ಚಿತ್ರಮಂದಿರಗಳಲ್ಲಿ ಮತ್ತೆ 'ದೊಡ್ಮನೆ ಹುಡ್ಗನ' ದರ್ಶನ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡ್ಗ' ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ. ನಾಳೆ ಆಗಸ್ಟ್ 30ಕ್ಕೆ 'ದೊಡ್ಮನೆ ಹುಡ್ಗ' ಮತ್ತೆ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ. ಮೆಜಸ್ಟಿಕ್ ಬಳಿ ಇರುವ ತ್ರಿವೇಣಿ ಚಿತ್ರಮಂದಿರದಲ್ಲಿ 'ದೊಡ್ಮನೆ ಹುಡ್ಗ' ಸಿನಿಮಾ ನಾಲ್ಕು ಪ್ರದರ್ಶನ ಆಗಲಿದೆ.

ದುನಿಯ ಸೂರಿ ನಿರ್ದೇಶನದಲ್ಲಿ ಮೂಡಿ ಬಂದ 'ದೊಡ್ಮನೆ ಹುಡ್ಗ' 2016ರಲ್ಲಿ ತೆರೆಗೆ ಬಂದಿತ್ತು. ಚಿತ್ರಕ್ಕೆ ಎಂ ಗೋವಿಂದ್ ಬಂಡವಾಳ ಹೂಡಿದ್ದರು. ಚಿತ್ರದಲ್ಲಿ ಪುನೀತ್ ಗೆ ಜೋಡಿಯಾಗಿ ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದರು. ಪುನೀತ್ ರಾಜ್ ಕುಮಾರ್ ತಂದೆಯ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಬಣ್ಣ ಹಚ್ಚಿದ್ದರು.

ಸುಮಲತಾ ಅಂಬರೀಶ್ ಮತ್ತು ಭಾರತಿ ವಿಷ್ಣುವರ್ಧನ್ ಸಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ದೊಡ್ಡ ದೊಡ್ಡ ಕಲಾವಿದರಿಂದ ದೊಡ್ಮನೆ ಹುಡ್ಗ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ಸೋತಿತ್ತು. ಆದ್ರೀಗ ಮತ್ತೆ ಸಿನಿಮಾ ತೆರೆಗೆ ಬರುತ್ತಿರುವುದು ಅಪ್ಪು ಅಭಿಮಾನಿಗಳಿಗೆ ದೊಡ್ಡ ಸಂಭ್ರಮ.

Puneeth Rajkumar Starrer Dodmane Huduga Kannada Film Re Release In Agust 30th

ನಟಸಾರ್ವಭೌಮ ಚಿತ್ರದ ನಂತರ ಪುನೀತ್ ಸಿನಿಮಾ ತೆರೆಗೆ ಬಂದಿಲ್ಲ. ಯುವರತ್ನ ಚಿತ್ರಕ್ಕಾಗಿ ಕಾದುಕುಳಿರುವ ಅಭಿಮಾನಿಗಳಿಗೆ ಮತ್ತೆ ದೊಡ್ಮನೆ ಹುಡ್ಗನ ದರ್ಶನ ಆಗಲಿದೆ. 2016ರಲ್ಲಿ ದೊಡ್ಮನೆ ಹುಡ್ಗ ಸೆಪ್ಟಂಬರ್ 30ಕ್ಕೆ ತೆರೆಗೆ ಬಂದಿತ್ತು.

More from Filmibeat

English summary
Kannada actor Puneeth Rajkumar starrer Dodmane Huduga Kannada film re-release in August 30th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X