»   » ಹೊಸ ಟಿವಿ ಶೋ ಬಗ್ಗೆ 'ಪವರ್ ಸ್ಟಾರ್' ಬಿಚ್ಚಿಟ್ಟ ಇಂಟ್ರೆಸ್ಟಿಂಗ್ ಸಂಗತಿ

ಹೊಸ ಟಿವಿ ಶೋ ಬಗ್ಗೆ 'ಪವರ್ ಸ್ಟಾರ್' ಬಿಚ್ಚಿಟ್ಟ ಇಂಟ್ರೆಸ್ಟಿಂಗ್ ಸಂಗತಿ

Posted By:
Subscribe to Filmibeat Kannada

ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಕನ್ನಡ ಕೋಟ್ಯಾಧಿಪತಿ' ಎಂಬ ಗೇಮ್ ಶೋ ನಡೆಸಿಕೊಡುತ್ತಿದ್ದರು. ಈ ಕಾರ್ಯಕ್ರಮದ ಮೂಲಕ ಪುನೀತ್ ಚೊಚ್ಚಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿದ್ದರು. ಈ ಶೋ ಎರಡು ವರ್ಷ ಯಶಸ್ವಿಯಾಗಿ ನಡೆಯಿತು. ಆಮೇಲೆ ಅದೇನ್ ಆಯ್ತೋ ಗೊತ್ತಿಲ್ಲ, ಮೂರನೇ ಆವೃತ್ತಿ ಆರಂಭವಾಗಲಿಲ್ಲ.

ಈಗ ಪುನೀತ್ ರಾಜ್ ಕುಮಾರ್ ಮತ್ತೆ ಟಿವಿ ಶೋ ನಡೆಸಿಕೊಡುತ್ತಿದ್ದಾರೆ. ಆದ್ರೆ, ಈ ಬಾರಿ ಕನ್ನಡದ ಕೋಟ್ಯಾಧಿಪತಿ ಅಲ್ಲ, ಹೊಸದೊಂದು ಟಾಕ್ ಶೋ.

ಈ ಹೊಸ ಶೋ ಬಗ್ಗೆ ಸ್ವತಃ ಪುನೀತ್ ಅವರೇ ಮನಬಿಚ್ಚಿ ಮಾತನಾಡಿದ್ದು, ಈ ಕಾರ್ಯಕ್ರಮದ ಬಗ್ಗೆ ತಮ್ಮ ನಿರೀಕ್ಷೆ, ಕುತೂಹಲ ಹಾಗೂ ಅನುಭವ ಹೇಗಿರುತ್ತೆ ಎಂಬುದನ್ನ ಹಂಚಿಕೊಂಡಿದ್ದಾರೆ. ಮುಂದೆ ಓದಿ.....

4 ವರ್ಷದ ನಂತರ ಟಿವಿ ಶೋ ಖುಷಿ ಆಗ್ತಿದೆ

''ಮತ್ತೆ ನಾಲ್ಕು ವರ್ಷದ ನಂತರ ಟಿವಿ ಕಾರ್ಯಕ್ರಮಕ್ಕೆ ಬರ್ತಿರೋದು ಖುಷಿಯಾಗ್ತಿದೆ. ಯಾವ ರೀತಿ ಕಾರ್ಯಕ್ರಮ, ನಾನು ಹೇಗೆ ನಡೆಸಿಕೊಂಡು ಹೋಗಬಹುದು ಎಂಬ ಕುತೂಹಲ ನನಗೂ ಇದೆ'' ಪುನೀತ್ ರಾಜ್ ಕುಮಾರ್, ನಟ

ವಿಡಿಯೋ: ಪುನೀತ್ ನಿರೂಪಣೆಯ ಹೊಸ ರಿಯಾಲಿಟಿ ಶೋ ಪ್ರೋಮೋ ನೋಡಿ

ಟಿವಿ ಶೋನಿಂದ ನನಗೆ ಸಿಗುವ ಖುಷಿ ಅಂದ್ರೆ....?

