ಅಪ್ಪು ಎಪಿಕ್ ಜರ್ನಿ 'ಗಂಧದಗುಡಿ' ಎಷ್ಟು ನಿಮಿಷಗಳ ಚಿತ್ರ? ಇಂಟರ್‌ವೆಲ್ ಇರುತ್ತಾ?

ಪುನೀತ್ ರಾಜ್ ಕುಮಾರ್ ಅಭಿನಯದ ಕಟ್ಟಕಡೆಯ ಚಿತ್ರ ಗಂಧದಗುಡಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಪುನೀತ್ ರಾಜ್ ಕುಮಾರ್ ಪವರ್ ಸ್ಟಾರ್ ಆಗಿರದೇ ಬರೀ ಪುನೀತ್ ರಾಜ್ ಕುಮಾರ್ ಆಗಿ ಅಭಿನಯಿಸಿರುವ ಅಲ್ಲ ಜೀವಿಸಿರುವ ಚಿತ್ರವೇ ಗಂಧದ ಗುಡಿ.

ಆಕಸ್ಮಿಕ ಚಿತ್ರದಲ್ಲಿ 'ಏನೇನೋ ಕಂಡಮೇಲೂ ನಮ್ಮೂರೇ ನಮಗೆ ಮೇಲು' ಎಂದು ಅಣ್ಣಾವ್ರು ಹೇಳಿದ ಹಾಗೆ ನಮ್ಮ ರಾಜ್ಯದಲ್ಲಿಯೇ ಹಲವಾರು ಒಳ್ಳೊಳ್ಳೆ ಸ್ಥಳ ಮತ್ತು ವನ್ಯ ಸಂಪತ್ತು ಇದೆ ಎಂಬುದನ್ನು ಇಡೀ ಜಗತ್ತಿಗೆ ತೆರೆದಿಡಬೇಕು ಎಂಬ ಉದ್ದೇಶದೊಂದಿಗೆ ಪುನೀತ್ ರಾಜ್ ಕುಮಾರ್ ಈ ಗಂಧದ ಗುಡಿ ಚಿತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಇನ್ನು ಚಿತ್ರದ ಟೀಸರ್ ಹಾಗೂ ಟ್ರೈಲರ್ ಈಗಾಗಲೇ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದು, ಟ್ರೈಲರ್ ವೀಕ್ಷಿಸಿದ ಸಿನಿಪ್ರೇಕ್ಷಕ ಓರ್ವ ಸ್ಟಾರ್ ನಟನಾಗಿದ್ದ ಪುನೀತ್ ರಾಜ್ ಕುಮಾರ್ ತಮ್ಮ ಸ್ಟಾರ್ ಗಿರಿ ಬಿಟ್ಟು ಇಂತಹ ಪ್ರಯೋಗಕ್ಕೆ ಕೈಹಾಕಿರುವುದು ಅವರಿಗಿರುವ ದೂರಾಲೋಚನೆಯನ್ನು ತಿಳಿಸುತ್ತದೆ, ಅವರ ತಲೆಯಲ್ಲಿ ಇನ್ನೂ ಎಂತೆಂತಹ ಯೋಜನೆಗಳಿದ್ದವೋ ಎಂದು ಕೊಂಡಾಡಿದ್ದರು. ಇನ್ನು ಸಿನಿಪ್ರೇಕ್ಷಕರು ಹಾಗೂ ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕೊನೆಯ ಚಿತ್ರವನ್ನು ಬೆಳ್ಳಿಪರದೆ ಮೇಲೆ ನೋಡಲು ಟಿಕೆಟ್ ಖರೀದಿಗಾಗಿ ಮುಗಿಬಿದ್ದಿದ್ದು, ಚಿತ್ರ ಬಿಡುಗಡೆಯ ದಿನಕ್ಕೂ ಹಿಂದಿನ ದಿನ ರಾಜ್ಯಾದ್ಯಂತ ವಿವಿಧ ನಗರಗಳಲ್ಲಿ ಐವತ್ತಕ್ಕೂ ಹೆಚ್ಚಿನ ಪ್ರೀಮಿಯರ್ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ ಹಾಗೂ ಈ ಪ್ರದರ್ಶನಗಳು ಸೋಲ್ಡ್ ಔಟ್ ಆಗಿವೆ. ಹೀಗೆ ದೊಡ್ಡ ಮಟ್ಟದ ಹೈಪ್ ಹುಟ್ಟು ಹಾಕಿರುವ ಗಂಧದಗುಡಿ ಚಿತ್ರದ ರನ್ ಟೈಮ್ ಎಷ್ಟು, ಚಿತ್ರಕ್ಕೆ ಯಾವ ಸೆನ್ಸಾರ್ ಸರ್ಟಿಫಿಕೇಟ್ ಲಭಿಸಿದೆ ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

