For Quick Alerts
  ALLOW NOTIFICATIONS  
  For Daily Alerts

  ಗೋಕಾಕ್ ಚಳುವಳಿ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಹೇಗಿದ್ರು?

  |

  1980ರ ಸಮಯಕ್ಕೆ ಕರ್ನಾಟಕದಲ್ಲಿ ಭಾಷೆಗಾಗಿ ಅತಿ ದೊಡ್ಡ ಕ್ರಾಂತಿ ನಡೆದಿತ್ತು. ಕನ್ನಡ ಭಾಷೆಯನ್ನ ಕಡ್ಡಾಯ ಮಾಡಬೇಕೆಂದು ಸಾಹಿತಿಗಳು, ಕನ್ನಡ ಅಭಿಮಾನಿಗಳು ಬೀದಿಗಿಳಿದಿದ್ದರು. ಇದು ಗೋಕಾಕ್ ಚಳವಳಿ ಎಂಬ ಹೆಸರಿನಲ್ಲಿ ಐತಿಹಾಸಿಕ ಹೋರಾಟವಾಗಿ ಉಳಿದುಕೊಂಡಿದೆ. ಈ ಹೋರಾಟಕ್ಕೆ ಡಾ.ರಾಜ್ ಎಂಬ ಶಕ್ತಿ ಕೈಜೋಡಿಸಿದ್ದರು. ಅಣ್ಣಾವ್ರ ಪ್ರವೇಶದ ಬಳಿಕ ಈ ಹೋರಾಟ ಸ್ವರೂಪವೇ ಬದಲಾಗಿತ್ತು.

  ಗೋಕಾಕ್ ಚಳವಳಿಯ ಅಪರೂಪದ ಫೋಟೋವೊಂದನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  'ಗೋಕಾಕ್ ಚಳವಳಿ' ವೇಳೆ ಕನ್ನಡಿಗರಿಗಾಗಿ ಪತ್ರ ಬರೆದಿದ್ದ ಡಾ.ರಾಜ್

  ಗೋಕಾಕ್ ಹೋರಾಟ ನಡೆದ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಇನ್ನು ನಾಯಕನಟ ಆಗಿರಲಿಲ್ಲ. ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಸಹ ನಾಯಕ ನಟರಾಗಿರಲಿಲ್ಲ.

  ಆದರೂ, ತಂದೆಯ ಜೊತೆ ಮಕ್ಕಳು ಸಹ ಹೋರಾಟದಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋವನ್ನು ಪುನೀತ್ ಹಂಚಿಕೊಂಡಿದ್ದಾರೆ.

  ಗೋಕಾಕ್ ಹೋರಾಟ ನಡೆದ ವೇಳೆ ಡಾ ರಾಜ್ ಕುಮಾರ್ ಅವರ ಜೊತೆ ಶಿವಣ್ಣ, ರಾಘಣ್ಣ, ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಫೋಟೋವೊಂದು ಗಮನ ಸೆಳೆಯುತ್ತಿದೆ.

  ಈ ಫೋಟೋ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಗೋಕಾಕ್ ಹೋರಾಟದಲ್ಲಿ ಅಣ್ಣಾವ್ರ ಮಕ್ಕಳು ಕಾಣಿಸಿಕೊಂಡಿದ್ದ ಫೋಟೋಗಳು ಎಲ್ಲಿಯೂ ಬಹಿರಂಗವಾಗಿರಲಿಲ್ಲ. ಐದು ದಶಕದ ನಂತರ ಈ ಫೋಟೋ ಲಭ್ಯವಾಗಿರುವುದು ಸರ್ಪ್ರೈಸ್ ನೀಡಿದೆ.

  English summary
  Powerstar Puneeth Rajkumar Shares Picture Taken During Gokak agitation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X