'ಜೇಮ್ಸ್' ಚಿತ್ರದಿಂದ ರಿವೀಲ್ ಆಯ್ತು ಪುನೀತ್ ಮತ್ತೊಂದು ಲುಕ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ 'ಯುವರತ್ನ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೇನು ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿರುವ ಚಿತ್ರತಂಡ ಸದ್ಯ ಕೊನೆಯ ಹಂತಕ್ಕೆ ತಲುಪಿದೆ. ಯುವರತ್ನ ಚಿತ್ರೀಕರ ಜೊತೆಗೆಯೆ ಪುನೀತ್ ಜೇಮ್ಸ್ ಚಿತ್ರದಲ್ಲೂ ನಿರತರಾಗಿದ್ದಾರೆ.
ಹೌದು, ಜೇಮ್ಸ್ ಚಿತ್ರದ ಚಿತ್ರೀಕರಣ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೆ ಜೇಮ್ಸ್ ಚಿತ್ರದ ಮೊದಲ ಲುಕ್ ರಿವೀಲ್ ಆಗಿತ್ತು. ಆ ನಂತರ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಯಾವುದೆ ಅಪ್ ಡೇಟ್ ಸಿಕ್ಕಿರಲಿಲ್ಲ. ಸದ್ಯ ಜೇಮ್ಸ್ ಚಿತ್ರೀಕರಣ ಅಡ್ಡಾದಿಂದ ಅಪ್ಪು ಖಡಕ್ ಲುಕ್ ಒಂದು ರಿಲೀಸ್ ಆಗಿದೆ.
ಸ್ಟೈಲಿಶ್ ಕಾರಿನ ಜೊತೆ ಫೈಟ್ ಗೆ ರೆಡಿಯಾಗಿ ನಿಂತಿರುವ ಅಪ್ಪು ಲುಕ್ ಅಭಿಮಾನಿಗಳ ನಿದ್ದೆ ಗೆಡಿಸಿದೆ. ಯುವರತ್ನ ಗುಂಗಲ್ಲಿ ಇರುವ ಅಭಿಮಾನಿಗಳ ಮುಂದೆ, ಅಪ್ಪು ಜೇಮ್ಸ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದು ನೋಡಿ ಅಚ್ಚರಿ ಪಡುತ್ತಿದ್ದಾರೆ. ಪುನೀತ್ ಜೊತೆ ಇರುವ ಕಾರು ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಕಾರು ಕೂಡ ವಿಶೇಷ ಪಾತ್ರವಾಗಿ ಕಾಣಿಸಿಕೊಳ್ಳಲಿದೆ.

ಅಂದ್ಹಾಗೆ ಜೇಮ್ಸ್ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಭರಾಟೆ ಚಿತ್ರದ ನಂತರ ಚೇತನ್ ನಿರ್ದೇಶನ ಮಾಡುತ್ತಿರುವ ಸಿನಿಮಾವಿದು. ಮೊದಲ ಬಾರಿಗೆ ಪವರ್ ಸ್ಟಾರ್ ಗೆ ಆಕ್ಷನ್ ಕಟ್ ಹೇಳುತ್ತಿರುವ ಚೇತನ್ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.
ಚೇತನ್ ಮತ್ತು ಪುನೀತ್ ಕಾಂಬಿನೇಷನ್ ನ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ ನಾಯಕಿಯ ಬಗ್ಗೆ ಇನ್ನು ರಿವೀಲ್ ಮಾಡಿಲ್ಲ. ಮೂಲಗಳ ಪ್ರಕಾರ ಪುನೀತ್ ಜೊತೆ ಮತ್ತೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೆ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.


Click it and Unblock the Notifications