 ಚಿತ್ರದ ರನ್ ಟೈಮ್, ಸರ್ಟಿಫಿಕೇಟ್ ಮತ್ತು ಇಂಟರ್ ವೆಲ್

ಚಿತ್ರದ ರನ್ ಟೈಮ್, ಸರ್ಟಿಫಿಕೇಟ್ ಮತ್ತು ಇಂಟರ್ ವೆಲ್

ಪುನೀತ್ ರಾಜ್ ಕುಮಾರ್ ಹಾಗೂ ಅಮೋಘವರ್ಷ ನಟನೆಯ ಗಂಧದ ಗುಡಿ ಚಿತ್ರ 1 ಗಂಟೆ 37 ನಿಮಿಷದ ಚಿತ್ರವಾಗಿದೆ. ಅಂದರೆ 97 ನಿಮಿಷಗಳ ರನ್ ಟೈಮ್ ಅನ್ನು ಗಂಧದಗುಡಿ ಹೊಂದಿದೆ. ಹೀಗೆ ಈ ಅಪ್ಪು ಅಭಿನಯದ ಹಿಂದಿನ ಚಿತ್ರಗಳಿಗಿಂತ ತುಂಬಾ ಕಡಿಮೆ ರನ್ ಟೈಮ್ ಹೊಂದಿರುವ ಗಂಧದ ಗುಡಿ ಚಿತ್ರಕ್ಕೆ ಮಧ್ಯಂತರ ಇರುತ್ತೋ ಇಲ್ಲವೋ ಎಂಬ ಅನುಮಾನ ಇದೀಗ ಅಭಿಮಾನಿಗಳಲ್ಲಿ ಶುರುವಾಗಿದೆ. ಕಡಿಮೆ ರನ್ ಟೈಮ್ ಇರುವ ಗಂಧದ ಗುಡಿ ಚಿತ್ರಕ್ಕೆ ಇಂಟರ್ವೆಲ್ ನೀಡದೇ ಪ್ರದರ್ಶಿಸಿದರೆ ಉತ್ತಮ ಎಂಬ ಅಭಿಪ್ರಾಯಗಳು ಸಹ ವ್ಯಕ್ತವಾಗುತ್ತಿವೆ.
ಇನ್ನು ಗಂಧದ ಗುಡಿ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಯಾವುದೇ ಕಟ್ ಹಾಗೂ ಮ್ಯೂಟ್ ಹಾಕದೇ ಕ್ಲೀನ್ ಯು ಸರ್ಟಿಫಿಕೇಟ್ ನೀಡಿದೆ.

 ಪ್ರೀಮಿಯರ್ ಶೋ ಸೋಲ್ಡ್ ಔಟ್; ಬಿಡುಗಡೆಯ ದಿನ ಮುಂಜಾನೆಯೇ ಪ್ರದರ್ಶನ

ಪ್ರೀಮಿಯರ್ ಶೋ ಸೋಲ್ಡ್ ಔಟ್; ಬಿಡುಗಡೆಯ ದಿನ ಮುಂಜಾನೆಯೇ ಪ್ರದರ್ಶನ

ಇನ್ನು ಗಂಧದ ಗುಡಿ ಚಿತ್ರದ ಬಿಡುಗಡೆಯ ಹಿಂದಿನ ದಿನ ಸಂಜೆ ವೇಳೆ ರಾಜ್ಯಾದ್ಯಂತ ಸುಮಾರು ಐವತ್ತಕ್ಕೂ ಹೆಚ್ಚಿನ ಪ್ರೀಮಿಯರ್ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಬೆಂಗಳೂರು, ಮೈಸೂರು ಹಾಗೂ ಶಿವಮೊಗ್ಗ ನಗರಗಳ ಎಲ್ಲಾ ಪ್ರೀಮಿಯರ್ ಶೋಗಳು ಸೋಲ್ಡ್ ಔಟ್ ಆಗಿವೆ. ಅಷ್ಟೇ ಅಲ್ಲದೆ ಬಿಡುಗಡೆ ದಿನ ಬೆಂಗಳೂರಿನಲ್ಲಿ ಮುಂಜಾನೆ 6 ಗಂಟೆಗೆ ಪ್ರದರ್ಶನಗಳು ಆರಂಭವಾಗಲಿದ್ದು ಮೈಸೂರಿನಲ್ಲಿ 6.20ಕ್ಕೆ ಗಂಧದ ಗುಡಿಯ ದರ್ಶನವಾಗಲಿದೆ.

 ಟಿಕೆಟ್ ದರ ದುಬಾರಿ!

ಟಿಕೆಟ್ ದರ ದುಬಾರಿ!

ಇನ್ನು ಗಂಧದ ಗುಡಿ ಪ್ರೀಮಿಯರ್ ಶೋ ಹಾಗೂ ಬಿಡುಗಡೆಯ ದಿನದ ಬೆಳಗಿನ ಜಾವದ ಪ್ರದರ್ಶನಗಳ ಟಿಕೆಟ್ ದರ ಸಾಮಾನ್ಯವಾಗಿಲ್ಲ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200ರಿಂದ ಶುರುವಾದರೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿಯೂ 150 ರೂಪಾಯಿಗಳಷ್ಟಿದೆ. ಹೀಗೆ ಪ್ರೀಮಿಯರ್ ಶೋ ಟಿಕೆಟ್ ದರಗಳು ಗಗನಕ್ಕೇರಿದ್ದರೂ ಸಹ ಟಿಕೆಟ್ ಮಾತ್ರ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿವೆ.

More from Filmibeat

English summary
Puneeth Rajkumar starrer Gandhada Gudi runtime, censor certificate and interval details . Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X