»   » ಪುನೀತ್ ಕೈತುತ್ತು ಶಿವಣ್ಣರ ಬಾಯಿಗೆ ಹೋದ ಕಥೆ

ಪುನೀತ್ ಕೈತುತ್ತು ಶಿವಣ್ಣರ ಬಾಯಿಗೆ ಹೋದ ಕಥೆ

Posted By:
Subscribe to Filmibeat Kannada

ಆಶ್ಚರ್ಯವೆನಿಸಿದರೂ ಸತ್ಯವಾದ ಸಂಗತಿಯಿದು. ಶಿವಣ್ಣನ 'ಶಿವ' ಚಿತ್ರಕ್ಕೆ ಕಥೆ ಎಳೆ ಹೇಳಿದ್ದು ಸ್ವತಃ ಪುನೀತ್ ರಾಜ್ ಕುಮಾರ್. ಅವರೇ ನಾಯಕರಾಗಿ ನಟಿಸಬೇಕಾಗಿತ್ತು ಕೂಡ. ಈ ಸಂಬಂಧ ಮಾತುಕತೆಯೂ ನಡೆದಿತ್ತು. ಆದರೆ ಶಿವಣ್ಣನ ಮೈಲಾರಿ ಚಿತ್ರ ಗೆದ್ದ ನಂತರ ಕಥೆಯ ಹುಡುಕಾಟದಲ್ಲಿದ್ದ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರಿಗೆ ಈ ಕಥೆಯನ್ನು ಅಪ್ಪು ಹೇಳಿದ್ದರು. ಅವರನ್ನೇ ನಾಯಕರನ್ನಾಗಿಸಿ ಓಂ ಪ್ರಕಾಶ್ ನಿರ್ದೇಶಸುವುದೆಂದು ನಿರ್ಧರಿಸಲಾಗಿತ್ತು.

ಆದರೆ ದೈವ ನಿಯಮ ಬೇರೆಯೇ ಇತ್ತು. ಇದನ್ನು ಶಿವಣ್ಣ ಮಾಡಿದರೆ ಹೇಗಿರುತ್ತದೆ ಎಂಬ ಯೋಚನೆ ನಮಗೆ ಬಂತು. ಕಾರಣ ಆಗ ನಾವು ಕಥೆ ಹುಡುಕಾಡಿದ್ದು ಶಿವಣ್ಣರಿಗೆ ತಾನೇ? ಕಥೆ ಕೇಳಿದ ಶಿವಣ್ಣ "ಇದನ್ನು ನಾನೇ ಮಾಡುತ್ತೇನೆ" ಎಂದರು. ಹೀಗೆ ತಮ್ಮನ ಮನದಲ್ಲಿ ಮೂಡಿದ ಕಥೆಗೆ ಅಣ್ಣ ನಾಯಕರಾದರು. ಅಂದುಕೊಂಡಂತೆ ಓಂ ಪ್ರಕಾಶ್ ರಾವ್ ನಿರ್ದೆಶನದಲ್ಲಿ ನಮ್ಮ ಚಿತ್ರ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ" ಎಂದಿದ್ದಾರೆ ಶಿವ ಚಿತ್ರದ ನಿರ್ಮಾಪಕ ಶ್ರೀಕಾಂತ್.

ಶಿವ ಚಿತ್ರದ ಆಡಿಯೋ ಬಿಡುಗಡೆಯನ್ನು ಮೇ 30, 2012 ರಂದು ಅದ್ದೂರಿಯಾಗಿ ಚಿತ್ರದುರ್ಗದಲ್ಲಿ ನಡೆಸಲು ನಿರ್ಧರಿಸಿದೆ ಚಿತ್ರತಂಡ. ರಾಗಿಣಿ ನಾಯಕಿಯಾಗಿರುವ ಈ ಚಿತ್ರದ ಹಾಡೊಂದರಲ್ಲಿ ಹಾಟ್ ಬ್ಯೂಟಿ ಸುಮನ್ ರಂಗನಾಥ್ ಕೂಡ ಅಭಿನಯಿಸಿದ್ದಾರೆ. ಜಾನ್ ಕೊಕೈನ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಶಿವ ಚಿತ್ರವನ್ನು ಜೂನ್ 15 ರಂದು ತೆರೆಗೆ ತರುವ ಪ್ಯತ್ನದಲ್ಲಿದ್ದಾರೆ ಕೆಪಿ ಶ್ರೀಕಾಂತ್. (ಒನ್ ಇಂಡಿಯಾ ಕನ್ನಡ)

English summary
Shiva movie producer KP Srikanth revelied that 'Shiva' movie story is told by Power Star Puneeth Rajkumar. He would be the hero of this, but by god's wishes, his brother Shivarajkumar selected as hero for Shiva.
Please Wait while comments are loading...