ಪವರ್ ಸ್ಟಾರ್ 'ಜೇಮ್ಸ್' ಚಿತ್ರದಿಂದ ಬಂತು ಭರ್ಜರಿ ಸುದ್ದಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯ ಹಂತದ ಚಿತ್ರೀಕರಣದಲ್ಲಿ ಇರುವ ಚಿತ್ರತಂಡ ಇನ್ನೇನು ಕೆಲವೆ ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಲಿದೆ. ಪವರ್ ಸ್ಟಾರ್ ಯುವರತ್ನ ಚಿತ್ರದ ಚಿತ್ರೀಕರಣದ ನಡುವೆಯೂ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ.
Recommended Video
ಪವರ್ ಸ್ಟಾರ್ ಒಂದು ಸಿನಿಮಾ ಕೆಲಸವನ್ನು ಸಂಪೂರ್ಣವಾಗಿ ಮುಗಿಸುವ ವರೆಗೂ ಮತ್ತೊಂದು ಸಿನಿಮಾ ಕೆಲಸವನ್ನು ಪ್ರಾರಂಭಿಸುವುದಿಲ್ಲ. ಅಲ್ಲದೆ ಮುಂದಿನ ಸಿನಿಮಾದ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ಸದ್ಯ ಯುವರತ್ನ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಲಿರುವ ಪವರ್ ಸ್ಟಾರ್, ಮುಂದಿನ ಬಹುನಿರೀಕ್ಷೆಯ ಜೇಮ್ಸ್ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ.
ಅಂದ್ಹಾಗೆ ಜೇಮ್ಸ್ ಚಿತ್ರದಿಂದ ಈಗ ಭರ್ಜರಿ ಸುದ್ದಿಯೊಂದು ಕೇಳಿಬಂದಿದೆ. ಈಗಾಗಲೆ ಟೈಟಲ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುವ ಜೇಮ್ಸ್ ಚಿತ್ರದ ಮುಹೂರ್ತ ಇದೆ ತಿಂಗಳು 19ಕ್ಕೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಜೇಮ್ಸ್ ಟೈಟಲ್ ಹೇಳುವಹಾಗೆ ಇದೊಂದು ಪಕ್ಕಾ ಆಕ್ಷನ್ ಸಿನಿಮಾ. ಚಿತ್ರಕ್ಕೆ ಭರ್ಜರಿ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಬಾರಿಗೆ ಚೇತನ್ ಮತ್ತು ಪುನೀತ್ ರಾಜ್ ಕುಮಾರ್ ಒಂದಾಗುತ್ತಿದ್ದಾರೆ. ಹಾಗಾಗಿ ಜೇಮ್ಸ್ ಮೇಲಿನ ನಿರೀಕ್ಷೆ ತುಸು ಹೆಚ್ಚಾಗಿದೆ.

ಜೇಮ್ಸ್ ಚಿತ್ರಕ್ಕೆ ನಿರ್ಮಾಪಕ ಕಿಶೋರ್ ಪತಿಕೊಂಡ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚರಣ್ ಬಿಟ್ಟರೆ ಇನ್ನು ಚಿತ್ರದ ಸ್ಟಾರ್ ಕಾಸ್ಟ್ ಮತ್ತು ತಂತ್ರಜ್ಞರ ಬಳಗ ಇನ್ನು ಫೈನಲ್ ಆಗಿಲ್ಲ. ಸದ್ಯ ಪ್ರಿಪ್ರೊಡಕ್ಷನ್ ಕೆಲಸದಲ್ಲಿರುವ ಜೇಮ್ಸ್ ತಂಡ ಜನವರಿ 19ರಿಂದ ಚಿತ್ರೀಕರಣ ಪ್ರಾರಂಭಿಸಲಿದೆ.


Click it and Unblock the Notifications











