For Quick Alerts
  ALLOW NOTIFICATIONS  
  For Daily Alerts

  ಸಾರ್ವಜನಿಕರಿಗೆ ರಿಷಿ ಚಿತ್ರದಲ್ಲಿ ಅಪ್ಪು ಹಾಡು ಕೇಳುವ ಸುವರ್ಣಾವಕಾಶ

  |

  'ಕವಲುದಾರಿ' ಚಿತ್ರದ ಬಳಿಕ ನಟ ರಿಷಿ 'ಸಾರ್ವಜನಿಕರಿಗೆ ಸುವರ್ಣಾವಕಾಶ' ಎಂಬ ಮನರಂಜನಾತ್ಮಕ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

  ಇದೀಗ, ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಚಿತ್ರದ ಒಂದು ಹಾಡಿಗೆ ಅಪ್ಪು ಧ್ವನಿಗೂಡಿಸಿದ್ದಾರೆ. ಈ ಸುದ್ದಿಯನ್ನ ಸ್ವತಃ ರಿಷಿ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  ಸದ್ಯದಲ್ಲೇ ಈ ಹಾಡುನ್ನ ಕೇಳುವ ಅವಕಾಶ ಸಿಗಲಿದೆ ಎಂದಷ್ಟೆ ಸುಳಿವು ಬಿಟ್ಟುಕೊಟ್ಟಿರುವ ಚಿತ್ರತಂಡ ದಿನಾಂಕ ಪ್ರಕಟಿಸಿಲ್ಲ. ಮಿಧುನು ಮುಕುಂದನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

  ತಮಿಳಿನಲ್ಲಿ 'ಕವಲುದಾರಿ' ರೀಮೇಕ್: ಅಪ್ಪ ಮತ್ತು ಮಗನೇ ಹೀರೋಗಳುತಮಿಳಿನಲ್ಲಿ 'ಕವಲುದಾರಿ' ರೀಮೇಕ್: ಅಪ್ಪ ಮತ್ತು ಮಗನೇ ಹೀರೋಗಳು

  ಅನೂಪ್ ರಾಮಸ್ವಾಮಿ ಕಶ್ಯಪ್ ಅವರು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ದೇವರಾಜ್ ಆರ್, ಪ್ರಶಾಂತ್ ರೆಡ್ಡಿ, ಜನಾರ್ಧನ್ ಚಿಕ್ಕಣ್ಣ ಬಂಡವಾಳ ಹಾಕಿದ್ದಾರೆ.

  ರಿಷಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಧನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಸಿದ್ದು ಮೂಲಿಮನಿ, ದತ್ತಣ್ಣ, ರಂಗಾಯಣ ರಘು, ಶೀನು, ಮಿತ್ರ ಸೇರಿದಂತೆ ಹಲವು ನಟಿಸಿದ್ದಾರೆ.

  ಈ ಹಿಂದೆ ಪುನೀತ್ ರಾಜ್ ಕುಮಾರ್ ನಿರ್ಮಾಣದ ಕವಲುದಾರಿ ಚಿತ್ರದಲ್ಲಿ ರಿಷಿ ನಟಿಸಿದ್ದರು. ಬಹುಶಃ ಪಿ.ಆರ್.ಕೆ ಬ್ಯಾನರ್ ನಲ್ಲಿ ಇನ್ನೊಂದು ಸಿನಿಮಾ ಮಾಡುವ ಆಸೆ ಇದೆ ರಿಷಿ ಹೇಳಿಕೊಂಡಿದ್ದರು.

  English summary
  Power star Puneeth Rajkumar Sings Song For Sarvajanikarige Suvarnavakasha movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X