'ಯುವರತ್ನ' ಪೋಸ್ಟರ್: 'ಪವರ್ ಆಫ್ ಯೂತ್' ಪುನೀತ್ ರಾಜ್ ಕುಮಾರ್ ಸ್ಟೈಲಿಶ್ ಲುಕ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಬಹುನಿರೀಕ್ಷೆಯ ಯುವರತ್ನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ನಿಂದ ಸುಮಾರು ತಿಂಗಳುಗಳ ಕಾಲ ಮನೆಯಲ್ಲಿಯೆ ಇದ್ದ ಅಪ್ಪು ಸದ್ಯ ಚಿತ್ರದ ಕೆಲಸಕ್ಕೆ ಮತ್ತೆ ಮರಳಿದ್ದಾರೆ. ಪುನೀತ್ ಅಭಿನಯದ ಯುವರತ್ನ ಚಿತ್ರದ ಕೆಲಸಗಳು ಬಿರುಸಿನಿಂದ ನಡೆಯುತ್ತಿದೆ.
Recommended Video
ಇದರ ನಡುವೆ ಅಭಿಮಾನಿಗಳು ಚಿತ್ರದ ಅಪ್ ಡೇಟ್ ನೀಡುವಂತೆ ಚಿತ್ರತಂಡದ ಬೆನ್ನುಬಿದ್ದಿದ್ದಾರೆ. ಚಿತ್ರದಿಂದ ಯಾವುದೆ ಮಾಹಿತಿ ಹೊರಬರದ ಕಾರಣ ಅಭಿಮಾನಿಗಳು ಬೇಸರದಲ್ಲಿದ್ದರು. ಡಬ್ಬಿಂಗ್ ನಡೆಯುತ್ತಿರುವ ಮಾಹಿತಿ ನೀಡಿ ಅಭಿಮಾನಿಗಳ ಮನತಣಿಸಿದ್ದ ಯುವರತ್ನ ಟೀಂ, ಚಿತ್ರದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಪವರ್ ಸ್ಟಾರ್ ಪವರ್ ಫುಲ್ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾಕೆ. ಮುಂದೆ ಓದಿ..

'ಪವರ್ ಆಫ್ ಯೂತ್' ಹಾಡಿನ ಫೋಟೋ
ಯುವರತ್ನ ಚಿತ್ರದ ಹಾಡಿನ ಫೋಟೋ ಇದಾಗಿದೆ. ಈ ಫೋಟೋದಲ್ಲಿ ಪವರ್ ಸ್ಟಾರ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ 'ಪವರ್ ಆಫ್ ಯೂತ್'
ಹಾಡಿನ ಡ್ಯಾನ್ಸ್ ಸ್ಟಿಲ್ ಇದಾಗಿದೆ. ಭರ್ಜರಿ ಸ್ಟೆಪ್ ಹಾಕುತ್ತಿರುವ ಪುನೀತ್ ರಾಜ್ ಕುಮಾರ್ ಈ ಫೋಟೋ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಹಾಡು ರಿಲೀಸ್ ಮಾಡುವಂತೆ ಅಭಿಮಾನಿಗಳ ಒತ್ತಾಯ
ಚಿತ್ರತಂಡ ಹಾಡಿನ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇಂದು ಹಾಡು ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಹಾಡಿನ ಬದಲಿಗೆ ಫೋಟೋ ರಿವೀಲ್ ಮಾಡಿದೆ ಸಿನಿಮಾತಂಡ. ಈ ಹಾಡನ್ನು ಬೇಗ ರಿಲೀಸ್ ಮಾಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಎಸ್.ತಮನ್ ಸಂಗೀತ
ಪುನೀತ್ ರಾಜ್ ಕುಮಾರ್ ಪವರ್ ಫುಲ್ ಫೋಟೋಗೆ ಖ್ಯಾತ ಸಂಗೀತ ನಿರ್ದೇಶಕ ಎಸ್.ತಮನ್ ಪ್ರತಿಕ್ರಿಯೆ ನೀಡಿದ್ದಾರೆ. ಪವರ್ ಸ್ಟಾರ್ ಫೋಟೋಗೆ 'ಇದು ಎನರ್ಜಿ' ಎಂದಿದ್ದರೆ. ಯುವರತ್ನ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್.ತಮನ್ ಸಂಗೀತ ನೀಡಿದ್ದಾರೆ.

ಡಬ್ಬಿಂಗ್ ಆರಂಭ
ಲಾಕ್ ಡೌನ್ ನಿಂದ ಚಿತ್ರದ ಕೆಲಸ ಸ್ತಗಿತಗೊಳಿಸಿದ್ದ ಸಿನಿಮಾತಂಡ ಮತ್ತೆ ಪ್ರಾರಂಭಿಸಿದ್ದಾರೆ. ಸದ್ಯ ಚಿತ್ರದ ಎರಡನೆ ಭಾಗದ ಡಬ್ಬಿಂಗ್ ನಡೆಯುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಪೋಟೋವನ್ನು ಸಂತೋಷ್ ಆನಂದ್ ರಾಮ್ ಹಂಚಿಕೊಂಡಿದ್ದರು.


Click it and Unblock the Notifications











