ಜೇಮ್ಸ್ ಶೂಟಿಂಗ್ ಮುಕ್ತಾಯ: ಕುಂಬಳಕಾಯಿ ಒಡೆದ ಚಿತ್ರ ತಂಡ!

'ಜೇಮ್ಸ್' ಸಿನಿಮಾ ನೋಡಲು ಅಭಿಮಾನಿಗಳು ಮಾತ್ರ ಅಲ್ಲ. ಸಿನಿಮಾ ಪ್ರೇಕ್ಷಕ ವರ್ಗ, ಸಿನಿಮಾ ರಂಗವೇ ಕಾಯುತ್ತಿದೆ. ಕನ್ನಡ ಚಿತ್ರ ರಂಗದಲ್ಲಿ ಜೇಮ್ಸ್‌ ಸಿನಿಮಾ ತುಂಬಾ ವಿಶೇಷ. ಈ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

Recommended Video

ಈಡೇರಿತು ಅಪ್ಪು ಕನಸು, ಅಮೆಜಾನ್ ನಲ್ಲಿ ಪುನೀತ್ 3 ಸಿನಿಮಾ

ಸದ್ಯ ಜೇಮ್ಸ್‌ ಚಿತ್ರ ತಂಡದಿಂದ ಸಿಹಿ ಸುದ್ದಿ ಬಂದಿದೆ. ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದೆ. ಕುಂಬಳಕಾಯಿ ಒಡೆಯುವ ಮೂಲಕ ಚಿತ್ರ ತಂಡ ಈ ವಿಚಾರವನ್ನು ಬಹಿರಂಗ ಪಡಿಸಿದೆ. ಇದೇ ಮೊದಲ ಬಾರಿಗೆ ಪುನೀತ್​ ರಾಜ್​ಕುಮಾರ್ ಅವರಿಗೆ ಚೇತನ್​ ಕುಮಾರ್​ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

ಜೇಮ್ಸ್‌ ಪ್ರೇಕ್ಷಕರ ಹತ್ತಿರ ಬರುವ ದಿನಗಳು ಇನ್ನೂ ತುಂಬಾ ದೂರ ಇಲ್ಲ. ಈ ಹಿಂದೆ ಚಿತ್ರದ ಎಲ್ಲಾ ಕೆಲಸಗಳನ್ನು ಚಿತ್ರ ತಂಡ ಆರಂಭಿಸಿದೆ. ಸದ್ಯ ಬಾಕಿ ಇದ್ದ ಸಣ್ಣ ಪುಟ್ಟ ದೃಶ್ಯಗಳ ಶೂಟಿಂಗ್‌ಗಳನ್ನು ಕೂಡ ಮಾಡಿ ಮುಗಿಸಿದೆ. ಹಾಗಾಗಿ ಸದ್ಯದಲ್ಲಿಯೇ ಚಿತ್ರದ ರಿಲೀಸ್‌ ಬಗ್ಗೆ ಚಿತ್ರ ತಂಡ ಮಾಹಿತಿ ನೀಡುವ ನಿರೀಕ್ಷೆ ಹುಟ್ಟಿ ಕೊಂಡಿದ್ದೆ.

ಜೇಮ್ಸ್‌ ಸೆಟ್‌ನಲ್ಲಿ ಯುವರಾಜ್ ಕುಮಾರ್, ರಾಘವೇಂದ್ರ ರಾಜ್‌ ಕುಮಾರ್!

ಜೇಮ್ಸ್‌ ಸೆಟ್‌ನಲ್ಲಿ ಯುವರಾಜ್ ಕುಮಾರ್, ರಾಘವೇಂದ್ರ ರಾಜ್‌ ಕುಮಾರ್!

ಜೇಮ್ಸ್‌ ಸಿನಿಮಾಗೆ ಇಡೀ ರಾಜ್‌ ಕುಟುಂಬ ಬೆನ್ನೆಲುಬಾಗಿ ನಿಂತು ಕೊಂಡಿದೆ. ಚಿತ್ರಕ್ಕೆ ಶೂಟಿಂಗ್‌ ಮುಕ್ತಾಯದ ಸಂದರ್ಭದಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಮತ್ತು ಯುವರಾಜ್ ಕುಮಾರ್‌ ಕಾಣಿಸಿಕೊಂಡಿದ್ದಾರೆ. ಕುಂಬಳಕಾಯಿ ಒಡೆಯುವ ಸಂದರ್ಭದಲ್ಲಿ ಇಬ್ಬರೂ ಜೇಮ್ಸ್‌ ಸೆಟ್‌ನಲ್ಲಿ ಹಾಜರಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜನವರಿ 26ಕ್ಕೆ ಜೇಮ್ಸ್‌ ಚಿತ್ರದ ಹೊಸ ಪೋಸ್ಟರ್ ರಿಲೀಸ್!

ಜನವರಿ 26ಕ್ಕೆ ಜೇಮ್ಸ್‌ ಚಿತ್ರದ ಹೊಸ ಪೋಸ್ಟರ್ ರಿಲೀಸ್!

