ಅನೀಶ್ - ಪುನೀತ್ ರಾಜ್ ಕುಮಾರ್ ಜೋಡಿಯ ಹ್ಯಾಟ್ರಿಕ್ ಹಾಡು
ಪುನೀತ್ ರಾಜ್ ಕುಮಾರ್ ಆಗಾಗ ಹಾಡುಗಾರನಾಗಿ ಪ್ರೇಕ್ಷಕರ ಮುಂದೆ ಬರುತ್ತಾರೆ. ಈಗ ಅನೀಶ್ ರ ಹೊಸ ಸಿನಿಮಾದ ಹಾಡಿಗೆ ಪುನೀತ್ ಧ್ವನಿ ನೀಡಿದ್ದಾರೆ.
ಅನೀಶ್ ನಟನೆಯ 'ಅಕಿರ' ಸಿನಿಮಾಗೆ ಹಾಡಿದ್ದ ಪುನೀತ್ ಆ ನಂತರ 'ವಾಸು ನನ್ನ ಪಕ್ಕಾ ಕಮರ್ಷಿಯಲ್' ಸಿನಿಮಾದ ಹಾಡಿನ್ನು ಹಾಡಿದ್ದರು. ಈಗ ಅನೀಶ್ ಹೊಸ ಸಿನಿಮಾ 'ರಾಮಾರ್ಜುನ' ಹಾಡನ್ನು ಅಪ್ಪು ಹಾಡಿದ್ದಾರೆ.
ತಮ್ಮ ಸಿನಿಮಾಗೆ ಪುನೀತ್ ಹಾಡಿರುವ ವಿಷಯವನ್ನು ಅನೀಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪುನೀತ್ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಇದು ಅನೀಶ್ ಮತ್ತು ಪುನೀತ್ ಕಾಂಬಿನೇಶನ್ ನ ಮೂರನೇ ಹಾಡಾಗಿದೆ.

ಈ ಹಿಂದೆ ಅನೀಶ್ ಚಿತ್ರಕ್ಕೆ ಅಪ್ಪು ಹಾಡಿದ್ದ ಎರಡೂ ಹಾಡುಗಳು ಹಿಟ್ ಆಗಿದ್ದು, ಈ ಹಾಡಿನ ಮೇಲೆ ನಿರೀಕ್ಷೆ ಇದೆ. ಆನಂದ್ ರಾಜವಿಕ್ರಂ ಸಿನಿಮಾಗೆ ಸಂಗೀತ ನೀಡಿದ್ದಾರೆ.
'ರಾಮಾರ್ಜುನ' ಅನೀಶ್ ನಟನೆ, ನಿರ್ದೇಶನ ಮತ್ತು ನಿರ್ಮಾಣ ಸಿನಿಮಾವಾಗಿದೆ. 'ವಾಸು ನನ್ನ ಪಕ್ಕಾ ಕಮರ್ಷಿಯಲ್' ಚಿತ್ರದ ನಾಯಕಿ ನಿಶ್ಮಿಕಾ ನಾಯ್ಡು ಮತ್ತೆ ಅನೀಶ್ ಗೆ ಜೋಡಿಯಾಗಿದ್ದಾರೆ.
English summary
Actor Puneeth Rajkumar sings for Ramarjuna kannada movie.


Click it and Unblock the Notifications