For Quick Alerts
  ALLOW NOTIFICATIONS  
  For Daily Alerts

  ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಪುನೀತ್ ರಾಜ್ ಕುಮಾರ್ ವರ್ಕೌಟ್ ವಿಡಿಯೋ

  |
  Puneeth Rajkumar workout goes viral on social media | FILMIBEAT KANNADA | PUNEETH RAJKUMAR | GYM

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೇನೇ ಸ್ಯಾಂಡಲ್ ವುಡ್ ನಲ್ಲಿ ಹೈವೋಲ್ಟೇಜ್ ಕರೆಂಟ್ ಇದ್ದ ಹಾಗೆ. ವಯಸ್ಸು 44 ಆಗಿದ್ದರೂ, ಅಪ್ಪು ಇನ್ನೂ ಯಂಗ್ ಅಂಡ್ ಎನರ್ಜಿಟಿಕ್ ಆಗಿದ್ದಾರೆ.

  ಸಿನಿಮಾದಿಂದ ಸಿನಿಮಾಗೆ ಸೂಪರ್ ಫಿಟ್ ಆಗಿ ಕಾಣುವ ಪುನೀತ್ ರಾಜ್ ಕುಮಾರ್ ತಮ್ಮ ದೇಹವನ್ನು ಹೇಗೆ ದಂಡಿಸಬಹುದು... ಸದಾ ಫಿಟ್ ಆಗಿ ಕಾಣಲು ಅಪ್ಪು ಏನೆಲ್ಲಾ ಕಸರತ್ತು ಮಾಡಬಹುದು... ಅಂತ ಯೋಚಿಸುವವರು ಮಿಸ್ ಮಾಡದೆ ಪುನೀತ್ ರಾಜ್ ಕುಮಾರ್ ರವರ ವರ್ಕೌಟ್ ವಿಡಿಯೋನ ನೋಡಲೇಬೇಕು.

  ತಮ್ಮ ವರ್ಕೌಟ್ ವಿಡಿಯೋನ ಪುನೀತ್ ರಾಜ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕ್ರಾಸ್ ಎಕ್ಸರ್ಸೈಸ್ ಮತ್ತು ರೋಪ್ ಎಕ್ಸರ್ಸೈಸ್ ಗಳನ್ನ ಪುನೀತ್ ಮಾಡಿದ್ದಾರೆ.

  ಇದಲ್ಲದೇ ಫಿಟ್ನೆಸ್ ಮೇನ್ ಟೇನ್ ಮಾಡಲು ಪ್ರತಿ ದಿನ ಸುಮಾರು 10 ಕಿ.ಮಿ ಓಡುತ್ತಾರೆ ಪುನೀತ್ ರಾಜ್ ಕುಮಾರ್. ಶೂಟಿಂಗ್ ಇಲ್ಲದೇ ಇದ್ದರೂ, ವರ್ಕೌಟ್ ನ ಮಾತ್ರ ಅಪ್ಪು ಮಿಸ್ ಮಾಡುವುದಿಲ್ಲ. ಆಗಾಗ ಸೈಕ್ಲಿಂಗ್ ಮತ್ತು ವಾಕಿಂಗ್ ಗೂ ಅಪ್ಪು ಮೊರೆ ಹೋಗುತ್ತಾರೆ.

  'ನೀವು ನನ್ನ ಸಿನಿಮಾದಲ್ಲಿ ನಟಿಸಿ' ಎಂದು ಪುನೀತ್ ಆಫರ್ ಕೊಟ್ಟಿದ್ದು ಯಾರಿಗೆ.?'ನೀವು ನನ್ನ ಸಿನಿಮಾದಲ್ಲಿ ನಟಿಸಿ' ಎಂದು ಪುನೀತ್ ಆಫರ್ ಕೊಟ್ಟಿದ್ದು ಯಾರಿಗೆ.?

  ಜಿಮ್ ನಲ್ಲಿ ಇಷ್ಟೆಲ್ಲಾ ಬೆವರು ಹರಿಸುವ ಕಾರಣ, ಅಪ್ಪು ಈಗಲೂ ಹರೆಯದ ಯುವಕರನ್ನು ನಾಚಿಸುವಂತೆ ಕಾಣ್ತಾರೆ. ಅಪ್ಪು ವರ್ಕೌಟ್ ಮಾಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  ಅಂದ್ಹಾಗೆ, ಪುನೀತ್ ರಾಜ್ ಕುಮಾರ್ ಸದ್ಯ 'ಯುವರತ್ನ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಿದ್ದಾರೆ. 'ಯುವರತ್ನ' ಬಳಿಕ 'ಜೇಮ್ಸ್' ಚಿತ್ರಕ್ಕೆ ಪುನೀತ್ ಚಾಲನೆ ನೀಡಲಿದ್ದಾರೆ.

  English summary
  Power Star Puneeth Rajkumar's work out video is becoming viral in Social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X