ಜೇಮ್ಸ್; ಬೆಂಗಳೂರಿನಲ್ಲಿ ಟಿಕೆಟ್ ಬುಕ್ಕಿಂಗ್‌ಗೆ ಭಾರಿ ಬೇಡಿಕೆ!
ಕನ್ನಡದ 'ಜೇಮ್ಸ್' ಚಿತ್ರದ ಅಬ್ಬರ ಎಲ್ಲೆಲ್ಲೂ ಜೋರಾಗಿದೆ. 'ಜೇಮ್ಸ' ಸಿನಿಮಾ ಯಾವಾಗ ತೆರೆಗೆ ಬರುತ್ತೆ ಅಂತ ಪ್ರತಿಯೊಬ್ಬರೂ ಕಾಯುತ್ತಿದ್ದರು. ಈಗ ಆ ಕಾಲ ಹತ್ತಿರ ಬಂದಿದೆ. 'ಜೇಮ್ಸ್' ಚಿತ್ರ ರಿಲೀಸ್ ದಿನಗಣನೆ ಶುರುವಾಗಿದೆ. ಅಪ್ಪು ಅಭಿಮಾನಿಗಳೇ ಸಿನಿಮಾವನ್ನು ಹೊತ್ತುಕೊಂಡು ಮೆರೆಸುತ್ತಿದ್ದಾರೆ. ಮಾರ್ಚ್ 17 ಚಿತ್ರ ರಿಲೀಸ್ ಆಗಲಿದೆ. ಆದರೆ ಚಿತ್ರದ ಟಿಕೆಟ್ ಬುಕ್ಕಿಂಗ್‌ನಲ್ಲಿ 'ಜೇಮ್ಸ್' ದಾಖಲೆ ಬರೆದಯುತ್ತಿದೆ.
Recommended Video
ಜನರು 'ಜೇಮ್ಸ್' ಚಿತ್ರದ ಟಿಕೆಟ್ ಮುಂಗಡವಾಗಿ ಬುಕ್ ಮಾಡುತ್ತಿದ್ದಾರೆ. ಈ ಮೂಲಕ 'ಜೇಮ್ಸ್' ಚಿತ್ರ ಹೊಸ ದಾಖಲೆ ಬರೆಯುತ್ತಿದೆ. ಕೆವಲ ಬೆಂಗಳೂರಿನಲ್ಲಿ ಮಾತ್ರವೇ ದಾಖಲೆ ಮಟ್ಟದ ಟಿಕೆಟ್‌ಗಳು ಬುಕ್ ಆಗುತ್ತಿದೆ. ಸಿನಿಮಾ ರಿಲೀಸ್‌ಗೆ ಇನ್ನು 3 ದಿನ ಬಾಕಿ ಇದೆ. ಹಾಗಾಗಿ ಜನ ಮುಗಿ ಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ.
ಕೇವಲ ಬೆಂಗಳೂರಿನಲ್ಲಿ ಮಾತ್ರವೇ ಸಾವಿರಾರು ಟಿಕೆಟ್ ಬುಕ್ ಆಗುತ್ತಿವೆ. ಕನ್ನಡದ ಒಂದು ಚಿತ್ರದ ಮುಂಗಡ ಟಿಕೆಟ್ ಇಷ್ಟು ದೊಡ್ಡ ಪ್ರಮಾಣದಲ್ಲಿ ಖರೀದಿ ಆಗಿರುವುದು ಇದೇ ಮೊದಲು. ಇನ್ನು ಮೂರುದಿನಗಲ್ಲಿ ಇದು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಮಾರ್ಚ್ 17 ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಮುಂಜಾನೆ 4 ಗಂಟೆಯ ಶೋಗಳು ಇರುತ್ತವೆ. ಸೂರ್ಯ ಹುಟ್ಟೋಕು ಮುನ್ನವೇ ಚಿತ್ರಮಂದಿರದಲ್ಲಿ 'ಜೇಮ್ಸ್' ಅಬ್ಬರ ಶುರುವಾಗಿರುತ್ತದೆ.

ಇನ್ನು ಒಂದೇ ಚಿತ್ರ ಮಂದಿರದಲ್ಲಿ 'ಜೇಮ್ಸ್' ಚಿತ್ರದ 5 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನಲ್ಲಿ ಪುನೀತ್ ರಾಜ್‌ಕುಮಾರ್ ನಿವಾಸದ ಬಳಿ ಇರುವ 'ಕಾವೇರಿ ಸಿನಿಮಾಸ್' ಚಿತ್ರಮಂದಿರದಲ್ಲಿ ಬೆಳಗಿನ 4 ಗಂಟೆಯ ಪ್ರದರ್ಶನ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚಿನ ಟಿಕೆಟ್ ಈಗಾಗಲೇ ಮಾರಾಟ ಆಗಿದ್ದು, ಜನ ಮತ್ತೇ ಮತ್ತೆ ಟಿಕೆಟ್‌ಗಾಗಿ ಮುಗಿ ಬೀಳುತ್ತಿದ್ದಾರೆ.
ಕರ್ನಾಟಕದಲ್ಲಿ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಜೇಮ್ಸ್ ನಾದ ಮೊಳಗಲಿದೆ. ಈಗಾಗಲೇ ಸುಮಾರು 135ಕ್ಕೂ ಅಧಿಕ ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಮತ್ತಷ್ಟು ಚಿತ್ರಮಂದಿರಗಳು ಪ್ರಕಟ ಆಗಲಿವೆ. ಕರ್ನಾಟಕದಲ್ಲಿಯೇ ಸುಮಾರು 400 ಸಿಂಗಲ್ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ. ಮಲ್ಟಿಪ್ಲೆಕ್ಸ್‌ನಲ್ಲೂ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಹೆಚ್ಚಿನ ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಅಬ್ಬರಿಸಲಿದೆ.
ಇತ್ತೀಚೆಗೆ 'ಜೇಮ್ಸ್' ಚಿತ್ರದ ಪ್ರೀ- ರಿಲೀಸ್ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ 'ಜೇಮ್ಸ್' ಸಿನಿಮಾ ತಂಡ, ಚಿತ್ರರಂಗದ ಗಣ್ಯರು ಮತ್ತು ರಾಜ್ ಕುಟುಂಬ ಭಾಗಿ ಆಗುತ್ತು. ನಟ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ವೇದಿಕೆ ಮೇಲೆ ಅಪ್ಪು ಅವರನ್ನು ನೆನೆದು ಭಾವುಕರಾದರು. ಈ ಚಿತ್ರದಲ್ಲಿ ಮೂವರು ಸಹೋದರರು ಅಭಿನಯಿಸಿದ್ದಾರೆ. ಇದು ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ ಆದ ಕಾರಣ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಇಬ್ಬರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