''ನನಗೆ ಟಿವಿ ಕಾರ್ಯಕ್ರಮ ಮಾಡಿದಾಗ ಸಿಗುವಂತಹ ಖುಷಿ ಏನಪ್ಪಾ ಅಂದ್ರೆ, ಪ್ರತಿ ಸಲ ಶೋ ಮಾಡಿದಾಗಲೂ, ಅಲ್ಲಿಗೆ ಬರುವಂತಹ ಸ್ಪರ್ಧಿಗಳು, ಅತಿಥಿಗಳು ಹೇಗಿರ್ತಾರೆ, ಅವರನ್ನ ನಾನು ಹೇಗೆ ಮಾತಾಡಿಸುತ್ತೇನೆ, ನನ್ನ ಜೊತೆ ಅವರು ಎಷ್ಟರ ಮಟ್ಟಿಗೆ ಮಾತನಾಡುತ್ತಾರೆ, ಅವರನ್ನ ಹೇಗೆ ಕಂಫರ್ಟ್ ಆಗಿ ಇರಿಸಿಕೊಳ್ಳಬಹುದು ಎಂಬ ಥ್ರಿಲ್ ನನಗಿದೆ'' - ಪುನೀತ್ ರಾಜ್ ಕುಮಾರ್, ನಟ

ಪರಮೇಶ್ವರ್ ಗುಂಡ್ಕಲ್ ಗಮನಕ್ಕೆ ಬಾರದೆ 'ಪ್ರೋಮೋ' ಬಿಡುಗಡೆ ಆಗಿದೆ.!

ಇದೊಂದು ಫ್ಯಾಮಿಲಿ ಶೋ

''ಇದೊಂದು ಫ್ಯಾಮಿಲಿ ಶೋ ಆಗಿರವುದರಿಂದ ''ನಮ್ಮ ಬಾಲ್ಯದ ನೆನಪು ನೆನಪಾಗುತ್ತೆ. ಒಂದು ಫ್ಯಾಮಿಲಿ ಅಂದ್ರೆ, ಅಜ್ಜ, ಅಜ್ಜಿ, ದೊಡ್ಡಪ್ಪ, ಚಿಕ್ಕಪ್ಪ, ಅಣ್ಣ, ತಮ್ಮ, ಮಕ್ಕಳು ಹೀಗೆ ಎಲ್ಲರೂ ಒಟ್ಟಿಗೆ ಇರುವ ಫ್ಯಾಮಿಲಿ ಜೊತೆ ಒಂದು ಸಂವಾದ. ಇದೇ ಈ ಕಾರ್ಯಕ್ರಮ ಪರಿಕಲ್ಪನೆ'' - ಪುನೀತ್ ರಾಜ್ ಕುಮಾರ್, ನಟ

ಕನ್ನಡದ ಕೋಟ್ಯಾಧಿಪತಿ

ಅಂದ್ಹಾಗೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಈ ಹಿಂದೆ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮವನ್ನ ನಡೆಸಿಕೊಡುತ್ತಿದ್ದರು. ಆದ್ರೆ, ಕಳೆದ ಮೂರು ವರ್ಷದಿಂದ ಈ ಕಾರ್ಯಕ್ರಮ ಪ್ರಸಾರವಾಗಿಲ್ಲ. ಹೀಗಾಗಿ, ಹಲವು ವರ್ಷದ ನಂತರ ಅಪ್ಪು ಮತ್ತೆ ಟಿವಿಗೆ ಆಗಮಿಸುತ್ತಿದ್ದಾರೆ.

ಹೊಸ ಶೋ ಯಾವಾಗ ಪ್ರಾರಂಭ

ಸದ್ಯ, ಪುನೀತ್ ನಡೆಸಿಕೊಡಲಿರುವ ಹೊಸ ಶೋದ ಪ್ರೋಮೋ ಮತ್ತು ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, ಟಿವಿ ಪ್ರೇಕ್ಷಕರು ಫುಲ್ ಖುಷಿಯಾಗಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದ್ದು, ಸದ್ಯಕ್ಕೆ ಸಮಯ ಹಾಗೂ ದಿನಾಂಕ ನಿಗದಿಯಾಗಿಲ್ಲ.

ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಗೆ ಪವರ್ ಸ್ಟಾರ್ ಪುನೀತ್ ನಿರೂಪಕ!

English summary
Kannada Actor, Power star Puneeth Rajkumar Speaks About His New TV Show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada