'ಜೇಮ್ಸ್' ಶೋ, ಥಿಯೇಟರ್‌ಗಳ ನಿಜ ಸಂಖ್ಯೆ ಇಲ್ಲಿದೆ: ನಿರ್ಮಾಪಕ, ನಿರ್ದೇಶಕ ಹೇಳಿದ್ದಿಷ್ಟು!

ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮಾರ್ಚ್ 17ಕ್ಕೆ ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಆದರೆ ಸಿನಿಮಾ ರಿಲೀಸ್‌ಗೂ ಮುನ್ನ 'ಜೇಮ್ಸ್' ಬಗ್ಗೆ ಸಾಕಷ್ಟು ಸುದ್ದಿಗಳು ಹಬ್ಬಿವೆ. ಚಿತ್ರದ ರಿಲೀಸ್, ಚಿತ್ರಮಂದಿರಗಳ ಸಂಖ್ಯೆ, ಟಿಕೆಟ್ ಬುಕ್ಕಿಂಗ್ ಸೇರಿದಂತೆ ಹಲವು ವಿಚಾರಗಳು ಸದ್ದು ಮಾಡುತ್ತಿವೆ.

Recommended Video

Na Kanda Appu | ನಾನು, ನಮ್ ತಾತ, ನಮ್ಮಪ್ಪ, ನನ್ ಮಗ ಎಲ್ರು ಅಪ್ಪು ಫ್ಯಾನ್ಸ್ | Pawan Wadeyar

ಅದರಲ್ಲೂ 'ಜೇಮ್ಸ್' ಜೊತೆಗೆ ಯಾವ ಕನ್ನಡ ಸಿನಿಮಾ ಕೂಡ ಸ್ಪರ್ಧೆಗೆ ಇಳಿಯುತ್ತಿಲ್ಲ. ಇನ್ನು ಕರ್ನಾಟಕದಲ್ಲಿ 'ಜೇಮ್ಸ್' ಬಿಟ್ಟರೆ ಮತ್ಯಾವ ಸಿನಿಮಾ ರಿಲೀಸ್‌ಗೂ ಅವಕಾಶ ಇಲ್ಲ. ಒಂದು ವಾರ ಏನಿದ್ದರು ಕೇವಲ 'ಜೇಮ್ಸ್' ಮಾತ್ರವೇ ಬೆಳ್ಳಿ ಪರದೆ ಮೇಲೆ ಅಬ್ಬರಿಸಲಿದೆ. ಭಾರತದಾದ್ಯಂತ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ವಿದೇಶದಲ್ಲೂ 'ಜೇಮ್ಸ್‌'ಗೆ ಹೆಚ್ಚಿನ ಬೇಡಿಕೆ ಇದೆ.

ಸದ್ಯ ಕರ್ನಾಟಕದಲ್ಲಿ ಸಿನಿಮಾ ಎಷ್ಟು ಸ್ಕ್ರೀನ್‌ಗಳಲ್ಲಿ ಅಬ್ಬರಿಸಲಿದೆ? ಎಷ್ಟು ಚಿತ್ರ ಮಂದಿರಗಳು 'ಜೇಮ್ಸ್‌'ಗೆ ಸಿಕ್ಕಿವೆ ಎನ್ನುವ ಬಗ್ಗೆ ಚಿತ್ರದ ನಿರ್ಮಾಪಕ ಕಿಶೋರ್ ಪಾತಿಕೊಂಡ ಅವರು ಫಿಲ್ಮೀ ಬೀಟ್ ಜೊತೆಗೆ ಮಾತನಾಡಿದ್ದಾರೆ. ಮೊದಲು ಟಿಕೆಟ್ ಬುಕ್ಕಿಂಗ್ ಬಗ್ಗೆ ಮಾತನಾಡಿದ ಅವರು ಸದ್ಯ ಸಿನಿಮಾದ ಟಿಕೆಟ್ ಬುಕ್ಕಿಂಗ್ ಜೋರಾಗಿ ನಡೆಯುತ್ತಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ 'ಜೇಮ್ಸ್' ಟಿಕೆಟ್ ಬುಕ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ 'ಜೇಮ್ಸ್'ಕ್ಕೆಎಷ್ಟು ಶೋಗಳು!

ಕರ್ನಾಟಕದಲ್ಲಿ 'ಜೇಮ್ಸ್'ಕ್ಕೆಎಷ್ಟು ಶೋಗಳು!

ಸದ್ಯ 'ಜೇಮ್ಸ್' ಚಿತ್ರಕ್ಕೆ ಕರ್ನಾಟಕದಲ್ಲಿ 300 ಚಿತ್ರಮಂದಿರಗಳು ಸಿಕ್ಕಿವೆ. ಇದು 300ಕ್ಕೆ ಮಾತ್ರ ಸೀಮಿತ ಆಗುವುದಿಲ್ಲ. ಯಾಕೆಂದರೆ ಸಿನಿಮಾ ರಿಲೀಸ್ ಆಗುವ ಹಿಂದಿನ ದಿನದವರೆಗೂ ಚಿತ್ರ ಮಂದಿರಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಹಾಗಾಗಿ 'ಜೇಮ್ಸ್' ಚಿತ್ರಮಂದಿರಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಈ ವಿಚಾರವನ್ನು ಫಿಲ್ಮೀ ಬೀಟ್‌ಗೆ ಸ್ಪಷ್ಟ ಪಡಿಸಿರುವ ನಿರ್ದೇಶಕ ಚೇತನ್ ಕುಮಾರ್, ಚಿತ್ರಮಂದಿರಗಳ ಸಂಖ್ಯೆ ಇನ್ನು ಹೆಚ್ಚಾಗಲಿವೆ ಎಂದಿದ್ದಾರೆ. ಜೊತೆಗೆ ಚಿತ್ರ ಬಿಗ್ ಓಪನಿಂಗ್ ಪಡೆದುಕೊಳ್ಳಲಿದ್ದು, ಮೊದಲ ದಿನವೇ 1500 ಶೋಗಳು ಆಗಲಿವೆ ಎಂದಿದ್ದಾರೆ. ಇದು ಕೇವಲ ಕರ್ನಾಟಕದ ಲೆಕ್ಕಾಚಾರ ಅಷ್ಟೇ.

