'ಜೇಮ್ಸ್' ಚಿತ್ರದ ಡಬ್ಬಿಂಗ್ಗೆ ತಯಾರಿ: ಅಪ್ಪು ಪಾತ್ರಕ್ಕೆ ಯಾರ ಧ್ವನಿ?
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಕನ್ನಡದ ನಿರೀಕ್ಷೆಯ ಚಿತ್ರಗಳಲ್ಲಿ ಒಂದು. 'ಜೇಮ್ಸ್' ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರದ ಕೂಡ ಹೌದು. ಸಹಸ್ರಾರು ಮನಗಳು 'ಜೇಮ್ಸ್' ಚಿತ್ರ ನೋಡಲು ಹಾತೊರೆಯುತ್ತಿವೆ.
Recommended Video
ಸದ್ಯ 'ಜೇಮ್ಸ್' ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ಆದಷ್ಟು ಬೇಗ ಸಿನಿಮಾ ಮುಗಿಸುವ ಜವಾಬ್ದಾರಿ ಚಿತ್ರ ತಂಡದ ಮೇಲೆ ಇದೆ. ಈ ಚಿತ್ರವನ್ನು ನೋಡಲು ಇಡಿ ಕರುನಾಡು ಕಾಯುತ್ತಿದೆ.
ಸದ್ಯ ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ನಿರತವಾಗಿದ್ದು, ಫಿಲ್ಮೀ ಬೀಟ್ ಜೊತೆಗೆ ನಿರ್ದೇಶಕ ಚೇತನ್ ಕುಮಾರ್ ಮಾತನಾಡಿದ್ದಾರೆ.

ಸದ್ಯದಲ್ಲಿಯೇ 'ಜೇಮ್ಸ್' ಡಬ್ಬಿಂಗ್ ಶುರು!
'ಜೇಮ್ಸ್' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದು ಬಿಟ್ಟಿದೆ. ಸದ್ಯ ಪೊಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರ ತಂಡ ನಿರತವಾಗಿದೆ. ಪುನೀತ್ ರಾಜ್‌ಕುಮಾರ್ ಅವರು 'ಜೇಮ್ಸ್' ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಈಗಾಗಲೇ 4 ಹಾಡುಗಳ ಚಿತ್ರೀಕರಣ ಪೂರ್ಣ ಆಗಿದೆ . 1 ಹಾಡಿನ ಚಿತ್ರಿಕರಣ ಮಾತ್ರ ಬಾಕಿ ಉಳಿದಿತ್ತು.
ಅಪ್ಪು ಅಭಿಮಾನಿಗಳು ಮತ್ತು ಕನ್ನಡ ಪ್ರೇಕ್ಷಕರು ಜೇಮ್ಸ್ ಚಿತ್ರವನ್ನು ರಿಲೀಸ್ ಮಾಡಲೇಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ಅಪ್ಪು ಕೊನೆಯ ಸಿನಿಮಾ ಜೇಮ್ಸ್ ಕನ್ನಡ ಚಿತ್ರರಂಗಕ್ಕೂ ಅತಿಮುಖ್ಯ. ಹಾಗಾಗಿ ಸಾಕಷ್ಟು ಮುತುವರ್ಜಿ ವಹಿಸಿ ಚಿತ್ರ ತಂಡ ಎಲ್ಲಾ ಕೆಲಸಗಳನ್ನು ಮಾಡುತ್ತಿದೆ.

ಜೇಮ್ಸ್ ಡಬ್ಬಿಂಗ್ ಶುರು ಮಾಡಲು ತಯಾರಿ: ನಿರ್ದೇಶಕ ಚೇತನ್!
ಇನ್ನೂ ಅಪ್ಪು ಅವರ ನಿಧನ ಕಾಡುವ ನೋವಿನಲ್ಲಿಯೇ ನಿರ್ದೇಶಕ ಚೇತನ್ ಕುಮಾರ್ ಜೇಮ್ಸ್ ಚಿತ್ರದ ಕೆಲಸಗಳನ್ನು ಮುಂದುವರೆಸಿದ್ದಾರೆ. "ಚಿತ್ರೀಕರಣ ಸಂಪೂರ್ಣ ಮುಕ್ತಾಯ ಆಗಿದೆ. ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಈಗ ಚಿತ್ರದ ಡಬ್ಬಿಂಗ್ ಮಾಡಲು ತಯಾರಿ ನಡೆದಿದೆ" ಎಂದು ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದಾರೆ. ಜೇಮ್ಸ್ ಚಿತ್ರದ ಒಂದೊಂದೇ ಪಾತ್ರದ ಡಬ್ಬಿಂಗ್ ಶುರುವಾಗಲಿದೆ.

