ಮಧ್ಯರಾತ್ರಿಯಿಂದಲೇ 'ಅಂಜನಿಪುತ್ರ'ನ ಎಂಟ್ರಿ: ಕಟೌಟ್ ನಲ್ಲೂ ದಾಖಲೆ.!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾಗಳೇ ಹಾಗೆ. ಒಂದು ದಿನ ಮುಂಚಿತವಾಗಿ ಬಿಡುಗಡೆ ಆಗುವುದಷ್ಟೇ ಅಲ್ಲದೆ ಮಧ್ಯರಾತ್ರಿ 12 ಗಂಟೆಗೆ ಸಿನಿಮಾಗಳು ರಿಲೀಸ್ ಆಗುತ್ತವೆ. ಅಷ್ಟರ ಮಟ್ಟಿಗೆ ಅಪ್ಪು ಅಭಿಮಾನಿಗಳು ಅವರ ಚಿತ್ರಗಳ ಬಗ್ಗೆ ಕುತೂಹಲವನ್ನ ಹೆಚ್ಚಿಸಿಕೊಂಡಿರುತ್ತಾರೆ.
ವರ್ಷದ ಕೊನೆಯ ಹಂತಕ್ಕೆ ಬಂದು ತಲುಪಿದ್ದೇವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇದೇ ಗುರುವಾರ (ಡಿ.21) ಕ್ಕೆ ರಾಜ್ಯಧ್ಯಂತ ರಿಲೀಸ್ ಆಗುತ್ತಿರುವ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಧ್ಯರಾತ್ರಿಯಿಂದ ಸಿನಿಮಾ ಪ್ರದರ್ಶನವಾಗುತ್ತಿದೆ. ಈ ಮೂಲಕ ಪುನೀತ್ ಹೊಸ ಧಾಖಲೆಯನ್ನ ಸೃಷ್ಟಿ ಮಾಡಲು ಸಜ್ಜಾಗಿದ್ದಾರೆ.
'ಅಂಜನಿಪುತ್ರ' ಸಿನಿಮಾಗಾಗಿ ಜಿಲ್ಲೆಯ ಪ್ರತಿ ಸಿನಿಮಾಮಂದಿರದ ಮುಂದೆ ಕಟೌಟ್ ಗಳನ್ನ ನಿಲ್ಲಿಸಲಾಗಿದ್ದು ಅಪ್ಪು ವೃತ್ತಿ ಜೀವನದಲ್ಲಿ ಅತೀ ಎತ್ತರದ ಕಟೌಟ್ ಈ ಬಾರಿ ತ್ರಿವೇಣಿ ಥಿಯೇಟರ್ ಮುಂದೆ ಹಾಕಲಾಗುತ್ತಿದೆ. ಗುರುವಾರ ಬಿಡುಗಡೆ ಆಗುತ್ತಿರುವ 'ಅಂಜನಿಪುತ್ರ' ಸಿನಿಮಾ ಯಾವ ಯಾವ ಚಿತ್ರಮಂದಿರದಲ್ಲಿ ಎಷ್ಟು ಗಂಟೆಗೆ ಬಿಡುಗಡೆ ಆಗುತ್ತಿದೆ. ಸ್ಯಾಂಡಲ್ ವುಡ್ ರಾಜಕುಮಾರನ ಚಿತ್ರದ ಕ್ರೇಜ್ ಹೇಗಿದೆ? ಮುಂದೆ ಓದಿ....

ಮಧ್ಯರಾತ್ರಿ ಅಂಜನಿಪುತ್ರನ ದರ್ಶನ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಸಿನಿಮಾ ಬುಧವಾರ ಮಧ್ಯರಾತ್ರಿ 12-15 ರಿಂದ ಪ್ರದರ್ಶನ ಆಗಲಿದೆ. ಬೆಳಗಾವಿಯ ಸಂತೋಷ್, ನಿರ್ಮಲಾ, ಶಿವಮೊಗ್ಗದ ಮಂಜುನಾಥ, ಹಾಗೂ ದಾವಣಗೆರೆಯ ಪುಷ್ಪಾಂಜಲಿ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ 12ಗಂಟೆಗೆ ಶೋ ಶುರುವಾಗಲಿದೆ.

