ಯುವರತ್ನ ಪ್ರೊಮೊ ಬಿಡುಗಡೆ: ಯೂತ್‌ಫುಲ್ ಲುಕ್‌ನಲ್ಲಿ ಪುನೀತ್
ಪುನೀತ್ ರಾಜ್‌ಕುಮಾರ್ ನಟಿಸಿ ಸಂತೋಶ್ ಆನಂದ್ ರಾಮ್ ನಿರ್ದೇಶಿಸಿರುವ ಬಹುನಿರೀಕ್ಷಿತ ಸಿನಿಮಾ 'ಯುವರತ್ನ' ದ ಪ್ರೊಮೊ ಇಂದು (ನವೆಂಬರ್ 27) ಬಿಡುಗಡೆ ಆಗಿದೆ.
'ಪವರ್ ಆಫ್ ಯುತ್' ಹೆಸರಿನ ಈ ಪ್ರೊಮೊದಲ್ಲಿ ಯುವರತ್ನ ಸಿನಿಮಾದ ಹಾಡಿನ ತುಣುಕುಗಳಿದ್ದು, ವಿಡಿಯೋ ಸಖತ್ ರಿಚ್ ಆಗಿ ಹಾಗೂ ಪುನೀತ್‌ರಾಜ್‌ಕುಮಾರ್ ಸಖತ್ ಯೂಥ್‌ಫುಲ್ ಆಗಿ ಕಾಣಿಸಿಕೊಂಡಿದ್ದಾರೆ.
ಗಿಟಾರ್ ಹಿಡಿದುಕೊಂಡು ರಗಡ್ ಲುಕ್‌ನಲ್ಲಿ ಎಂಟ್ರಿ ಕೊಡುವ ಪುನೀತ್, 'ಹೆಸರು ಮಾಡು ಹಸಿರಾಗೊ ಹಾಗೆ, ಉಸಿರು ಹೋದರೂ ಹೆಸರಿರುವ ಹಾಗೆ, ಆ ಚರಿತ್ರೆಗೆ ನೀನೆ ಮುನ್ನುಡಿ, ನೂರು ಸಾರಿ ಕೂಗು, ಪವರ್ ಆಫ್ ಯೂಥ್' ಎಂದು ಹಾಡಿದ್ದಾರೆ.

ಪ್ರೊಮೊದ ವಿಶೇಷತೆಯೆಂದರೆ ಪುನೀತ್ ಜೊತೆಗೆ ನಿರ್ದೇಶಕ ಸಂತೋಶ್ ಆನಂದ್‌ರಾಮ್ ಸಹ ನರ್ತಿಸಿದ್ದಾರೆ. ಹಾಡಿನ ಪೂರ್ಣ ವಿಡಿಯೋ ಡಿಸೆಂಬರ್ 2 ಕ್ಕೆ ಬಿಡುಗಡೆ ಆಗಲಿದೆಯಂತೆ.
Recommended Video
ಯುವರತ್ನ ಸಿನಿಮಾವನ್ನು ವಿಜಯ್ ಕಿರಗಂದೂರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಸಾಯೆಷಾ ನಾಯಕಿಯಾಗಿದ್ದಾರೆ. ಧನಂಜಯ್, ದಿಗಂತ್, ಸಾಯಿ ಕುಮಾರ್, ಸುಧಾರಾಣಿ ಇನ್ನೂ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ.


Click it and Unblock the Notifications