"ಜನವರಿ 26ಕ್ಕೆ ಗಣರಾಜ್ಯೋತ್ಸವ ದಿನದಂದು ಜೇಮ್ಸ್‌ ಚಿತ್ರದ ಹೊಸ ಪೋಸ್ಟರ್‌ ರಿಲೀಸ್ ಆಗುತ್ತಿದೆ. ಅಪ್ಪು ಅಭಿಮಾನಿಗಳಿಗೆ ಅಂತಲೇ ಈ ವಿಶೇಷವಾದ ಪೋಸ್ಟರ್ ಬಿಡುಗಡೆ ಮಾಡಲು ಮುಂದಾಗಿದೆ ಜೇಮ್ಸ್ ಟೀಮ್. ಹಿಂದೆಂದೂ ಅಪ್ಪು ಸರ್ ಅನ್ನು ಈ ರೀತಿ ನೋಡಿರಲು ಸಾಧ್ಯವೇ ಇಲ್ಲ. ಇದು ವಿಶೇಷವಾದ ಪೋಸ್ಟರ್. ಇದನ್ನು ವಿಶೇಷವಾದ ದಿನವೇ ಬಿಡುಗಡೆ ಮಾಡುತ್ತಿದ್ದೇವೆ. ಈ ಪೋಸ್ಟರ್ ಅನ್ನು ಅಪ್ಪು ಅಭಿಮಾನಿಗಳಿಗೆ ಖಂಡಿತಾ ಇಷ್ಟ ಆಗುತ್ತೆ. ಎನ್ನುವ ಅಭಿಪ್ರಾಯ ನಿರ್ದೇಶಕ ಚೇತನ್‌ ಅವರದ್ದು.

ಫೆಬ್ರವರಿಯಲ್ಲಿ ಚಿತ್ರದ ಟೀಸರ್, ಟ್ರೇಲರ್‌ ರಿಲೀಸ್!

ಫೆಬ್ರವರಿಯಲ್ಲಿ ಚಿತ್ರದ ಟೀಸರ್, ಟ್ರೇಲರ್‌ ರಿಲೀಸ್!

ಫೆಬ್ರವರಿಯಲ್ಲಿ ಜೇಮ್ಸ್‌ ಚಿತ್ರ ವತಿಯಿಂದ ಸಾಲು ಸಾಲು ಸರ್ಪ್ರೈಸ್‌ಗಳು ಸಿಗಲಿವೆ. ಜೇಮ್ಸ್‌ ಚಿತ್ರದ ಟ್ರೇಲರ್ ಮತ್ತು ಟೀಸರನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗುತ್ತೆ. ಆದರೆ ಇನ್ನು ದಿನಾಂಕವನ್ನು ನಿಗದಿ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಿದೆ ಚಿತ್ರ ತಂಡ. ಹಾಗಾಗಿ ಜೇಮ್ಸ್‌ ಮೂಲಕ ಪುನೀತ್‌ ರಾಜ್‌ ಅವರ ಹೊಸ ಲುಕ್ ಕಣ್ತುಂಬಿಕೊಳ್ಳಲು ಫೆಬ್ರವರಿಯಲ್ಲಿ ಅಭಿಮಾನಿಗಳು ಸಿದ್ದ ಆಗಬಹುದು.

ಅಪ್ಪು ಹುಟ್ಟು ಹಬ್ಬಕ್ಕೆ ಜೇಮ್ಸ್‌ ರಿಲೀಸ್‌ ಆಗುತ್ತಾ?

ಅಪ್ಪು ಹುಟ್ಟು ಹಬ್ಬಕ್ಕೆ ಜೇಮ್ಸ್‌ ರಿಲೀಸ್‌ ಆಗುತ್ತಾ?

ಇನ್ನು ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದಂದು. ಮಾರ್ಚ್ 17ರಂದೇ ಸಿನಿಮಾ ರಿಲೀಸ್ ಮಾಡಬೇಕು ಎನ್ನುವ ಆಸೆ ನಿರ್ದೇಶಕ ಚೇತನ್ ಮತ್ತು ಚಿತ್ರಕ್ಕಿದೆ ಅಂತೆ. ಹಾಗಾಗಿ ಸಾಕಷ್ಟು ಶ್ರಮ ವಹಿಸುತ್ತಿದ್ದೆಯಂತೆ ಚಿತ್ರತಂಡ. ಇಡೀ ಸಿನಿಮಾ ತಂಡದ ಮೇಲೆ ಒತ್ತಡ ಹೆಚ್ಚಾಗಿದೆ. ಜೇಮ್ಸ್ ಚಿತ್ರದ ಬಹುತೇಕ ಎಲ್ಲಾ ಕೆಲಸಗಳು ಮುಕ್ತಾಯ ಆಗಿವೆ. ಹಾಗಾಗಿ ನಿರ್ದೇಶಕ ಚೇತನ್‌ ಮತ್ತು ತಂಡ ಸಿನಿಮಾ ರಿಲೀಸ್‌ ಮಾಡುವತ್ತ ಹೆಚ್ಚಿನ ಗಮನ ಹರಿಸಿದೆ. ಸದ್ಯದಲ್ಲಿಯೇ ಸಿನಿಮಾದ ರಿಲೀಸ್ ದಿನಾಂಕ ಪ್ರಕಟ ಆಗಲಿದೆ.

More from Filmibeat

English summary
James Movie Shooting Complete: James Release For Puneeth Rajkumar Birthday,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X