ಮಾ.1ರಂದು ಜೇಮ್ಸ್ ಚಿತ್ರ ತಂಡದಿಂದ ಸರ್ಪ್ರೈಸ್: ಅಪ್ಪು ಟ್ರೇಡ್ ಮಾರ್ಕ್ ರಿವೀಲ್!
ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯ 'ಜೇಮ್ಸ್' ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲಗಳು, ನಿರೀಕ್ಷೆಗಳು ಮನೆ ಮಾಡಿವೆ. 'ಜೇಮ್ಸ್' ಸಿನಿಮಾ ರಿಲೀಸ್‌ಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಅಂತೆಯೆ ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬಕ್ಕೆ ಸಿನಿಮಾ ರಿಲೀಸ್‌ಗಾಗಿ ಎಲ್ಲಾ ತಯಾರಿ ನಡೆದಿದೆ.
ಅದಾಗಲೇ ಸಿನಿಮಾದ ಒಂದಷ್ಟು ಅಂಶಗಳು ಚಿತ್ರದ ಮೇಲೆ ಕುತೂಹಲ ಹುಟ್ಟಿಸಿವೆ. ರಿಲೀಸ್ ಆದ ಚಿತ್ರದ ಪೋಸ್ಟರ್ ಮತ್ತು ಟೀಸರ್ ಅಪ್ಪು ಅವರನ್ನು ಸಿನಿಮಾದಲ್ಲಿ ನೋಡಬೇಕು ಎನ್ನುವ ಕುತೂಹಲ ಹೆಚ್ಚಾಗಿದೆ. ಈಗ ಚಿತ್ರ ತಂಡ ಮತ್ತೊಂದು ಸರ್ಪ್ರೈಸ್ ಕೊಡಲು ಸಿದ್ಧವಾಗಿದೆ. ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಲು ಜೇಮ್ಸ್ ಚಿತ್ರ ತಂಡ ಸಜ್ಜಾಗಿದೆ.
ಚಿತ್ರದ ಮೊದಲ ಹಾಡು 'ಟ್ರೇಡ್ ಮಾರ್ಕ್' ಎನ್ನುವ ಹಾಡು ರಿಲೀಸ್‌ಗೆ ರೆಡಿಯಾಗಿದೆ. ಈ ಹಾಡಿಗೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ಮತ್ತು ಚರಣ್ ರಾಜ್ ಸಂಗೀತ ಇದೆ. ಈ ಹಾಡು ರಿಲೀಸ್ ಮಾಡುವುದಾಗಿ ಚಿತ್ರತಂಡ ಪ್ರಕಟ ಮಾಡಿದೆ. ಚಿತ್ರದ ಹೊಸ ಪೋಸ್ಟರ್ ಮೂಲಕ ಹಾಡು ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಚಿತ್ರ ತಂಡ. ಚಿತ್ರದ ಟೈಟಲ್ 'ಟ್ರೇಡ್ ಮಾರ್ಕ್'.

ಅಪ್ಪು ಸಮಾಧಿಗೆ ಪೂಜೆ ಮಾಡಿದ ಕುಟುಂಬ!
ನಟ ಪುನೀತ್ ರಾಜ್‌ಕುಮಾರ್ ಅವರನ್ನು ನಿಧನ ಹೊಂದಿ ನಾಲ್ಕು ತಿಂಗಳು ಕಳೆದಿದೆ. ಅಕ್ಟೋಬರ್ 29ರಂದು ಅಪ್ಪು ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಾಗಾಗಿ ಅಪ್ಪು ಕುಟುಂಬಸ್ಥರು ಇಂದು ಫೆ.28ರಂದು ನಾಲ್ಕನೇ ತಿಂಗಳ ಪೂಜೆ ಮಾಡಿದ್ದಾರೆ. ಫೆ.28 ತಿಂಗಳ ಕೊನೆಯ ದಿನ. 29 ಬರುವುದಿಲ್ಲ. ಹಾಗಾಗಿ ಫೆಬ್ರವರಿ ತಿಂಗಳ ಕೊನೆ ದಿನದಂತೇ, ಒಂದು ದಿನ ಮುಂಚಿತವಾಗಿ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಅವರ ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ.

ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಮಕ್ಕಳಾದ ಧೃತಿ ಹಾಗೂ ವಂದಿತಾ ಅವರು ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಅಪ್ಪು ಸಮಾಧಿಗೆ ನಮಿಸಿದ್ದಾರೆ. ನಾಲ್ಕನೇ ತಿಂಗಳ ಹಿನ್ನೆಲೆಯಲ್ಲಿ ಸಮಾಧಿಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಪುನೀತ್ ಅವರಿಗೆ ಇಷ್ಟ ಆಗಿದ್ದಂತಹ ತಿನಿಸುಗಳನ್ನು ಮಾಡಿ ಅರ್ಪಿಸಲಾಗಿದೆ. ಅಭಿಮಾನಿಗಳು ಕೂಡ ಬಂದು ಅಪ್ಪು ಸಮಾಧಿಯ ದರ್ಶನ ಪಡೆದಿದ್ದಾರೆ.


Click it and Unblock the Notifications











