ಮತ್ತೆ ಅಖಾಡಕ್ಕಿಳಿದ ಜೇಮ್ಸ್: ಜುಲೈ ಮೊದಲನೇ ವಾರ ಶೂಟಿಂಗ್

ಲಾಕ್‌ಡೌನ್‌ನಿಂದ ವಿಶ್ರಾಂತಿಯಲ್ಲಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯದಲ್ಲೇ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಡ್ತಿದ್ದಾರೆ.

ಜುಲೈ ಮೊದಲನೇ ವಾರದಿಂದ ಪವರ್ ಸ್ಟಾರ್ ಜೇಮ್ಸ್ ಸಿನಿಮಾದ ಚಿತ್ರೀಕರಣ ಆರಂಭಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 'ಭರ್ಜರಿ' ಚೇತನ್ ಕುಮಾರ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.

ಈಗಾಗಲೇ ಜೇಮ್ಸ್ ಸಿನಿಮಾದ ಬಹುಪಾಲು ಶೂಟಿಂಗ್ ಮುಗಿದಿದೆ. ಹೊಸಪೇಟೆ, ಬಳ್ಳಾರಿ ಸುತ್ತಮುತ್ತ ಚಿತ್ರೀಕರಣ ಮಾಡಿದ್ದರು. ಇದೀಗ, ಸಿನಿಮಾದ ಪ್ರಮುಖ ಆಕ್ಷನ್ ದೃಶ್ಯಗಳನ್ನು ಶೂಟ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Puneeth Rajkumar Starrer James Movie Shooting to Restart from July first week

ಇದಕ್ಕೂ ಮುಂಚೆ ಕಾಶ್ಮೀರಕ್ಕೆ ಹೋಗಿದ್ದ ಜೇಮ್ಸ್ ತಂಡ ಕೆಲವು ಪ್ರಮುಖ ದೃಶ್ಯ ಮತ್ತು ಹಾಡಿನ ಚಿತ್ರೀಕರಣ ಮಾಡಿದ್ದರು. ಕಾಶ್ಮೀರದಲ್ಲಿ ಜೇಮ್ಸ್ ಶೂಟಿಂಗ್ ಮಾಡಿದ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್‌ಗೆ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ. ಅನು ಪ್ರಭಾಕರ್ ಹಾಗೂ ತೆಲುಗು ನಟ ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು ಸಹ ಅಭಿನಯಿಸುತ್ತಿದ್ದಾರೆ.

Recommended Video

ಪೋಲೀಸ್ ಸ್ಟೇಷನ್ ಗೆ ನಟ ಚೇತನ್ ಅಲೆದಾಟ ಇನ್ನು ನಿಂತಿಲ್ಲ! | Filmibeat Kannada

More from Filmibeat

English summary
Powerstar Puneeth Rajkumar Starrer James Movie Shooting to restart from July first week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X