ಅಪ್ಪು ಪಾತ್ರದ ಡಬ್ಬಿಂಗ್ ಮಾಡುವವರು ಯಾರು: ಏನಂತಾರೆ ನಿರ್ದೇಶಕ ಚೇತನ್ ಕುಮಾರ್?
ಇನ್ನೂ ಎಲ್ಲಕ್ಕಿಂತ ಹೆಚ್ಚಾಗಿ 'ಜೇಮ್ಸ್' ಚಿತ್ರದಲ್ಲಿನ ಪುನೀತ್ ರಾಜ್‌ಕುಮಾರ್ ಅವರ ಪಾತ್ರದ ಡಬ್ಬಿಂಗ್ ಬಗ್ಗೆ ಸಾಕಷ್ಟು ಕುತೂಹಲಗಳು ಮನೆ ಮಾಡಿವೆ. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಧ್ವನಿಯೇ ಇರುತ್ತಾ? ಅಥವಾ ಬೇರೆ ಯಾರು ಅಪ್ಪು ಅವರಿಗೆ ಡಬ್ ಮಾಡುತ್ತಾರೆ ಎನ್ನುವ ಸಾಕಷ್ಟು ಕುತೂಹಲಗಳು ಹುಟ್ಟಿ ಕೊಂಡಿವೆ. ಈ ಬಗ್ಗೆ ಮಾತನಾಡಿದ ನಿರ್ದೇಶಕ ಚೇತನ್ " ಸದ್ಯಕ್ಕೆ ಅಪ್ಪು ಸರ್ ಅವರ ಪಾತ್ರವನ್ನು ಬಿಟ್ಟು ಉಳಿದ ಪಾತ್ರ ವರ್ಗಗಳ ಡಬ್ಬಿಂಗ್ ಆರಂಭಿಸಲು ತಯಾರಿ ನಡೆದಿದೆ. ಆದರೆ ಪುನೀತ್ ಸರ್ ಪಾತ್ರದ ಡಬ್ಬಿಂಗ್ ಬಗ್ಗೆ ಇನ್ನೂ ಚಿಂತನೆ ನಡೆಯುತ್ತಿದೆ. ಎಲ್ಲವೂ ಫೈನಲ್ ಆಗಬೇಕಿದೆ" ಎಂದಿದ್ದಾರೆ. ಸದ್ಯಕ್ಕೆ ಪುನೀತ್ ರಾಜ್‌ಕುಮಾರ್ ಅವರ ಪಾತ್ರದ ಡಬ್ಬಿಂಗ್ ಬಗ್ಗೆ ತೀರ್ಮಾನ ಕೈಗೊಳ್ಳಲು ಕೊಂಚ ಸಮಯ ಬೇಕಿದೆ. ಈ ಮಧ್ಯೆ ಉಳಿದ ಪಾತ್ರಗಳ ಡಬ್ಬಿಂಗ್ ಮುಗಿಸಲು ಚಿತ್ರ ತಂಡ ಮುಂದಾಗಿದೆ.

'ಜೇಮ್ಸ್'ಗಾಗಿ ಕಾಯುತ್ತಿದೆ ಇಡೀ ಕರುನಾಡು!
ಜೇಮ್ಸ್ ಚಿತ್ರದ ಮೂಲಕ ಮತ್ತೇ ಪುನೀತ್ ರಾಜ್‌ಕುಮಾರ್ ಅವರನ್ನು ಹೊಸ ರೂಪದಲ್ಲಿ ನೋಡಬಹುದು ಎಂದು ಇಡೀ ಕರುನಾಡು ಕಾಯುತ್ತಿದೆ. ಅದರಲ್ಲೂ ಅವರ ಅಭಿಮಾನಿಗಳು ಹೆಚ್ಚು ಕಾತರರಾಗಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಕನ್ನಡ ಚಿತ್ರರಂಗದ ಟಾಪ್ ನಿರ್ದೇಶಕರ ಸಾಲಿನಲ್ಲಿ ನಿಂತವರು. ಈ ಹಿಂದೆ ಅವರು ಕೊಟ್ಟ ಸಿನಿಮಾಗಳು, ನಿರ್ದೇಶನದ ಪರಿ 'ಜೇಮ್ಸ್' ಚಿತ್ರದ ಮೇಲೆ ಸಾಕಷ್ಟು ನಿರಿಕ್ಷೆ ಹುಟ್ಟು ಹಾಕಿದೆ. ಇನ್ನು ಈ ಚಿತ್ರ ಅವರಿಗೂ ಒಂದು ಕನಸು. ಈ ಪಯಣದಲ್ಲಿ ಪುನೀತ್ ರಾಜ್‌ಕುಮಾರ್ ಚಿತ್ರ ತಂಡವನ್ನು ದೈಹಿಕವಾಗಿ ಮಾತ್ರ ಬಿಟ್ಟು ಹೋಗಿದ್ದಾರೆ. ಆದರೆ ಅವರ ಆ ನಿಷ್ಕಲ್ಮಷವಾದ ಪ್ರೀತಿ, ಸ್ಫೂರ್ತಿ ಎಂದಿಗೂ ಚಿತ್ರ ತಂಡದ ಜೊತೆಗೆ ಇದ್ದೇ ಇರುತ್ತದೆ.


Click it and Unblock the Notifications











