'ಗೀತಾ' ಸಿನಿಮಾಗೆ ಪುನೀತ್ ರಾಜ್ ಕುಮಾರ್ ಗಾಯನ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಾಗ ಹಾಡು ಹಾಡುತ್ತಾರೆ. ಇತ್ತೀಚಿಗಷ್ಟೆ 'ಕಿಸ್' ಸಿನಿಮಾಗೆ ಹಾಡಿದ್ದ ಅಪ್ಪು ಈಗ 'ಗೀತಾ' ಸಿನಿಮಾಗೆ ಧ್ವನಿ ನೀಡಿದ್ದಾರೆ.
ಗಣೇಶ್ ಅಭಿನಯದ 'ಗೀತಾ' ಸಿನಿಮಾದ ಒಂದು ಹಾಡನ್ನು ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಸಿನಿಮಾದಲ್ಲಿ ಗಣೇಶ್ ಕನ್ನಡ ಹೋರಾಟಗಾರ ಆಗಿದ್ದು, ಕನ್ನಡವೇ ಸತ್ಯ ಎಂಬ ಹಾಡಿಗೆ ಪವರ್ ಫುಲ್ ಧ್ವನಿ ಸಿಕ್ಕಿದೆ.
Recommended Video

ಈ ಹಾಡನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿದ್ದಾರೆ. ಸಿನಿಮಾಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಈ ಹಿಂದೆ ಸಂತೋಷ್ ಜೊತೆಗೆ ಕೆಲಸ ಮಾಡುತ್ತಿದ್ದ ವಿಜಯ್ ನಾಗೇಂದ್ರ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.
ಈ ಹಿಂದೆ ಗಣೇಶ್ ನಟನೆಯ 'ಜೂಮ್' ಸಿನಿಮಾಗೆ ಹಾಡಿದ್ದ ಪುನೀತ್ ಈಗ ಮತ್ತೆ ಗೋಲ್ಡನ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಹಾಡು ಹಾಡಿದ ಪುನೀತ್ ಗೆ ಗಣೇಶ್ ಧನ್ಯವಾದ ತಿಳಿಸಿದ್ದಾರೆ.

ಶಾನ್ವಿ ಶ್ರೀವತ್ಸವ, ಪಾರ್ವತಿ ಅರುಣ್ ಹಾಗೂ ಪ್ರಯಾಗ ಮಾರ್ಟಿನ್ ಚಿತ್ರದ ನಾಯಕಿಯರಾಗಿದ್ದಾರೆ. ಅಂದಹಾಗೆ, ಗೀತಾ ಸಿನಿಮಾ ಸಪ್ಟೆಂಬರ್ 27 ರಂದು ಬಿಡುಗಡೆ ಆಗುತ್ತಿದೆ.


Click it and Unblock the Notifications