ವಿದೇಶದಲ್ಲಿ 'ಜೇಮ್ಸ್'ಗೆ ಎಲ್ಲಿಲ್ಲದ ಬೇಡಿಕೆ!

ವಿದೇಶದಲ್ಲಿ 'ಜೇಮ್ಸ್'ಗೆ ಎಲ್ಲಿಲ್ಲದ ಬೇಡಿಕೆ!

'ಜೇಮ್ಸ್' ಚಿತ್ರಕ್ಕೆ ವಿದೇಶದಲ್ಲೂ ಭಾರಿ ಬೇಡಿಕೆ ಬಂದಿದ್ದು, ಯು.ಎಸ್‌ನಲ್ಲಿ 'ಜೇಮ್ಸ್' ಒಟ್ಟು 32 ಸ್ಟೇಟ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದು ಕೂಡ ಕನ್ನಡ ಚಿತ್ರರಂಗದ ಪಾಲಿಗೆ ದಾಖಲೆಯೇ ಸರಿ. ಜೊತೆಗೆ ಆಸ್ಟ್ರೇಲಿಯಾದಲ್ಲಿ ಸೆನ್ಸಾರ್ ಆದ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆಗೆ 'ಜೇಮ್ಸ್' ಪಾತ್ರವಾಗಿದೆ. ಇನ್ನು ಆಸ್ಟ್ರೇಲಿಯಾದಲ್ಲಿ 150 ಶೋಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಇದು ಕೂಡ ದಾಖಲೆ, ಯಾಕೆಂದರೆ ಕನ್ನಡದ ಒಂದು ಸಿನಿಮಾ ಆಸ್ಟ್ರೇಲಿಯಾದಲ್ಲಿ ಇಷ್ಟು ಶೋಗಳನ್ನು ಪಡೆದುಕೊಂಡಿದೆ.

'ಕೆಜಿಎಫ್' ಮಾದರಿಯಲ್ಲಿ ರಿಲೀಸ್ ಆಗಲಿದೆ 'ಜೇಮ್ಸ್'!

'ಕೆಜಿಎಫ್' ಮಾದರಿಯಲ್ಲಿ ರಿಲೀಸ್ ಆಗಲಿದೆ 'ಜೇಮ್ಸ್'!

ಕನ್ನಡ ಸಿನಿಮಾ ಒಟ್ಟಿಗೆ ಐದು ಭಾಷೆಗಳಲ್ಲಿ ರಿಲೀಸ್ ಆಗಿ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಗಮನ ಸೆಳೆದ ಸಿನಿಮಾ ಅಂದರೆ ಅದು 'ಕೆಜಿಎಫ್'. 'ಕೆಜಿಎಫ್' ಬಳಿಕ ಈಗ 'ಜೇಮ್ಸ್' ಸರದಿ. ಈ ಚಿತ್ರದ ಒಟ್ಟಿಗೆ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದ್ದು, ದೊಡ್ಡ ಮಟ್ಟದ ದಾಖಲೆ ಬರೆಯಲು ಸಜ್ಜಾಗಿದೆ. ಕರ್ನಾಟಕ, ಕನ್ನಡಕ್ಕೆ ಮಾತ್ರ 'ಜೇಮ್ಸ್' ಸೀಮಿತ ಆಗಿಲ್ಲ. ಇಡೀ ವಿಶ್ವದಲ್ಲಿರುವ ಕನ್ನಡಿಗರು ಈ ಸಿನಿಮಾ ನೋಡಲು ಕಾಯುತ್ತಿದ್ದಾರೆ.

'ಜೇಮ್ಸ್' ದಾಖಲೆ ಬರೆಯೋದು ಪಕ್ಕಾ!

'ಜೇಮ್ಸ್' ದಾಖಲೆ ಬರೆಯೋದು ಪಕ್ಕಾ!

'ಜೇಮ್ಸ್' ಸಿನಿಮಾ ರಿಲೀಸ್‌ಗೂ ಮುನ್ನವೇ ಸಾಕಷ್ಟು ದಾಖಲೆ ಬರೆದಿದೆ. ಈಗಾಗಲೇ ಸಾವಿರಾರು ಟಿಕೆಟ್‌ಗಳ ಮುಂಗಡ ಬುಕ್ಕಿಂಗ್ ಆಗಿದೆ. ಪ್ರದರ್ಶನಗಳ ಸಂಖ್ಯೆ ಮತ್ತು ಚಿತ್ರಮಂದಿಗಳ ವಿಚಾರದಲ್ಲಿ 'ಜೇಮ್ಸ್' ದಾಖಲೆ ಬರೆಯುವುದರಲ್ಲಿ ಅನುಮಾನ ಇಲ್ಲ. ನಿರೀಕ್ಷೆಗೂ ಮೀರಿದ ದಾಖಲೆಯನ್ನು ಮಾಡಲಿದೆ ಅಪ್ಪು ಕೊನೆಯ ಸಿನಿಮಾ 'ಜೇಮ್ಸ್'.

More from Filmibeat

English summary
Here Is The Details Puneeth Rajkumar Starrer James Movie Real Number Of Shows And Theaters
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X