twitter
    For Quick Alerts
    ALLOW NOTIFICATIONS  
    For Daily Alerts

    ಗಾಜನೂರಿಗೆ ಕುಟುಂಬ ಸಮೇತ ಭೇಟಿಕೊಟ್ಟ ಅಣ್ರಾವ್ರ ಮಕ್ಕಳು

    |

    ಡಾ.ರಾಜ್‌ಕುಮಾರ್ ಎಷ್ಟೇ ಎತ್ತರಕ್ಕೆ ಏರಿದರು ತಮ್ಮ ಮೂಲವನ್ನು ಮರೆತವರಲ್ಲ. ಅವರು ಹಲಾವರು ಸಂದರ್ಶನಗಳಲ್ಲಿ ತಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರನ್ನು ತಮ್ಮೂರು ಗಾಜನೂರನ್ನೂ ನೆನಪಿಸಿಕೊಂಡಿದ್ದಾರೆ.

    ವಿಶ್ರಾಂತ ಜೀವನದಲ್ಲಿ ಹಲವು ಬಾರಿ ಗಾಜನೂರಿಗೆ ಹೋಗಿ ಅಲ್ಲಿಯೇ ಕಾಲ ಕಳೆದಿದ್ದರು ರಾಜ್‌ಕುಮಾರ್. ಗಾಜನೂರಿನಲ್ಲಿ ದೊಡ್ಡ ಮನೆಯೊಂದನ್ನು ರಾಜ್‌ಕುಮಾರ್ ನಿರ್ಮಾಣ ಮಾಡಿದ್ದಾರದರೂ ಮೂಲ ಮನೆ ಹಾಗೆಯೇ ಇದೆ ಎನ್ನಲಾಗುತ್ತದೆ.

    ಇದೀಗ ರಾಜ್‌ಕುಮಾರ್ ಅವರ ಮೂರನೇ ತಲೆಮಾರು ಸಿನಿಮಾಗಳಲ್ಲಿ ನಟಿಸುತ್ತಿದೆ. ರಾಜ್‌ಕುಮಾರ್ ಗಳಿಸಿದ್ದ ಸಂಪತ್ತಾದ ಜನಪ್ರೀತಿಯನ್ನು ಉಳಿಸಿಕೊಂಡು ಹೋಗುವ ಕಾರ್ಯವನ್ನು ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಮಾಡುತ್ತಲೇ ಬಂದಿದ್ದಾರೆ. ಇದೀಗ ತಮ್ಮ ಮಕ್ಕಳಿಗೆ ತಮ್ಮ ಮೂಲದ ಅರಿವನ್ನು ಮಾಡಿಸಿಕೊಡಲೆಂದು ಕುಟುಂಬವನ್ನು ತಂದೆಯವರ ಹುಟ್ಟೂಹಾರದ ಗಾಜನೂರಿಗೆ ಕರೆದುಕೊಂಡು ಬಂದಿದ್ದಾರೆ.

    ನಟರಾದ ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್ ಅವರುಗಳು ತಮ್ಮ ಕುಟುಂಬದೊಂದಿಗೆ ತಂದೆಯವರ ಹುಟ್ಟೂರಾದ ಗಾಜನೂರಿಗೆ ಭೇಟಿ ನೀಡಿದ್ದಾರೆ. ಗಾಜನೂರಿನ ಮನೆಗೆ ಹೋಗಿ ಅಲ್ಲಿಯ ಪರಿಸರದ, ಅಲ್ಲಿಯ ಜನರ ಪರಿಚಯಗಳನ್ನು ತಮ್ಮ ಮಕ್ಕಳಿಗೆ ಮಾಡಿಸಿದ್ದಾರೆ.

    ಬಾಲ್ಯದ ಗೆಳೆಯರ ಹೆಗಲ ಮೇಲೆ ಪುನೀತ್ ಕೈ

    ಬಾಲ್ಯದ ಗೆಳೆಯರ ಹೆಗಲ ಮೇಲೆ ಪುನೀತ್ ಕೈ

    ಪುನೀತ್ ರಾಜ್‌ಕುಮಾರ್ ಅವರು ಗಾಜನೂರಿನ ಜನರ ಜೊತೆ ತಾವೇ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಗಾಜನೂರಿನಲ್ಲಿ ಪುನೀತ್ ಅವರನ್ನು ಎತ್ತಿ ಆಡಿಸಿದ ಜನರಿದ್ದಾರೆ. ಹಲವು ಪರಿಚಿತರಿದ್ದಾರೆ. ತಮ್ಮ ಬಾಲ್ಯದ ಗೆಳೆಯರೊಟ್ಟಿಗೂ ಪುನೀತ್ ರಾಜ್‌ಕುಮಾರ್ ಫೊಟೊ ತೆಗೆಸಿಕೊಂಡಿದ್ದಾರೆ. ಆ ಫೊಟೊಗಳೆಲ್ಲವೂ ವೈರಲ್ ಆಗಿವೆ.

