ಪುನೀತ್ ಅಭಿಮಾನಿಗಳಿಂದ 'ಯುವರತ್ನ' ಸಿನಿಮಾತಂಡಕ್ಕೆ ವಿಶೇಷ ಉಡುಗೊರೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚಿಗಷ್ಟೆ ಸಿನಿಮಾದ ಶೂಟಿಂಗ್ ಮುಗಿಸಿದ ಸಂತಸವನ್ನು ಸಿನಿಮಾತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಇದೀಗ ಯುವರತ್ನ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ.

ಯುವರತ್ನ ಸಿನಿಮಾದ ಟ್ರೈಲರ್ ಮತ್ತು ಹಾಡಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದ ಹಾಡನ್ನು ಸದ್ಯದಲ್ಲೇ ರಿಲೀಸ್ ಮಾಡುವುದಾಗಿ ಸಿನಿಮಾತಂಡ ಈ ಹಿಂದೆಯೆ ಬಹಿರಂಗ ಪಡಿಸಿತ್ತು. ಆದರೆ ಇನ್ನೂ ಹಾಡುಗಳನ್ನು ಬಿಡುಗಡೆ ಮಾಡಿಲ್ಲ. ಇದೀಗ ಅಭಿಮಾನಿಗಳೇ ಯುವರತ್ನ ತಂಡಕ್ಕೆ ಸರ್ಪ್ರೈಸ್ ನೀಡಿದೆ.

ಹೌದು, ಅಪ್ಪು ಅಭಿಮಾನಿಗಳ ಕಡೆಯಿಂದ ಯುವರತ್ನ ಸಿನಿಮಾದ ಡಿಜಿಟಲ್ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ದಸರಾ ಹಬ್ಬದ ಪ್ರಯುಕ್ತ ಅಭಿಮಾನಿಗಳು ಮೋಷನ್ ಪೋಸ್ಟರ್ ಸಿದ್ಧಪಡಿಸಿ ಬಿಡುಗಡೆ ಮಾಡಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಮಾಡಿರುವ ಮೋಷನ್ ಪೋಸ್ಟರ್ ಅನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ರಿಲೀಸ್ ಮಾಡಿದ್ದಾರೆ.

Puneeth Rajkumars Yuvaratna Movie Fan Made Motion Poster Release

ಈ ಬಗ್ಗೆ ಸಂತೋಷ್ ಆನಂದ್ ರಾಮ್ ಮಾತನಾಡಿ, ಮೋಷನ್ ಪೋಸ್ಟರ್ ನೋಡಿ ಎಂಜಾಯ್ ಮಾಡಿ, ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ, ಪ್ರೋತ್ಸಾಹಕ್ಕೆ ನಾನು ಚಿರಋಣಿ ಎಂದಿದ್ದಾರೆ. ಅಂದ್ಹಾಗೆ ಈ ಮೋಷನ್ ಪೋಸ್ಟರ್ ಆಕಾಶ್ ಸ್ಟೂಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ.

Recommended Video

ಮಗು ಹುಟ್ಟಿದ ಕೂಡಲೇ ಮೇಘನಾ ಆಸೆ ಈಡೇರಿಸಿದ್ದು ಈ ವೈದ್ಯರು | Filmibeat Kannada

More from Filmibeat

English summary
Power Star Puneeth Rajkumar starrer Yuvaratna movie fan made motion poster released by Santhosh Ananddram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X