ಬೆಂಗಳೂರಿನ ಅಭಿಮಾನಿಗಳಿಗೂ ಚಾನ್ಸ್
ಜಿಲ್ಲೆಯಲ್ಲಿರುವ ಅಭಿಮಾನಿಗಳು ಮಾತ್ರವಲ್ಲದೆ ಬೆಂಗಳೂರಿನಲ್ಲಿರುವ ಫ್ಯಾನ್ಸ್ ಗಳಿಗೂ ಬೆಳ್ಳಂಬೆಳಗ್ಗೆ 'ಅಂಜನಿಪುತ್ರ' ಚಿತ್ರ ನೋಡುವ ಅವಕಾಶ ಸಿಗಲಿದೆ. ಬೆಂಗಳೂರಿನಲ್ಲಿರುವ ಹತ್ತು ಸಿನಿಮಾ ಮಂದಿರದಲ್ಲಿ ಬೆಳ್ಳಿಗ್ಗೆ 5 ಗಂಟೆಯಿಂದ 'ಅಂಜನಿಪುತ್ರ' ಸಿನಿಮಾ ಸ್ಕ್ರೀನಿಂಗ್ ಆಗಲಿದೆ. ಗೌಡನಪಾಳ್ಯ-ಶ್ರೀನಿವಾಸ ಚಿತ್ರಮಂದಿರ, ಸಂಜಯನಗರ ವೈಭವ ಚಿತ್ರಮಂದಿರ, ಯಶವಂತಪುರದ ಉಲ್ಲಾಸ್, ಕಮಲಾನಗರ -ವೀರಭದ್ರೇಶ್ವರ ಹಾಗೂ ತಿರುಮಲ ಚಿತ್ರಮಂದಿರ ಸೇರಿದಂತೆ ಮೈನ್ ಥಿಯೇಟರ್ ತ್ರಿವೇಣಿಯಲ್ಲಿ ಬೆಳ್ಳಗ್ಗೆಯೇ ಪ್ರದರ್ಶನ ಪ್ರಾರಂಭ ಮಾಡಲಿದ್ದಾರೆ.

ರಾರಾಜಿಸಲಿದೆ 78 ಅಡಿಯ ಕಟೌಟ್
'ಅಂಜನಿಪುತ್ರ' ಕೆ ಜಿ ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ಇದೇ ಮೊದಲ ಬಾರಿಗೆ ತ್ರಿವೇಣಿ ಥಿಯೇಟರ್ ನ ಮುಂಭಾಗದಲ್ಲಿ 78 ಅಡಿಯ ಕಟೌಟ್ ನಿಲ್ಲಿಸಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಕಲಾವಿದ ಚಿನ್ನಪ್ಪ ಸಿದ್ದ ಮಾಡಿರುವ ಕಟೌಟ್ ಚಿತ್ರಮಂದಿರ ಮುಂದೆ ರಾರಾಜಿಸಲಿದೆ.

ಮಂಗಳವಾರದಿಂದ ಶುರುವಾಗಲಿದೆ ಬುಕ್ಕಿಂಗ್
ಮಂಗಳವಾರ (ಡಿ.19) ರಿಂದಲೇ 'ಅಂಜನಿಪುತ್ರ' ಸಿನಿಮಾಗೆ ಟಿಕೆಟ್ ಬುಕ್ಕಿಂಗ್ ಶುರುವಾಗಲಿದೆ. ಈಗಾಗಲೇ ಕೆಲ ಥಿಯೇಟರ್ ಗಳಲ್ಲಿ ಬೆಳಗಿನ ಶೋ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಬುಕ್ ಮೈ ಶೋ ನಲ್ಲಿ ನಾಳೆ ಸಂಜೆಯಿಂದ ಬುಕ್ಕಿಂಗ್ ಪ್ರಾರಂಭವಾಗುವ ಸಾಧ್ಯತೆಗಳಿವೆ.


Click it and Unblock the Notifications