    ಆಲದ ಮರದಲ್ಲಿ ಬರಿಗಾಲಲ್ಲಿ ಕೂತ ಶಿವಣ್ಣ

    ಆಲದ ಮರದಲ್ಲಿ ಬರಿಗಾಲಲ್ಲಿ ಕೂತ ಶಿವಣ್ಣ

    ಇನ್ನು ನಟ ಶಿವರಾಜ್‌ ಕುಮಾರ್ ಗಾಜನೂರಿನಲ್ಲಿ ಮರವೊಂದರ ಕೆಳಗೆ ಬಲಿ ಗಾಲಿನಲ್ಲಿ ಕುಳಿತು ಹಳ್ಳಿ ಪರಿಸರವನ್ನು ಆಹ್ಲಾದಿಸುತ್ತಿರುವ ಚಿತ್ರವಂತೂ ಸಖತ್ ವೈರಲ್ ಆಗಿದೆ. ಜೊತೆಗೆ ಕಾಲಿಲ್ಲದ ಅಂಗವಿಕಲನ ಜೊತೆಗೆ ಫೊಟೊಕ್ಕೆ ಫೋಸು ನೀಡಲೆಂದು ತಾವೂ ಸಹ ಮಂಡಿಯೂರಿ ಕೆಳಗೆ ಕೂತಿರುವ ಚಿತ್ರವೂ ಶಿವಣ್ಣನವರ ಸರಳತೆಯನ್ನು ಮತ್ತೊಮ್ಮೆ ಸಾರಿ ಹೇಳುತ್ತಿದೆ. ಆಲದ ಮರವೊಂದರ ಮುಂದೆ ನಿಂತು ಹಲವು ಚಿತ್ರಗಳನ್ನು ಶಿವಣ್ಣ ತೆಗೆಸಿಕೊಂಡಿದ್ದಾರೆ.

    ನಟರನ್ನು ನೋಡಲು ಅಭಿಮಾನಿಗಳ ದಂಡು

    ನಟರನ್ನು ನೋಡಲು ಅಭಿಮಾನಿಗಳ ದಂಡು

    ಶಿವಣ್ಣ, ಪುನೀತ್ ಅವರುಗಳನ್ನು ನೋಡಲು ಗಾಜನೂರಿನಲ್ಲೂ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಸೇರಿದ್ದಾರೆ. ಅವರೊಟ್ಟಿಗೆಲ್ಲ ಬೆರೆತಿರುವ ಪುನೀತ್ ಹಾಗೂ ಶಿವಣ್ಣ ಎಲ್ಲರೊಟ್ಟಿಗೆ ಫೊಟೊಗಳನ್ನು ತೆಗೆಸಿಕೊಂಡಿದ್ದಾರೆ. ತಮ್ಮನ್ನು ಎತ್ತಿ ಆಡಿಸಿದ ಜನರನ್ನು ಭೇಟಿಯಾಗಿದ್ದಾರೆ. ಕುಟುಂಬದ ಸಂಬಂಧಿಕರೊಟ್ಟಿಗೆ ಮಾತನಾಡಿ ತಮ್ಮ ಹಿರಿಯರ ಮನೆಯನ್ನು, ಊರನ್ನು, ಜನರನ್ನು, ಸಂಸ್ಕೃತಿಯನ್ನು ಮಕ್ಕಳಿಗೂ ಪರಿಚಯಿಸಿದ್ದಾರೆ.

