»   » 'ಒಂದು ಮೊಟ್ಟೆಯ ಕಥೆ' ಸಿನಿಮಾ ನೋಡಿ ಪುನೀತ್ ಕೊಟ್ಟ ರಿವ್ಯೂ ಹೀಗಿದೆ

'ಒಂದು ಮೊಟ್ಟೆಯ ಕಥೆ' ಸಿನಿಮಾ ನೋಡಿ ಪುನೀತ್ ಕೊಟ್ಟ ರಿವ್ಯೂ ಹೀಗಿದೆ

Posted By:
Subscribe to Filmibeat Kannada

'ಒಂದು ಮೊಟ್ಟೆಯ ಕಥೆ' ಸಿನಿಮಾ ರಿಲೀಸ್ ಆಗಿ ಎಲ್ಲ ಕಡೆ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಚಿತ್ರಮಂದಿರ, ಟಿವಿ, ಫೇಸ್ ಬುಕ್ ಎಲ್ಲ ಕಡೆ ಈಗ 'ಮೊಟ್ಟೆ'ಯ ಗುಣಗಾನ ನಡೆಯುತ್ತಿದೆ.

'ಒಂದು ಮೊಟ್ಟೆಯ ಕಥೆ' ಸಿನಿಮಾವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ನಿನ್ನೆ ನೋಡಿದ್ದಾರೆ. ಸಿನಿಮಾ ನೋಡಿದ ಮೇಲೆ ಚಿತ್ರದ ಬಗ್ಗೆ ಸಖತ್ ಆಗಿ ಪುನೀತ್ ಮಾತನಾಡಿದ್ದಾರೆ.

ಒಂದು ಮೊಟ್ಟೆಯ ಕಥೆ : ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ

'ಒಂದು ಮೊಟ್ಟೆಯ ಕಥೆ' ಸಿನಿಮಾದ ಬಗ್ಗೆ ಪುನೀತ್ ರಿವ್ಯೂ ಇಲ್ಲಿದೆ ಓದಿ....

ಐ ಜಸ್ಟ್ ಲವ್ ದಿ ಫಿಲ್ಮ್

''ಐ ಜಸ್ಟ್ ಲವ್ ದಿ ಫಿಲ್ಮ್.. ನಿನ್ನೆ ರಾತ್ರಿ ಸಿನಿಮಾ ನೋಡಿದೆ. ರಾಜ್ ಶೆಟ್ಟಿ... ಅಮೇಜಿಂಗ್ ಪರ್ಫಾರ್ಮೆನ್ಸ್. ಎಲ್ಲರ ಅಭಿನಯ ಚೆನ್ನಾಗಿದೆ. ತುಂಬ ಅದ್ಭುತವಾಗಿದೆ ಸಿನಿಮಾ'' - ಪುನೀತ್ ರಾಜ್ ಕುಮಾರ್ , ನಟ

ಹೆಮ್ಮೆ ಎನಿಸಿತು

''ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾ ಏನು ಅಂತ ಅನುಭವಿಸುವುದಕ್ಕೆ ಹೋಗಿ ಸಿನಿಮಾ ನೋಡಿದರೇನೇ ಗೊತ್ತಾಗುತ್ತೆ. ತುಂಬ ಸಂತೋಷ ಆಯ್ತು. ಸಿನಿಮಾದಲ್ಲಿ ತಂದೆಯವರ ಬಗ್ಗೆ ಹೇಳಿರುವ ಮಾತುಗಳು ಮಗನಾಗಿ ನನಗೆ ತುಂಬ ಹೆಮ್ಮೆ ಎನಿಸಿತು'' - ಪುನೀತ್ ರಾಜ್ ಕುಮಾರ್ , ನಟ

ನಟಿ ಶ್ರದ್ಧಾ ಶ್ರೀನಾಥ್ ಬರೆದ 'ಒಂದು ಮೊಟ್ಟೆಯ ಕಥೆ' ವಿಮರ್ಶೆ

ಇನ್ನೊಂದು ಸಲ ನೋಡಿ

''ಥ್ಯಾಂಕ್ ಯು ಸೋ ಮಚ್ ಅಂಡ್ ಇದು ವಂಡರ್ಫುಲ್ ಫಿಲ್ಮ್. ನೋಡದೆ ಇರುವವರು ಸಿನಿಮಾ ನೋಡಿ... ನೋಡಿರುವವರು ಇನ್ನೊಂದು ಸಲ ನೋಡಿ'' - ಪುನೀತ್ ರಾಜ್ ಕುಮಾರ್ , ನಟ

'ಮೊಟ್ಟೆಯ ಕಥೆ' ನೋಡಿ ಗಣೇಶ್ ಮತ್ತು ಪ್ರಜ್ವಲ್ ಹೇಳಿದ್ರು ಅಸಲಿ ಕಥೆ

ಸಿನಿಮಾ ನೋಡಿದವರು

ನಟ ಗಣೇಶ್, ಪ್ರಜ್ವಲ್ ದೇವರಾಜ್, ಧನಂಜಯ್, ರವಿಶಂಕರ್, ಶ್ರದ್ಧಾ ಶ್ರೀನಾಥ್ ಸೇರಿದಂತೆ ಅನೇಕರು ಈಗಾಗಲೇ ಸಿನಿಮಾ ನೋಡಿ. ಒಳ್ಳೆಯ ಸಿನಿಮಾ ಅಂತ ಹೇಳಿದ್ದಾರೆ.

'ಒಂದು ಮೊಟ್ಟೆಯ ಕಥೆ' ಬಗ್ಗೆ

'ಒಂದು ಮೊಟ್ಟೆಯ ಕಥೆ' ಸಿನಿಮಾ ಬೋಳು ತಲೆಯ ಗೋಳನ್ನು ಹೇಳುವ ಸಿನಿಮಾ. ಒಂದೇ ಮಾತಲ್ಲಿ ಹೇಳಬೇಕು ಅಂದರೆ 'ಒಂದು ಮೊಟ್ಟೆಯ ಕಥೆ ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ'.

'ಒಂದು ಮೊಟ್ಟೆಯ ಕಥೆ' ಪ್ರಮೋಶನ್ ನಲ್ಲಿ ಕಟ್ಟಪ್ಪ ಪ್ರತ್ಯಕ್ಷ

English summary
Power Star Puneeth Rajkumar Speaks about 'Ondu Motteya Kathe'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada