twitter
    For Quick Alerts
    ALLOW NOTIFICATIONS  
    For Daily Alerts

    ಸೋಮವಾರ 'ಗಂಧದಗುಡಿ' ದರ್ಶನಕ್ಕೆ ಹೇಗಿದೆ ರೆಸ್ಪಾನ್ಸ್? ಕೆಆರ್‌ಜಿ ಸಂಸ್ಥೆ ಮೇಲೆ ಫ್ಯಾನ್ಸ್ ಬೇಸರ ಯಾಕೆ?

    |

    ಯಾವುದೇ ಚಿತ್ರದ ನಿಜವಾದ ತಾಖತ್ತು ಗೊತ್ತಾಗೋದು ಫಸ್ಟ್ ವೀಕೆಂಡ್ ಕಳೆದು ಸೋಮವಾರ ಬಂದಾಗ. ವಾರದ ದಿನದಲ್ಲಿ ಪ್ರೇಕ್ಷಕರು ಥಿಯೇಟರ್‌ಗೆ ಬಂದು ಸಿನಿಮಾ ನೋಡಲು ಮನಸ್ಸು ಮಾಡಿದರೆ ಆ ಸಿನಿಮಾ ಸೂಪರ್ ಹಿಟ್ ಅಂತಲೇ ಅರ್ಥ. ಗುರುವಾರದ ಪೇಯ್ಡ್ ಪ್ರೀಮಿಯರ್‌ ಶೋಗಳಿಂದಲೂ 'ಗಂಧದಗುಡಿ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸೋಮವಾರವೂ ಅಪ್ಪು 'ಗಂಧದಗುಡಿ'ಯ ಅಮೋಘ ಪಯಣ ಮುಂದವರೆದಿದೆ.

    ಪುನೀತ್ ರಾಜ್‌ಕುಮಾರ್ ಕನಸಿನ ಸಿನಿಮಾ 'ಗಂಧದಗುಡಿ'. ಇದು ಮಾಮೂಲಿ ಕಮರ್ಷಿಯಲ್ ಸಿನಿಮಾ ಅಲ್ಲ. ಇಲ್ಲಿ ಅಪ್ಪು ಹೀರೊ ಆಗಿ ಅಲ್ಲದೇ ಅವರಾಗಿಯೇ ಕಾಣಿಸಿಕೊಂಡಿದ್ದಾರೆ. ಕರ್ನಾಟಕ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ಸಂಪತ್ತಿನ ದರ್ಶನ ಮಾಡಿಸುವ ಡಾಕ್ಯು ಡ್ರಾಮಾ ಸಿನಿಮಾ ಇದು. ವೈಲ್ಡ್‌ ಲೈಫ್‌ ಫೋಟೊಗ್ರಫರ್ ಅಮೋಘ ವರ್ಷ ಸಾರಥ್ಯದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಮೊದಲ 3 ದಿನಕ್ಕೆ ಸಿನಿಮಾ 14 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ನಿಧಾನವಾಗಿ ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಬರುತ್ತಿದ್ದಾರೆ.

    ಪುನೀತ್ ಕನಸಿನ ಕೂಸು 'ಗಂಧದ ಗುಡಿ' 3ನೇ ದಿನ ಗಳಿಸಿದ್ದೆಷ್ಟು? ಇಲ್ಲಿಯವರೆಗೂ ಎಷ್ಟು ಕಲೆಕ್ಷನ್ ಮಾಡಿದೆ?ಪುನೀತ್ ಕನಸಿನ ಕೂಸು 'ಗಂಧದ ಗುಡಿ' 3ನೇ ದಿನ ಗಳಿಸಿದ್ದೆಷ್ಟು? ಇಲ್ಲಿಯವರೆಗೂ ಎಷ್ಟು ಕಲೆಕ್ಷನ್ ಮಾಡಿದೆ?

    ಚಿತ್ರರಂಗದ ತಾರೆಯರು ಕೂಡ 'ಗಂಧದಗುಡಿ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಕೊನೆಯ ಸಿನಿಮಾದಲ್ಲಿ ನೆಚ್ಚಿನ ನಟನನ್ನು ತೆರೆಮೇಲೆ ನೋಡಿ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಅಪ್ಪು ಜೊತೆಗೆ ಕಾಡು ಮೇಡು ಸುತ್ತಾಡಿ ಬಂದ ಅನುಭವವನ್ನು ಅನುಭವಿಸುತ್ತಿದ್ದಾರೆ.