    ರಾಜ್‌ಕುಮಾರ್ ಅಪಹರಣ ಆಗಿದ್ದು ಇದೇ ಮನೆಯಿಂದ

    ರಾಜ್‌ಕುಮಾರ್ ಅಪಹರಣ ಆಗಿದ್ದು ಇದೇ ಮನೆಯಿಂದ

    ದೊಡ್ಡಗಾಜನೂರಿನ ಮನೆ ಡಾ.ರಾಜ್‌ಕುಮಾರ್ ಹುಟ್ಟಿ ಬೆಳೆದ ಮನೆ. ಪುನೀತ್, ಶಿವಣ್ಣ, ರಾಘಣ್ಣನವರುಗಳು ತಮ್ಮ ಬಾಲ್ಯದ ಬಹು ಸಮಯವನ್ನು ಗಾಜನೂರಿನಲ್ಲಿ ಕಳೆದಿದ್ದಾರೆ. ಗಾಜನೂರಿನ ಬಗ್ಗೆ ದೊಡ್ಡ ಕುಟುಂಬಕ್ಕೆ ಎಲ್ಲಿಲ್ಲದ ಬಾಂಧವ್ಯ. ಇದೇ ಗಾಜನೂರಿನ ಮನೆಯಿಂದಲೇ ದಂತಚೋರ ವೀರಪ್ಪನ್, ಡಾ.ರಾಜ್‌ಕುಮಾರ್ ಅಪಹರಣ ಮಾಡಿದ್ದು. ಅಪಹರಣದ ಘಟನೆ ಬಳಿಕ ರಾಜ್‌ಕುಮಾರ್ ಅವರು ಗಾಜನೂರಿಗೆ ಬರುವುದು ಕಡಿಮೆ ಮಾಡಿಬಿಟ್ಟರು.

    ಶಿವಣ್ಣನ ಕೈಲಿವೆ ಹಲವು ಸಿನಿಮಾಗಳು

    ಶಿವಣ್ಣನ ಕೈಲಿವೆ ಹಲವು ಸಿನಿಮಾಗಳು

    ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಜೊತೆಗೆ ಶಿವಣ್ಣನ 123ನೇ ಸಿನಿಮಾ 'ಭೈರಾಗಿ'ಯ ಚಿತ್ರೀಕರಣ ಬಹುತೇಕ ಅಂತಿಮ ಹಂತದಲ್ಲಿದ್ದು, ಪೋಸ್ಟ್ ಪ್ರೊಡಕ್ಷನ್ ಪ್ರಾರಂಭವಾಗಲಿದೆ. ಅದಾದ ಬಳಿಕ ರಿಷಬ್ ಶೆಟ್ಟಿ ನಿರ್ದೇಶಿಸಲಿರುವ ಸಿನಿಮಾದಲ್ಲಿ ಶಿವಣ್ಣ ನಟಿಸಲಿದ್ದಾರೆ. ಅದರ ಬಳಿಕ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿಯೂ ಶಿವಣ್ಣ ನಟಿಸಲಿದ್ದಾರೆ. ಇವುಗಳ ಮಧ್ಯೆ ಹರ್ಷಾ ಜೊತೆಗೆ ಮತ್ತೊಂದು ಸಿನಿಮಾ ಹಾಗೂ ತೆಲುಗಿನ ಅನಿಲ್ ರವಿಪುಡಿ ಜೊತೆಗೆ ಒಂದು ಸಿನಿಮಾದಲ್ಲಿ ಶೀವರಾಜ್ ಕುಮಾರ್ ನಟಿಸಲಿದ್ದಾರೆ.

    'ದ್ವಿತ್ವ' ಸಿನಿಮಾದಲ್ಲಿ ನಟನೆ

    'ದ್ವಿತ್ವ' ಸಿನಿಮಾದಲ್ಲಿ ನಟನೆ

    ಪುನೀತ್ ರಾಜ್‌ಕುಮಾರ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಆ ಸಿನಿಮಾದ ಬಳಿಕ ಪವನ್ ಕುಮಾರ್ ನಿರ್ದೇಶನದ 'ದ್ವಿತ್ವ' ಸಿನಿಮಾದಲ್ಲಿ ಪುನೀತ್ ನಟಿಸಲಿದ್ದಾರೆ. ಅದರ ಬಳಿಕ 'ರಾಮಾ ರಾಮಾ ರೇ' ಖ್ಯಾತಿಯ ನಿರ್ದೇಶಕ ಸತ್ಯ ಜೊತೆಗೆ ಹೊಸ ಸಿನಿಮಾದಲ್ಲಿ ಪುನೀತ್ ಕಾಣಿಸಿಕೊಳ್ಳಲಿದ್ದಾರೆ. ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾದಲ್ಲಿಯೂ ಪುನೀತ್ ನಟಿಸಲಿದ್ದಾರೆ.

    English summary
    Puneeth Rajkumar, Shiva Rajkumar visited Dr Rajkumar's native Doddagajanuru along with their families.
    Saturday, July 31, 2021, 18:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X