್ನಿ 'ಗಂಧದಗುಡಿ' ಎಷ್ಟು ನಿಮಿಷಗಳ ಚಿತ್ರ? ಇಂಟರ್‌ವೆಲ್ ಇರುತ್ತಾ?

  ಅಶ್ವಿನಿ ಪುನೀತ್ ರಾಜ್‌ಕುಮಾರ್ ಇದುವರೆಗೆ ಯಾವುದೇ ಸಂದರ್ಶನದಲ್ಲಿ ಮಾತನಾಡಿರಲಿಲ್ಲ. ಹಿಂದೆ ಜಾಹೀರಾತು ಒಂದಕ್ಕೆ ಅಪ್ಪು ಜೊತೆ ಸೇರಿ ಮಾತನಾಡಿದ್ದು ಬಿಟ್ಟರೆ ಮಾಧ್ಯಮಗಳ ಸಂದರ್ಶನಗಳಿಂದ ಸದಾ ದೂರವೇ ಉಳಿದಿದ್ದರು. 'ಗಂಧದಗುಡಿ' ರಿಲೀಸ್ ಹೊಸ್ತಿಲಲ್ಲಿ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸಿನಿಮಾ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಂದರ್ಶನ ಮಾಡಿದ್ದಾರೆ. ಪಿಆರ್‌ಕೆ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಅದು ಅಪ್‌ಲೋಡ್ ಆಗಿದೆ. 'ಗಂಧದಗುಡಿ' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವುದರಿಂದ ಅಶ್ವಿನಿ ಮಾತನಾಡಿದ್ದಾರೆ.

  'ಪುನೀತ ಪರ್ವ'ದ ಬಗ್ಗೆ ಮೊದಲ ಮಾತು

  'ಪುನೀತ ಪರ್ವ'ದ ಬಗ್ಗೆ ಮೊದಲ ಮಾತು

  ಪಿಆರ್‌ಕೆ ಪ್ರೊಡಕ್ಷನ್ ಹಾಗೂ ಮಡ್‌ಸ್ಕಿಪರ್ ಬ್ಯಾನರ್‌ನಲ್ಲಿ ಈ ವೈಲ್ಡ್ ಡಾಕ್ಯು ಸಿನಿಮಾ ನಿರ್ಮಾಣ ಆಗಿದೆ. 'ಪುನೀತ ಪರ್ವ' ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ಸಂದರ್ಶನ ಆರಂಭವಾಗಿದೆ. "'ಪುನೀತ ಪರ್ವ' ಮಾಡಿದ್ದು ಅಭಿಮಾನಿಗಳಿಗಾಗಿ. ಒಂದು ಲಕ್ಷಕ್ಕೂ ಹೆಚ್ಚು ಜನ ಬಂದಿದ್ದರು. ಎಲ್ಲಾ ಇಂಡಸ್ಟ್ರಿಯವರು ಬಂದು ಬೆಂಬಲ ಸೂಚಿಸಿದರು. ಮನಸ್ಸು ತುಂಬಿ ಬಂತು, ಅಪ್ಪು ಲಾಸ್ಟ್ ಈವೆಂಟ್ ಸಕ್ಸಸ್ ಆಯ್ತು ಎನ್ನುವ ಖುಷಿ ಕೂಡ ಆಯಿತು. ಅಭಿಮಾನಿಗಳಿಗೆ ನಾವು ನಮ್ಮ ಕುಟುಂಬ ಯಾವಾಗಲೂ ಚಿರಋಣಿ ಆಗಿರುತ್ತದೆ. ಅಭಿಮಾನಿಗಳು, ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು" ಎಂದಿದ್ದಾರೆ.

  "ಚಿತ್ರದಲ್ಲಿ ಅಪ್ಪಗೆ ಮೇಕಪ್ ಇರಲಿಲ್ಲ"

  "ಅಪ್ಪಾಜಿ ಹಾಗೂ ಶಿವಣ್ಣ 'ಗಂಧದಗುಡಿ' ಟೈಟಲ್‌ನಲ್ಲಿ ಸಿನಿಮಾ ಮಾಡಿದ್ದರು. ಚರ್ಚೆಯ ವೇಳೆ 'ಗಂಧದಗುಡಿ' ಇಡಬೇಕು ಎಂದು ತೀರ್ಮಾನಿಸಲಾಯಿತು. ಇಲ್ಲಿ ಹೀಗೆ ಮಾಡಬೇಕು ಹಾಗೆ ಮಾಡಬೇಕು ಎಂದು ಶೂಟ್ ಮಾಡಿಲ್ಲ. ಅಪ್ಪು ಜರ್ನಿಯನ್ನು ಸೆರೆಹಿಡಿಯಲಾಗಿದೆ. ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಕರ್ನಾಟಕವನ್ನು ತಮ್ಮ ಮೂಲಕ ತೋರಿಸಬೇಕು ಎನ್ನುವ ಅವರ ಕನಸಿನ ಬಗ್ಗೆ ಹೆಮ್ಮೆ ಇದೆ. 'ಗಂಧದಗುಡಿ' ಚಿತ್ರವನ್ನು ತೆರೆಮೇಲೆ ನೋಡಿದಾಗ ಅವರು ಅವರಾಗಿಯೇ ಇದ್ದರು. ಮೇಕಪ್ ಇರಲಿಲ್ಲ, ಜಾಸ್ತಿ ಜನ ಇರಲಿಲ್ಲ. ಪ್ರತಿ ಶೆಡ್ಯೂಲ್‌ಗೆ ಹೋಗುವಾಗ ಬಹಳ ಖುಷಿಯಾಗಿ ಇರುತ್ತಿದ್ದರು".

