ಮುತ್ತುರಾಜನ ಮುತ್ತಿನಂಥ ಮಾತುಗಳನ್ನು ಅವರ ಧ್ವನಿಯಲ್ಲೇ ಕೇಳಿ
ಇವತ್ತು ಕರುನಾಡ ಸುಪುತ್ರ ಡಾ ರಾಜ್ ಕುಮಾರ್ ಹುಟ್ಟಿದ ದಿನ. ಅಭಿಮಾನಿಗಳ ಪಾಲಿಗೆ ದೇವರಾಗಿರುವ ಈ ನಟ ಇದೇ ದಿನ ಜಗತ್ತಿಗೆ ಕಾಲಿಟ್ಟಿರು. ಹೌದು, ಇಂದು ವರನಟ ಡಾ ರಾಜ್ ಕುಮಾರ್ ಅವರ 90ನೇ ಹುಟ್ಟುಹಬ್ಬದ ಸವಿನೆನಪು.
ಈ ದಿನ ನಟ ಪುನೀತ್ ರಾಜ್ ಕುಮಾರ್ ತಮ್ಮ ತಂದೆಯ ಅಪರೂಪದ ಆಡಿಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಂದು ಹಳೆಯ ಸಂದರ್ಶನದಲ್ಲಿ ರಾಜ್ ಕುಮಾರ್ ಮಾತನಾಡಿದ ಅಮೂಲ್ಯ ಮಾತು ಇದಾಗಿದೆ. ರಾಜ್ ತಮ್ಮ ನಟನೆಯ ತಯಾರಿಯಲ್ಲಿ ಆಗುವ ಸಮಸ್ಯೆಯನ್ನು ಇಲ್ಲಿ ಹೇಳಿದ್ದಾರೆ. ಅವರ ಮಾತು ನಿಜಕ್ಕೂ ರೋಮಾಂಚನ ನೀಡುತ್ತದೆ.

''ಎಲ್ಲ ಸಿನಿಮಾಗಳಲ್ಲಿ ನನಗೆ ಹೆದರಿಕೆ ಇರುತ್ತದೆ. ಮುಖಕ್ಕೆ ರಂಗು, ಬಟ್ಟೆ ಬರೆ ಹಾಕಿಕೊಂಡು ಹೀಗಿದ್ದರೆ ಚೆನ್ನಾಗಿ ಇರುತ್ತದೆ ಅಂತ ಏನೋ ಒಂದು ಯೋಚನೆ ಮಾಡಿಕೊಂಡು ಹೋಗುತ್ತೇವೆ. ಆದರೆ, ಅಲ್ಲಿ ಹೋದಾಗ ಏನೇ ಬದಲಾವಣೆ ಆಗುತ್ತದೆ. ನಾನು ಯಾವುದನ್ನು ಕಷ್ಟ ಎಂದುಕೊಳ್ಳುತ್ತೇನೋ, ಹೇಗೆ ಪಾತ್ರವನ್ನು ಮನಸ್ಸಿಗೆ ಹಾಕಿಕೊಳ್ಳುವುದು, ಇದರ ರಸಾನುಭಾವ ಹೇಗೆ ಎನ್ನುವುದನ್ನು ಇಲ್ಲಿ ಮಾತನಾಡುತ್ತೇವೆ. ಆದರೆ, ಅಲ್ಲಿ ಏನೂ ಹೊಳೆಯುವುದಿಲ್ಲ. ಅದು ನನಗೆ ಇವತ್ತಿನ ವರೆಗೆ ಆಶ್ವರ್ಯ ಆಗುತ್ತದೆ.'' ಎನ್ನುತ್ತಾರೆ ರಾಜ್.
ಹೀಗೆ ಮಾತು ಮುಂದುವರೆಸುವ ಅವರು ''ಇವುಗಳನ್ನು ಅರ್ಥ ಮಾಡಿಕೊಳ್ಳಲು ಯಾರಿಗೂ ಆಗುವುದಿಲ್ಲ. ದೇವರು ಮಾಡಿದ ಹಾಗೆ ಆಗುತ್ತದೆ ಎಂದುಕೊಂಡರೆ ಇದಲ್ಲ ಆಗುವುದಿಲ್ಲ. ಎಲ್ಲದಕ್ಕೂ ನಮ್ಮ ಪ್ರಯತ್ನ ಬೇಕೆ ಬೇಕು.'' ಎಂದು ತಮ್ಮ ಪಾತ್ರದ ತಯಾರಿ ಬಗ್ಗೆ ರಾಜ್ ಕುಮಾರ್ ಮಾತನಾಡಿದ್ದಾರೆ.


Click it and Unblock the Notifications