    ಸೋಮವಾರವೂ ಸಖತ್ ರೆಸ್ಪಾನ್ಸ್

    ಸೋಮವಾರವೂ ಸಖತ್ ರೆಸ್ಪಾನ್ಸ್

    ಯಾವುದೇ ಸಿನಿಮಾ ಆದರೂ ಅಭಿಮಾನಿಗಳು ಮೊದಲ 3 ದಿನಗಳಲ್ಲಿ ಸಿನಿಮಾ ನೋಡಿಬಿಡುತ್ತಾರೆ. ನಂತರ ಸಾಮಾನ್ಯ ಪ್ರೇಕ್ಷಕರು ಥಿಯೇಟರ್‌ಗೆ ಬರಬೇಕು. ಪ್ರೇಕ್ಷಕರನ್ನು ಸೆಳೆಯುವ ಸತ್ವ ಇದ್ದರೆ ಮಾತ್ರ ಸೋಮವಾರವೂ ಪ್ರೇಕ್ಷಕರು ಥಿಯೇಟರ್ ಕಡೆ ಮುಖ ಮಾಡುತ್ತಾರೆ. ವಾರದ ದಿನದಲ್ಲಿ ಕೆಲಸ ಕಾರ್ಯ ಬಿಟ್ಟು ಪ್ರೇಕ್ಷಕರು ಥಿಯೇಟರ್‌ಗೆ ಬರುವಂತೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಆದರೆ ಅಪ್ಪು ಸಿನಿಮಾ ನೋಡಲು ಸೋವರಾವೂ ಪ್ರೇಕ್ಷಕರು ಥಿಯೇಟರ್ ಕಡೆ ಮುಖ ಮಾಡಿದ್ದಾರೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಬೆಂಗಳೂರಿನಲ್ಲಿ 70ಕ್ಕೂ ಅಧಿಕ ಶೋಗಳು ಫಾಸ್ಟ್‌ಫಿಲ್ಲಿಂಗ್ ಹಾಗೂ ಸೋಲ್ಡೌಟ್‌ ಆಗಿತ್ತು.

    ಅಪ್ಪುವಿನ ಆರು ರತ್ನಗಳು: ವೂಟ್‌ನಲ್ಲಿ 'ಪುನೀತೋತ್ಸವ'ಅಪ್ಪುವಿನ ಆರು ರತ್ನಗಳು: ವೂಟ್‌ನಲ್ಲಿ 'ಪುನೀತೋತ್ಸವ'

    3 ದಿನಕ್ಕೆ ₹14 ಕೋಟಿ ಕಲೆಕ್ಷನ್

    3 ದಿನಕ್ಕೆ ₹14 ಕೋಟಿ ಕಲೆಕ್ಷನ್

    ಗುರುವಾರವೇ ಪೇಯ್ಡ್ ಪ್ರೀಮಿಯರ್‌ ಶೋಗಳಿಂದ 18 ಲಕ್ಷ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡಿತ್ತು. ಶುಕ್ರವಾರ 5 ಕೋಟಿ, 2ನೇ ದಿನ 4.5 ಕೋಟಿ ಹಾಗೂ 3ನೇ ದಿನ 5 ಕೋಟಿ ಸೇರಿ ಈಗಾಗಲೇ 14 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ನಿಧಾನವಾಗಿ ಪ್ರೇಕ್ಷಕರು ಮಕ್ಕಳನ್ನು ಚಿತ್ರಮಂದಿರಗಳಿಗೆ ಕರೆದುಕೊಂಡು ಬರುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸುಳಿವು ಸಿಗುತ್ತಿದೆ.

    ಕೆಆರ್‌ಜಿ ಸಂಸ್ಥೆ ಮೇಲೆ ಬೇಸರ!

    ಕೆಆರ್‌ಜಿ ಸಂಸ್ಥೆ ಮೇಲೆ ಬೇಸರ!

    'ಗಂಧದಗುಡಿ' ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ವಿತರಣೆ ಮಾಡಿದೆ. ಇದೇ ಸಂಸ್ಥೆ 'ಕಾಂತಾರ' ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದೆ. 'ಗಂಧದಗುಡಿ' ಚಿತ್ರಕ್ಕೆ ಬೇಕು ಅಂತಲೇ ಸರಿಯಾಗಿ ಶೋಗಳು ಕೊಡುತ್ತಿಲ್ಲ. ಬೇಡಿಕೆ ಇರುವ ಕಡೆ ಶೋ ಕೊಡದೇ 'ಕಾಂತಾರ' ಸಿನಿಮಾ ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಕೆಲವರು ಮಾಡುತ್ತಿದ್ದಾರೆ. ಆದರೆ ಬೇಡಿಕೆಗೆ ತಕ್ಕಂತೆ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಗಂಧದಗುಡಿ' ಸಿನಿಮಾ ಪ್ರದರ್ಶನವಾಗುತ್ತಿರುವುದು ಗೊತ್ತಾಗುತ್ತಿದೆ.

    ನಾಳೆ ಅಪ್ಪುಗೆ ಕರ್ನಾಟಕ ರತ್ನ ಗೌರವ

    ನಾಳೆ ಅಪ್ಪುಗೆ ಕರ್ನಾಟಕ ರತ್ನ ಗೌರವ

    ರಾಜ್ಯೋತ್ಸವ ಸಂಭ್ರಮದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೇ ನಾಳೆ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಸೂಪರ್ ಸ್ಟಾರ್ ರಜಿನಿಕಾಂತ್, ತೆಲುಗು ನಟ ಜ್ಯೂ. ಎನ್‌ಟಿಆರ್ ಹಾಗೂ ಸುಧಾಮೂರ್ತಿ ಸೇರಿದಂತೆ ಸಾಕಷ್ಟು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

    English summary
    Puneeth rajkumar Starrer Gandhadagudi Monday Advance Booking Report. film has earned a gross of Rs 14.5 crore at the box office in three days. Know more.
    Monday, October 31, 2022, 15:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X