India
  For Quick Alerts
  ALLOW NOTIFICATIONS  
  For Daily Alerts

  ಯುವರತ್ನ ಪ್ರಿ-ರಿಲೀಸ್ ಕಾರ್ಯಕ್ರಮ ದಿನಾಂಕ ಮತ್ತು ಸ್ಥಳ ಬಹಿರಂಗ

  |

  ಕನ್ನಡದಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮಗಳ ಸಂಪ್ರದಾಯ ಹೆಚ್ಚಾಗುತ್ತಿದೆ. ಪೊಗರು, ರಾಬರ್ಟ್ ಚಿತ್ರದ ಬಳಿಕ ಈಗ ಯುವರತ್ನ ಸಿನಿಮಾದ ಸರದಿ. ಏಪ್ರಿಲ್ 1 ರಂದು ಯುವರತ್ನ ಚಿತ್ರ ತೆರೆಗೆ ಬರ್ತಿದೆ. ಇಂದಿನಿಂದ ಅಧಿಕೃತವಾಗಿ ಯುವರತ್ನ ಪ್ರಚಾರ ಆರಂಭಿಸಿರುವ ಚಿತ್ರತಂಡ ಪ್ರಿ-ರಿಲೀಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದೆ.

  ಸ್ವತಃ ಯುವರತ್ನ ಚಿತ್ರತಂಡ ಹೇಳಿರುವ ಪ್ರಕಾರ ಮಾರ್ಚ್ 20 ರಂದು ಮೈಸೂರಿನಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜನೆಯಾಗಿದೆ. ಶನಿವಾರ ಸಂಜೆ ಅರಮನೆ ನಗರಿಯಲ್ಲಿ ಅಪ್ಪು ಮತ್ತು ಚಿತ್ರತಂಡ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

  ಯುವರತ್ನ ಕ್ರೇಜ್: 'ಇದು ಜಸ್ಟ್ ಬಿಗಿನಿಂಗ್, ಮುಂದೆ ನೀವೇ ನೋಡ್ತಿರಲ್ಲ'ಯುವರತ್ನ ಕ್ರೇಜ್: 'ಇದು ಜಸ್ಟ್ ಬಿಗಿನಿಂಗ್, ಮುಂದೆ ನೀವೇ ನೋಡ್ತಿರಲ್ಲ'

  ಕಳೆದ ವರ್ಷದ ಮೈಸೂರು ದಸರಾ ಬಹಳ ಅದ್ಧೂರಿಯಾಗಿ ನಡೆದಿಲ್ಲ. ಹಾಗಾಗಿ, 'ಯುವ ಸಂಭ್ರಮ' ಎಂಬ ಹೆಸರಿನಲ್ಲಿ ಯುವರತ್ನ ಚಿತ್ರತಂಡ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.

  ಶ್ರೇಯಸ್ ಮಿಡಿಯಾ ಈ ಸಮಾರಂಭವನ್ನು ಆಯೋಜಿಸುತ್ತಿದ್ದು, 'ಈ ಹಿಂದಿನ ಕಾರ್ಯಕ್ರಮಗಳನ್ನು ಮೀರಿಸುವಂತೆ ಯುವರತ್ನ ಸಂಭ್ರಮ ಮಾಡಲಾಗುತ್ತದೆ' ಎಂದು ತಿಳಿಸಿದ್ದಾರೆ.

  ಯುವರತ್ನ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಯಾರು ಅತಿಥಿಯಾಗಿ ಆಗಮಿಸಲಿದ್ದಾರೆ ಎಂಬ ಕುತೂಹಲ ಕಾಡ್ತಿದೆ. ಸದ್ಯಕ್ಕೆ ಈ ಕುರಿತು ಚಿತ್ರತಂಡ ಸ್ಪಷ್ಟ ಉತ್ತರ ನೀಡಿಲ್ಲ.

  ತೆಲುಗಿನ ಖ್ಯಾತ ನಿರ್ಮಾಪಕರ ಪಾಲಾಯ್ತು ಯುವರತ್ನ ವಿತರಣೆ ಹಕ್ಕುತೆಲುಗಿನ ಖ್ಯಾತ ನಿರ್ಮಾಪಕರ ಪಾಲಾಯ್ತು ಯುವರತ್ನ ವಿತರಣೆ ಹಕ್ಕು

  ಇನ್ನುಳಿದಂತೆ ಪುನೀತ್ ರಾಜ್ ಕುಮಾರ್, ಸಯೇಶ್ ಸೈಗರ್, ಧನಂಜಯ್, ದಿಗಂತ್, ಸೋನು ಗೌಡ, ಪ್ರಕಾಶ್ ರಾಜ್, ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವರು ನಟಿಸಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದಾರೆ. ಎಸ್ ತಮನ್ ಸಂಗೀತವಿದೆ.

  ಉಮಾಪತಿ ಗಿಫ್ಟ್,ತರುಣ್ ಗೆ ಕ್ರೆಡಿಟ್ ಅಂತಿದ್ದಾರೆ ರಾಬರ್ಟ್ ನೋಡಿದ ಪ್ರೇಕ್ಷಕರು | Roberrt | Filmibeat Kannada
  English summary
  Powerstar Puneeth Rajkumar starrer Yuvarathna pre-release event will be held on March 20 in Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X