ಚಿತ್ರೀಕರಣದ ನಡುವೆ ಪುನೀತ್ ರಾಜ್‌ಕುಮಾರ್ ಮಹತ್ವದ ಕಾರ್ಯ

ನಟ ಪುನೀತ್ ರಾಜ್‌ಕುಮಾರ್ ಬಳ್ಳಾರಿಯ ಹೊಸಪೇಟೆ ಸುತ್ತ-ಮುತ್ತ ತಾಣಗಳಲ್ಲಿ ತಮ್ಮ ಮುಂದಿನ ಸಿನಿಮಾ ಜೇಮ್ಸ್‌ ನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Recommended Video

ಚಿತ್ರೀಕರಣದ ನಡುವೆ ಮಹತ್ವದ ಕಾರ್ಯ ಮಾಡಿದ Puneet Rajkumar | Filmibeat Kannada

ಕಳೆದ ಒಂದು ವಾರದಿಂದಲೂ ಕೊಪ್ಪಳ, ಹೊಸಪೇಟೆ, ಗಂಗಾವತಿ ಸೇರಿ ಹಲವೆಡೆ ಪುನೀತ್ ರಾಜ್‌ಕುಮಾರ್ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ.

ಸಿನಿಮಾದ ಚಿತ್ರೀಕರಣದ ನಡುವೆ ಮಹತ್ವದ ಕಾರ್ಯವೊಂದನ್ನು ಮಾಡಿದ್ದಾರೆ ಪುನೀತ್ ರಾಜ್‌ಕುಮಾರ್. ಹೌದು, ಪುನೀತ್ ಅವರು ಕೊಪ್ಪಳದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.

ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪುನೀತ್ ರಾಜ್‌ಕುಮಾರ್, 'ಇಲ್ಲಿನ ಜನ ಬಹಳ ಒಳ್ಳೆಯವರು, ಜನರು ಪ್ರೀತಿಯಿಂದ ಕಾಣ್ತಾರೆ ಎಂದು ಸ್ಥಳೀಯರನ್ನು ಹೊಗಳಿದರು.

'ಕೊರೊನಾ ಒಂದು ಪುಟ್ಟ ವೈರಸ್ ಆದರೆ ಅಪಾಯಕಾರಿ'

'ಕೊರೊನಾ ಒಂದು ಪುಟ್ಟ ವೈರಸ್ ಆದರೆ ಅಪಾಯಕಾರಿ'

ಕೊರೊನಾ ವೈರಸ್ ಬಗ್ಗೆ ಮಾತನಾಡಿ, 'ಕೊರೊನಾ ಒಂದು ಪುಟ್ಟ ವೈರಸ್ ಆದರೆ ಅಷ್ಟೇ ಅಪಾಯಕಾರಿ ವೈರಸ್, ಹಾಗಾಗಿ ಹಲವು ಸಾವು-ನೋವುಗಳಾಗಿವೆ. ಇದಕ್ಕೆ ಇನ್ನೂ ವ್ಯಾಕ್ಸಿನ್ ಸಿಕ್ಕಿಲ್ಲ, ಹಾಗಾಗಿ ನಾವೆಲ್ಲರೂ ಆದಷ್ಟು ಜಾಗೃತೆಯಾಗಿರಬೇಕು ಎಂದರು.

'ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರ ಶ್ರಮವನ್ನು ಗೌರವಿಸೋಣ'

'ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರ ಶ್ರಮವನ್ನು ಗೌರವಿಸೋಣ'

'ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರು ಇದರೊಂದಿಗೆ ಹೋರಾಡುತ್ತಿದ್ದಾರೆ ಅವರ ಶ್ರಮವನ್ನು ನಾವೆಲ್ಲರೂ ಗೌರವಿಸೋಣ. ಹೊರಗೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಧರಿಸೋಣ. ಸ್ಯಾನಿಟೈಸರ್ ಬಳಸೋಣ, ಕೈ ಯನ್ನು ತೊಳೆದುಕೊಳ್ಳೋಣ' ಎಂದರು ಪುನೀತ್ ರಾಜ್‌ಕುಮಾರ್.

ಮಾಸ್ಕ್ ಹಾಕುವಂತೆ ಕೈ ಮುಗಿದು ಮನವಿ

ಮಾಸ್ಕ್ ಹಾಕುವಂತೆ ಕೈ ಮುಗಿದು ಮನವಿ

ಕೆಲವು ದಿನಗಳ ಹಿಂದೆ ಹೊಸಪೇಟೆ ಸಮೀಪ ಪುನೀತ್ ರಾಜ್‌ಕುಮಾರ್ ಚಿತ್ರೀಕರಣ ನಡೆಸುವ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಬಿಟ್ಟಿದ್ದರು. ಆ ಸಮಯದಲ್ಲಿ ಪುನೀತ್ ಅವರು ಎಲ್ಲರಿಗೂ ಮಾಸ್ಕ್ ತೊಡುವಂತೆ ಕೈ ಮುಗಿದು ಮನವಿ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು.

ಸಚಿವ ಆನಂದ್ ಸಿಂಗ್ ಮನೆಗೆ ಭೇಟಿ

ಸಚಿವ ಆನಂದ್ ಸಿಂಗ್ ಮನೆಗೆ ಭೇಟಿ

ಜೇಮ್ಸ್ ಸಿನಿಮಾದ ಚಿತ್ರೀಕರಣ ಹೊಸಪೇಟೆ ಹಾಗೂ ಸುತ್ತ-ಮುತ್ತ ನಡೆಯುತ್ತಿದೆ. ಚಿತ್ರೀಕರಣವನ್ನು ಎಂಜಾಯ್ ಮಾಡುತ್ತಿರುವ ಪುನೀತ್, ಕೆಲವು ದಿನಗಳ ಹಿಂದೆ ತುಂಗಭದ್ರಾ ಡ್ಯಾಂ ಗೆ ಭೇಟಿ ನೀಡಿದ್ದರು, ನಂತರ ಸಚಿವ ಆನಂದ್ ಸಿಂಗ್ ಮನೆಗೂ ಭೇಟಿ ನೀಡಿ ಉಪಹಾರ ಸೇವಿಸಿದ್ದರು.

More from Filmibeat

English summary
Actor Puneeth Rajkumar participated in coronavirus awareness program in Koppal in between his movie shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X