ಪುನೀತ್ ರಾಜ್ ಕುಮಾರ್ 'ಯುವರತ್ನ' ಸಿನಿಮಾದ ಸೂಪರ್ ಅಪ್ ಡೇಟ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ 'ಯುವರತ್ನ' ಸಿನಿಮಾದಿಂದ ಸೂಪರ್ ಅಪ್ ಡೇಟ್ ಸಿಕ್ಕಿದೆ. ಸಿನಿಮಾದ ಹಾಡುಗಳನ್ನು ರಿಲೀಸ್ ಮಾಡುವಂತೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಸದ್ಯದಲ್ಲೇ ಹಾಡುಗಳನ್ನು ರಿಲೀಸ್ ಮಾಡುವುದಾಗಿ ಹೇಳಿರುವ ಸಿನಿಮಾತಂಡ, ಉಳಿದ ಭಾಗದ ಚಿತ್ರೀಕರಣ ಪೂರ್ಣ ಮಾಡಲು ಸಿದ್ಧವಾಗಿದೆ.

Recommended Video

ನಾನು ಅವತ್ತೇ ಸಾಯಬೇಕಿತ್ತು, ಸುದೀಪ್ ಬಂದು ನನ್ನನ್ನು ಬದುಕಿಸಿದ್ರು

ಹೌದು, ಚಿತ್ರದ ಹೈ ವೋಲ್ಟೇಜ್ ಹಾಡಿನ ಚಿತ್ರೀಕರಣಕ್ಕೆ ದಿನಾಂಕ ನಿಗಧಿಯಾಗಿದೆ. ಕೊರೊನಾ ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭಿಸುತ್ತಿದ್ದೀವಿ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಚಿತ್ರೀಕರಣ ಮುಗಿದು ಸಿನಿಮಾ ಕೂಡ ರಿಲೀಸ್ ಆಗಿ ಸಂಭ್ರಮಿಸುತ್ತಿದ್ದರು.

ಸೆಪ್ಟಂಬರ್ 20ರಿಂದ ಚಿತ್ರೀಕರಣ ಪ್ರಾರಂಭ

ಸೆಪ್ಟಂಬರ್ 20ರಿಂದ ಚಿತ್ರೀಕರಣ ಪ್ರಾರಂಭ

'ಯುವರತ್ನ' ಸಿನಿಮಾದ ಹಾಡಿನ ಚಿತ್ರೀಕರಣ ಬಾಕಿ ಉಳಿದಿದ್ದು, ಇದೇ ತಿಂಗಳು 20ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಇದು ಚಿತ್ರದ ಇಂಟ್ರಡಕ್ಷನ್ ಹಾಡಾಗಿರಲಿದೆಯಂತೆ. ಈ ಬಗ್ಗೆ ನಿರ್ದೇಶಕ ಸಂತೋಷನ್ ಆನಂದ್ ರಾಮ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಜಾನಿ ಮಾಸ್ಟರ್ ನೃತ್ಯ ಸಂಯೋಜನೆ

ಜಾನಿ ಮಾಸ್ಟರ್ ನೃತ್ಯ ಸಂಯೋಜನೆ

ಸಖತ್ ಎನರ್ಜಿಟಿಕ್ ಆಗಿರುವ ಹಾಡು ಇದಾಗಿದೆ ಎಂದು ಚಿತ್ರತಂಡ ಹೇಳಿದೆ. ಈ ಹಾಡಿಗೆ ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಮತ್ತು ಜಾನಿ ಮಾಸ್ಟರ್ ಕಾಂಬಿನೇಶನ್ ಡ್ಯಾನ್ಸ್ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

'ಓಪನ್ ದಿ ಬಾಟಲ್...' ಸೂಪರ್ ಹಿಟ್

'ಓಪನ್ ದಿ ಬಾಟಲ್...' ಸೂಪರ್ ಹಿಟ್

ಈಗಾಗಲೇ ನಟಸಾರ್ವಭೌಮ ಸಿನಿಮಾದ 'ಓಪನ್ ದಿ ಬಾಟಲ್...' ಹಾಡಿಗೆ ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ದೊಡ್ಡ ಮಟ್ಟದಲ್ಲಿ ಹಿಟ್ ಆಗಿರುವ ಈ ಹಾಡಿನಲ್ಲಿ ಪುನೀತ್ ನೃತ್ಯಕ್ಕೆ ಕನ್ನಡ ಸಿನಿಮಾ ಪ್ರಿಯರು ಫಿದಾ ಆಗಿದ್ದಾರೆ. ಈಗ ಮತ್ತೆ ಇಬ್ಬರ ಕಾಂಬಿನೇಶನ್ ನ ಡ್ಯಾನ್ಸ್ ನೋಡಲು ಕಾಯುತ್ತಿದ್ದಾರೆ.

ಪುನೀತ್ ಗೆ ಸಯೇಶಾ ನಾಯಕಿ

ಪುನೀತ್ ಗೆ ಸಯೇಶಾ ನಾಯಕಿ

ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿ ಸಯೇಶಾ ಕಾಣಿಸಿಕೊಳ್ಳುತ್ತಿದ್ದಾರೆ. ಸಯೇಶಾ ವಂದನಾ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇನ್ನೂ 'ಯುವರತ್ನ' ಚಿತ್ರದಲ್ಲಿ ದೊಡ್ಡ ತಾರಾಬಳಗವೆ ಇದೆ. ದಿಗಂತ್, ಧನಂಜಯ್, ಸೋನು ಗೌಡ ಸೇರಿದ್ದಂತೆ ಅನೇಕರು 'ಯುವರತ್ನ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

More from Filmibeat

English summary
Puneeth Rajkumar starrer Yuvaratna movie shooting start on september 20.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X