Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಸ್ಟರ್ ಆನಂದ್ ಜೊತೆ ಪವರ್ ಸ್ಟಾರ್ ಪುನೀತ್
ಪುನೀತ್ ರಾಜ್ ಕುಮಾರ್ ಹಾಗೂ ಮಾಸ್ಟರ್ ಆನಂದ್ ಇಬ್ಬರೂ ಒಂದು ಕಾಲದಲ್ಲಿ ಬಹು ಬೇಡಿಕೆಯ ಬಾಲನಟರಾಗಿದ್ದರು. ಹೀರೋಗಳ ಮಟ್ಟಿಗೆ ಈ ಇಬ್ಬರು ಬಾಲನಟರು ಜನಪ್ರಿಯತೆ ಪಡೆದಿದ್ದರು. ಹೀಗಿರುವಾಗ, ಈ ಇಬ್ಬರು ನಟರು ಈಗ ಒಂದಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಮಾಸ್ಟರ್ ಆನಂದ್ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಬ್ಬರು ನಟರು ಒಟ್ಟಿಗೆ ಇರುವುದನ್ನು ನೋಡಿ, ಪುನೀತ್ ಜೊತೆಗೆ ಮಾಸ್ಟರ್ ಆನಂದ್ ಸಿನಿಮಾ ಮಾಡುತ್ತಿದ್ದಾರ ಎನ್ನುವ ಕುತೂಹಲ ಮೂಡಿತ್ತದೆ.
'ನಟ ಸಾರ್ವಭೌಮ'ದಲ್ಲಿ ಪುನೀತ್ ಬಳಸಿರೋ ಕ್ಯಾಮರಾ ಬೆಲೆ ಎಷ್ಟು ಗೊತ್ತೆ?
ಆದರೆ, ಪುನೀತ್ ಹಾಗೂ ಮಾಸ್ಟರ್ ಆನಂದ್ ಯಾವುದೇ ಸಿನಿಮಾ ಮಾಡುತ್ತಿಲ್ಲ. ಬದಲಿಗೆ ಮಾಸ್ಟರ್ ಆನಂದ್ ಗೆ ಪುನೀತ್ ರಾಜ್ ಕುಮಾರ್ ಒಂದು ಹಾಡು ಹಾಡಿದ್ದಾರೆ.
''ಇವತ್ತು ಮಾಸ್ಟರ್ ಆನಂದ್ ಗೆ ಒಂದ್ ಹಾಡ್ ಹಾಡಿದೆ ತುಂಬಾ ಖುಷಿ ಆಯ್ತು ಮಾಸ್ಟರ್ ಆನಂದ್ ನೋಡಿದಾಗ್ಲೆಲ್ಲ ಒಂದೇ ನೆನಪಾಗೋದು ಗಣೇಶನ ಮದುವೆ.. ಅವತ್ತಿನಿಂದ ಇವತ್ತಿನವರೆಗೂ ಒಳ್ಳೆ ಕೆಲಸ ಮಾಡಿದ್ದಾರೆ...... All the best Anand..'' ಎಂದು ಪುನೀತ್ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇವತ್ತು ಮಾಸ್ಟರ್ ಆನಂದ್ಗೆ ಒಂದ್ ಹಾಡ್ ಹಾಡಿದೆ ತುಂಬಾ ಖುಷಿ ಆಯ್ತು ಮಾಸ್ಟರ್ ಆನಂದ್ ನೋಡಿದಾಗ್ಲೆಲ್ಲ ಒಂದೇ ನೆನಪಾಗೋದು ಗಣೇಶನ ಮದುವೆ.. ಅವತ್ತಿನಿಂದ ಇವತ್ತಿನವರೆಗೂ ಒಳ್ಳೆ ಕೆಲಸ ಮಾಡಿದ್ದಾರೆ...... All the best Anand..... pic.twitter.com/nyWnwwSHlU
— Puneeth Rajkumar (@PuneethRajkumar) January 28, 2019
ಅಂದಹಾಗೆ, ಪುನೀತ್ ಹಾಡಿರುವುದು ಮಾಸ್ಟರ್ ಆನಂದ್ ಅವರ ಸಿನಿಮಾಗೋ ಅಥವಾ ಧಾರಾವಾಹಿಗೋ ಎನ್ನುವುದು ತಿಳಿದಿಲ್ಲ.