'ಪೈಲ್ವಾನ್' ವೇದಿಕೆಯಲ್ಲಿ ಕಿಚ್ಚನ 'ಅಪ್ಪು'ಗೆ: ಸುದೀಪ್ ಗಾಗಿ ಹಾಡಿದ ಪುನೀತ್
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ನೇಹ ನಿನ್ನೆ ಮೊನ್ನೆಯದಲ್ಲ. ಸ್ಯಾಂಡಲ್ ವುಡ್ ನ ಈ ಸ್ಟಾರ್ ನಟರು ಚಿಕ್ಕವರಾಗಿದ್ದಾಗಿನಿಂದಲೂ ಗೆಳೆಯರು. ಅದೆ ಗೆಳೆತನ, ಪ್ರೀತಿ, ವಿಶ್ವಾಸವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್, ಕಾಂಪಿಟೀಶನ್ ಏನೆ ಇದ್ದರು ಇವರಿಬ್ಬರ ಸ್ನೇಹ, ಬಾಂಧವ್ಯ ಗಟ್ಟಿಯಾಗಿದೆ. ಆಗಾಗ ಅಪರೂಪಕ್ಕೊಮ್ಮೆ ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ರಸದೌತಣ ನೀಡುತ್ತಾರೆ. ಸ್ಟಾರ್ ಗೆಳೆಯರಿಬ್ಬರು ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಪೈಲ್ವಾನ್ ವೇದಿಕೆಯಲ್ಲಿ ಪವರ್ ಸ್ಟಾರ್
ಇಬ್ಬರು ಸ್ಟಾರ್ ನಟರ ಸಮ್ಮಿಲನಕ್ಕೆ ಕಾರಣವಾಗಿದ್ದು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ. ಪೈಲ್ವಾನ್ ಆಡಿಯೋ ರಿಲೀಸ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಗೆಸ್ಟ್ ಆಗಿ ಆಹ್ವಾನ ನೀಡಲಾಗಿತ್ತು.

ಅಪ್ಪು-ಕಿಚ್ಚ ಅಂದು ಇಂದು
ಪೈಲ್ವಾನ್ ಆಡಿಯೋ ರಿಲೀಸ್ ವೇದಿಕೆಯಲ್ಲಿ ಅಪರೂಪದ ಸುಂದರ ಕ್ಷಣಗಳನ್ನು ಅಭಿಮಾನಿಗಳು ಕಣ್ತುಂಬಿಕೊಂಡರು. ಅದ್ದೂರಿ ಕಾರ್ಯಕ್ರಮದಲ್ಲಿ ಅಪ್ಪು ಮತ್ತು ಕಿಚ್ಚ ಇಬ್ಬರು ತಬ್ಬಿಕೊಳ್ಳುವ ಮೂಲಕ ಮತ್ತೆ ಬಾಲ್ಯಕ್ಕೆ ಹೊರಟು ಹೋಗಿದ್ರು. ಬಾಲ್ಯದ ಗೆಳೆಯರಾಗಿದ್ದ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಇಬ್ಬರು ಅಂದು ತೆಗೆಸಿಕೊಂಡಿದ್ದ ಫೊಟೋದ ಹಾಗೆ ಇಂದು ವೇದಿಕೆ ಮೇಲೆ ನಿಂತು ಮತ್ತದೆ ಪೋಸ್ ನಲ್ಲಿ ಮಿಂಚಿದ್ದಾರೆ.

'ಬಾನದಾರಿಯಲ್ಲಿ' ಹಾಡು ಹಾಡಿದ ಅಪ್ಪು-ದೀಪು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿರುವ 'ಬಾನದಾರಿಯಲ್ಲಿ ಸೂರ್ ಜಾರಿ ಹೋದ' ಹಾಡು ಸುದೀಪ್ ಗೆ ತುಂಬ ಇಷ್ಟವಾದ ಹಾಡು. ಈ ಹಾಡಿನ ಬಗ್ಗೆ ಸುದೀಪ್ ಈ ಹಿಂದೆಯೂ ಹೇಳಿಕೊಂಡಿದ್ದರು. ಈಗ ಅದೆ ಹಾಡನ್ನು ಮತ್ತೆ ಪೈಲ್ವಾನ್ ಆಡಿಯೋ ರಿಲೀಸ್ ವೇದಿಕೆ ಮೇಲೆ ಹಾಡಿದ್ದಾರೆ. ಪುನೀತ್ ಮತ್ತು ಸುದೀಪ್ ಇಬ್ಬರು ಈ ಹಾಡನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಅಂದು ಪುನೀತ್ ಸಿನಿಮಾಗೆ ಸುದೀಪ್ ಗೆಸ್ಟ್
ಈ ಹಿಂದೆ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಶತದಿನೋತ್ಸವ ಕಾರ್ಯಕ್ರಮಕ್ಕೆ ಸುದೀಪ್ ಗೆಸ್ಟ್ ಆಗಿದ್ದರು. ರಾಜಕುಮಾರನ ವೇದಿಕೆ ಮೇಲೆ ಸುದೀಪ್ ಮತ್ತು ಪುನೀತ್ ಇಬ್ಬರು ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದರು. ಮತ್ತದೆ ಬಾಲ್ಯದ ಫೊಟೋದ ನೆನಪನ್ನು ಮೆಲಕುಹಾಕಿದ್ದರು. ಈಗ ಪೈಲ್ವಾನ್ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲೂ ಪುನೀತ್ ಮತ್ತು ಸುದೀಪ್ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಇಬ್ಬರು ಸಂತಸ ಪಟ್ಟು ಅಭಿಮಾನಿಗಳನ್ನು ರಂಜಿಸಿದ್ದಾರೆ.


Click it and Unblock the Notifications











