ಯುವರತ್ನ ಪ್ರಿ-ರಿಲೀಸ್ ಕಾರ್ಯಕ್ರಮ ದಿನಾಂಕ ಮತ್ತು ಸ್ಥಳ ಬಹಿರಂಗ

ಕನ್ನಡದಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮಗಳ ಸಂಪ್ರದಾಯ ಹೆಚ್ಚಾಗುತ್ತಿದೆ. ಪೊಗರು, ರಾಬರ್ಟ್ ಚಿತ್ರದ ಬಳಿಕ ಈಗ ಯುವರತ್ನ ಸಿನಿಮಾದ ಸರದಿ. ಏಪ್ರಿಲ್ 1 ರಂದು ಯುವರತ್ನ ಚಿತ್ರ ತೆರೆಗೆ ಬರ್ತಿದೆ. ಇಂದಿನಿಂದ ಅಧಿಕೃತವಾಗಿ ಯುವರತ್ನ ಪ್ರಚಾರ ಆರಂಭಿಸಿರುವ ಚಿತ್ರತಂಡ ಪ್ರಿ-ರಿಲೀಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದೆ.

ಸ್ವತಃ ಯುವರತ್ನ ಚಿತ್ರತಂಡ ಹೇಳಿರುವ ಪ್ರಕಾರ ಮಾರ್ಚ್ 20 ರಂದು ಮೈಸೂರಿನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜನೆಯಾಗಿದೆ. ಶನಿವಾರ ಸಂಜೆ ಅರಮನೆ ನಗರಿಯಲ್ಲಿ ಅಪ್ಪು ಮತ್ತು ಚಿತ್ರತಂಡ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಕಳೆದ ವರ್ಷದ ಮೈಸೂರು ದಸರಾ ಬಹಳ ಅದ್ಧೂರಿಯಾಗಿ ನಡೆದಿಲ್ಲ. ಹಾಗಾಗಿ, 'ಯುವ ಸಂಭ್ರಮ' ಎಂಬ ಹೆಸರಿನಲ್ಲಿ ಯುವರತ್ನ ಚಿತ್ರತಂಡ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.

Puneeth Rajkumars Yuvarathnaa Movie Pre Release Event at Mysuru on March 20

ಶ್ರೇಯಸ್ ಮಿಡಿಯಾ ಈ ಸಮಾರಂಭವನ್ನು ಆಯೋಜಿಸುತ್ತಿದ್ದು, 'ಈ ಹಿಂದಿನ ಕಾರ್ಯಕ್ರಮಗಳನ್ನು ಮೀರಿಸುವಂತೆ ಯುವರತ್ನ ಸಂಭ್ರಮ ಮಾಡಲಾಗುತ್ತದೆ' ಎಂದು ತಿಳಿಸಿದ್ದಾರೆ.

ಯುವರತ್ನ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಯಾರು ಅತಿಥಿಯಾಗಿ ಆಗಮಿಸಲಿದ್ದಾರೆ ಎಂಬ ಕುತೂಹಲ ಕಾಡ್ತಿದೆ. ಸದ್ಯಕ್ಕೆ ಈ ಕುರಿತು ಚಿತ್ರತಂಡ ಸ್ಪಷ್ಟ ಉತ್ತರ ನೀಡಿಲ್ಲ.

ಇನ್ನುಳಿದಂತೆ ಪುನೀತ್ ರಾಜ್ ಕುಮಾರ್, ಸಯೇಶ್ ಸೈಗರ್, ಧನಂಜಯ್, ದಿಗಂತ್, ಸೋನು ಗೌಡ, ಪ್ರಕಾಶ್ ರಾಜ್, ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವರು ನಟಿಸಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದಾರೆ. ಎಸ್ ತಮನ್ ಸಂಗೀತವಿದೆ.

More from Filmibeat

English summary
Powerstar Puneeth Rajkumar starrer Yuvarathna pre-release event will be held on March 20 in Mysore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X