  ಅಪ್ಪು ಜೊತೆ 'ಗಂಧದಗುಡಿ'ಯಲ್ಲಿ ಅಶ್ವಿನಿ

  ಅಪ್ಪು ಜೊತೆ 'ಗಂಧದಗುಡಿ'ಯಲ್ಲಿ ಅಶ್ವಿನಿ

  ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟ, ಮುರುಡೇಶ್ವರ ನೇತ್ರಾಣಿ, ಕಾಳಿ ನದಿ ಗಾಜನೂರು ಸೇರಿದಂತೆ ಹಲವೆಡೆ ಈ ಡಾಕ್ಯುಡ್ರಾಮ ಚಿತ್ರೀಕರಣ ಆಗಿದೆ. "ನಾನು ಕಾಳಿ ನದಿ ಬಳಿ ಟ್ರೆಕ್ಕಿಂಗ್ ವೇಳೆ ಹೋಗಿದ್ದೆ. ಕಾಳಿ ನದಿ ಹತ್ತಿರ ಬಂದಿದ್ದೀವಿ. ಈ ಫೋನ್ ಕಾಲ್ ಮಾಡಲು ಬೆಟ್ಟ ಹತ್ತಬೇಕಾಯಿತು, ಅವತ್ತು ಇಡೀ ದಿನ ಮಾತನಾಡಿರಲಿಲ್ಲ. ಈ ಕಾಲ್ ಮಾಡೋಕೆ ಬೆಟ್ಟ ಹತ್ತಬೇಕಾಯಿತು ಎಂದರು, ನೀನು ಬರಲೇಬೇಕು, ನಾಳೆ ಬೆಳಗ್ಗೆ ಇಲ್ಲಿ ಇರಬೇಕು ಎಂದರು. 2 ದಿನ ಆದಮೇಲೆ ಹೋಗಿದ್ದೆ.ಟೈಗರ್ ರಿಸರ್ವ್ ಪಾಯಿಂಟ್‌ಗೆ ಪರ್ಮಿಷನ್ ಸಿಕ್ಕಿದೆ ಎಂದರು. ನಾನು ಹೋಗಿದ್ದೆ. ಬೆಳಗ್ಗೆ 4.30ಕ್ಕೆ ಟ್ರಕ್ಕಿಂಗ್ ಮಾಡಿದ್ವಿ" ಎಂದು ಅಶ್ವಿನಿ ಆ ದಿನವನ್ನು ನೆನಪಿಸಿಕೊಂಡಿದ್ದಾರೆ. ಹಾಗಾಗಿ ತೆರೆಮೇಲೆ ಅಪ್ಪು ಜೊತೆ ಅಶ್ವಿನಿ ಕೂಡ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.

  'ಗಂಧದಗುಡಿ' ನನಗೆ ಹೆಮ್ಮೆ

  'ಗಂಧದಗುಡಿ' ನನಗೆ ಹೆಮ್ಮೆ

  ಚಿತ್ರದ ಕ್ರೇಜ್, ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್‌ಗೆ ಸಿಕ್ಕಿರುವ ರೆಸ್ಪಾನ್ಸ್ ಬಗ್ಗೆ ಮಾತನಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, "ನನಗೆ ಹೆಮ್ಮೆ ಕೊಟ್ಟಿರುವ ಪ್ರಾಜೆಕ್ಟ್ ಇದು. ಒಂದು ಕಡೆ ಬೇಸರ, ಒಂದು ಕಡೆ ಖುಷಿ ಕೂಡ ಇದೆ" ಎಂದಿದ್ದಾರೆ. "ನಾವು ಸಾಕಷ್ಟು ಟ್ರಾವೆಲ್ ಮಾಡ್ತಿದ್ವಿ. ನಮ್ಮಲ್ಲೇ ಇಷ್ಟೆಲ್ಲಾ ಇರುವಾಗ ಅದನ್ನು ಎಲ್ಲರಿಗೂ ತೋರಿಸಬೇಕು ಎನ್ನುವ ಆಸೆಯಿಂದ ಈ ಸಿನಿಮಾ ಮಾಡಿದ್ದೀವಿ. ಇದು ಅಪ್ಪು ಅವರೇ ಮಾಡಬೇಕು ಎಂದು ಇತ್ತು ಎನಿಸುತ್ತದೆ, ಈ ನಿರ್ಧಾರ ತಗೊಂಡಿದ್ದು ಸಂತೋಷ ಆಗ್ತಿದೆ. ಎಲ್ಲರೂ ಬಂದು ಸಿನಿಮಾ ನೋಡಿ ಆಶೀರ್ವದಿಸಿ" ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮನವಿ ಮಾಡಿದ್ದಾರೆ.

  English summary
  Puneeth rajkumar's Wife Ashwini Puneeth Rajkumar First Interview About Gandhada Gudi. She shares her Journey with Puneeth rajkumar and Gandhada GudiTeam. Know More.
  Thursday, October 27, 2022, 7:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X