For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಹುಟ್ಟೂರಿನಲ್ಲಿ ಪುನೀತ್ ರಾಜ್ ಕುಮಾರ್ ಶೂಟಿಂಗ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗುರುವಾರ ಅಣ್ಣಾವ್ರ ಹುಟ್ಟೂರು ಗಾಜನೂರಿಗೆ ಭೇಟಿ ನೀಡಿದ್ದಾರೆ. ತಾಳವಾಡಿ ಸಮೀಪದ ದೊಡ್ಡ ಗಾಜನೂರಿಗೆ ಆಗಮನಿಸಿದ ಪುನೀತ್ ರಾಜ್ ಕುಮಾರ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

  ಗಾಜನೂರಿಗೆ ಭೇಟಿ ನೀಡಿ ಅಪ್ಪನನ್ನು ನೆನಪು ಮಾಡಿಕೊಂಡ ಪುನೀತ್ ರಾಜಕುಮಾರ್ | Filmibeat Kannada

  ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಸಾಕ್ಷ್ಯಚಿತ್ರದ ಚಿತ್ರೀಕರಣದಲ್ಲಿ ಕಳೆದ ಮೂರು ದಿನಗಳಿಂದ ಪಾಲ್ಗೊಂಡಿದ್ದ ಪುನೀತ್ ರಾಜ್ ಕುಮಾರ್, ನಂತರ ಗಾಜನೂರಿನ ಅಣ್ಣಾವ್ರ ಮನೆಗೆ ಭೇಟಿ ನೀಡಿ ಸಮಯ ಕಳೆದರು.

  ಪುನೀತ್ 'ಯುವರತ್ನ' ತಂಡದಿಂದ ಕ್ರಿಸ್ಮಸ್ ಗೆ ಭರ್ಜರಿ ಉಡುಗೊರೆ

  ರಾಜ್ ಕುಮಾರ್ ಅವರು ಓಡಾಡುತ್ತಿದ್ದ ಸ್ಥಳಗಳಿಗೆ ಭೇಟಿ ನೀಡಿ ನೆನಪು ಮೆಲುಕು ಹಾಕಿದರು. ರಾಜ್ ಅವರ ಜಮೀನಿನಲ್ಲಿರುವ ಆಲದಮರದ ಬಳಿಗೂ ತೆರಳಿ ಗಮನ ಸೆಳೆದರು.

  ಪುನೀತ್ ರಾಜ್ ಕುಮಾರ್ ಅವರು ಗಾಜನೂರಿಗೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಜನರು ಅವರ ಮನೆಯ ಮುಂದೆ ನೆರೆದರು. ನಂತರ ಜನರನ್ನು ಮಾತನಾಡಿಸಿದ ಅಪ್ಪು ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಸೆಲ್ಫಿಗೆ ಫೋಸ್ ನೀಡಿದರು.

  ಗಾಜನೂರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  'ಅಲೆಯಾಗಿ ಬಾ' ಮೂಲಕ ಭವಿಷ್ಯದ ಕನಸು ಹೊತ್ತು ಬಂದ ರಥ ಕಿರಣ್

  ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು, ಬೂಡಿಪಡಗ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ವನ್ಯಜೀವಿಗಳ ಬಗ್ಗೆ ಈ ಸಾಕ್ಷ್ಯಚಿತ್ರ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.

  English summary
  Kannada actor Puneeth rajkumar shooting shortfilm at dr rajkumar's birthpalce Gajanur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X