'ಜೇಮ್ಸ್' ಚಿತ್ರದ ಶೂಟಿಂಗ್ ಬಹುತೇಕ ಕಂಪ್ಲಿಟ್: ಪೊಸ್ಟ್ ಪ್ರೊಡಕ್ಷನ್ ಕೆಲಸಗಲು ಆರಂಭ!
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾ ಕನ್ನಡದ ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಅದರಲ್ಲೂ ಪುನೀತ್ ರಾಜ್‌ಕುಮಾರ್ ಅವರು ಅಭಿನಯದ ಸಿನಿಮಾ ಆದ ಕಾರಣ ಇರುವ ನಿರೀಕ್ಷೆ, ಕುತೂಹಲಗಳು ದುಪ್ಪಟ್ಟು ಆಗಿವೆ. ಆದರೆ ಚಿತ್ರ ಪೂರ್ತಿ ಆಗುವ ಮೊದಲೇ ನಡೆಯ ಬಾರದ್ದು ನಡೆದು ಹೋಗಿದೆ.
ನಟ ಪುನೀತ್ ರಾಜಕುಮಾರ್ ಪುನೀತ್ ದಿವಂಗತರಾದ ಕಾರಣಕ್ಕೆ ಚಿತ್ರದ ಕೆಲಸಗಳು ನಿಲ್ಲುವ ಎಂಬ ಆತಂಕ ಅಭಿಮಾನಿಗಳಲ್ಲಿ ಕಾಡುತ್ತಾ ಇತ್ತು. ಅಂತೆಯೇ ಈ ಚಿತ್ರವನ್ನು ತೆರೆಯ ಮೇಲೆ ನೋಡ ಬೇಕು ಎನ್ನುವ ಮಹದಾಸೆಯೂ ಅಭಿಮಾನಿಗಳಲ್ಲಿ ಅಡಗಿದೆ.
ಎಲ್ಲರೂ ನೋಡಲೇ ಬೇಕು ಎಂದು ಕಾಯುತ್ತಿರುವ 'ಜೇಮ್ಸ್' ಸಿನಿಮಾವನ್ನು ತೆರೆಗೆ ತರಲು ಚಿತ್ರ ತಂಡ ಪಣತೊಟ್ಟಿದೆ. ಅದೇ ನಿಟ್ಟಿನಲ್ಲಿ ಈಗ ಚಿತ್ರತಂಡ 'ಜೇಮ್ಸ್' ಕೆಲಸಗಳನ್ನು ಆರಂಭಿಸಿದೆ.

ಪ್ಯಾಚ್ ವರ್ಕ್ ದೃಶ್ಯಗಳ ಶೂಟಿಂಗ್ ಮುಕ್ತಾಯ!
'ಜೇಮ್ಸ್' ಚಿತ್ರವನ್ನು ಪೂರ್ಣ ಮಾಡಿ ರಿಲೀಸ್ ಮಾಡುವುದಾಗಿ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಈ ಹಿಂದೆ ಹೇಳಿದ್ದಾರೆ. ಅಂತೆಯೇ ಈಗ ಚಿತ್ರದ ಕೆಲಸಗಳನ್ನು ಶುರು ಮಾಡಿದ್ದಾರೆ. 'ಜೇಮ್ಸ್' ಚಿತ್ರದ ಕೆಲವೊಂದು ಪ್ಯಾಚ್ ವರ್ಕ್ ಕೆಲಸಗಳು ಶುರುವಾಗಿವೆ. ಬೇಕಾಗಿರುವ ಕೆಲವೊಂದು ಸಣ್ಣ,ಪುಟ್ಟ ಪ್ಯಾಚ್ ವರ್ಕ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಹಾಗೆಯೇ ಉಳಿದ ಕೆಲಸಗಳನ್ನು ಆದಷ್ಟು ಬೇಗ ಮುಗಿಸಲು ಚಿತ್ರ ತಂಡ ಯೋಜನೆ ರೂಪಿಸಿದೆ.

ಅಪ್ಪು ಪಾತ್ರದ ಚಿತ್ರೀಕರಣ ಮೊದಲೆ ಬಹುತೇಕ ಸಂಪೂರ್ಣವಾಗಿದೆ!
'ಜೇಮ್ಸ್' ಚಿತ್ರದ ಕೆಲವು ಭಾಗಗಳಲ್ಲಿ ಅಪ್ಪು ನಟಿಸ ಬೇಕಿತ್ತು ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ 'ಜೇಮ್ಸ್' ಚಿತ್ರವನ್ನು ಪುನೀತ್ ರಾಜ್‌ಕುಮಾರ್ ಬಹುತೇಕ ಪೂರ್ಣ ಗೊಳಿಸಿದ್ದಾರೆ. ಸಂಭಾಷಣೆಯ ಭಾಗದ ಚಿತ್ರೀಕರಣ ಬಹುತೇಕ ಮುಗಿದು ಬಿಟ್ಟಿದೆ.
ಈ ಚಿತ್ರ ಪುನೀತ್ ಅಭಿಮಾನಿಗಳಿಗೆ, ಸಿನಿಮಾ ಪ್ರೇಕ್ಷಕರಿಗೆ, ಕನ್ನಡಿಗರಿಗೆ, ಕರುನಾಡಿಗೆ ಅತಿ ಮುಖ್ಯವಾದ ಚಿತ್ರ. 'ಜೇಮ್ಸ್' ಚಿತ್ರದ ಸದ್ಯ ಚಿತ್ರ ತಂಡದ ಮೇಲೆ ಇರುವ ದೊಡ್ಡ ಜವಾಬ್ದಾರಿ. ಈ ಚಿತ್ರವನ್ನು ಎಲ್ಲರೂ ಒಪ್ಪುವಂತೆ ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಜವಾಬ್ದಾರಿ ಕೂಡ ಚಿತ್ರತಂಡಕ್ಕೆ ಇದೆ. ಅಷ್ಟೇ ಕಾಳಜಿ ಇಂದ ಚಿತ್ರ ತಂಡ ಕೂಡ ಕೆಲಸ ಮಾಡುತ್ತಲಿದೆ.

ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಚಿತ್ರತಂಡ ನಿರತ !
'ಜೇಮ್ಸ್' ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋವ ಮಾಹಿತಿ ಇದೆ. ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಆಗಿರೋ ಫೋಟೊಗಳು ಕೂಡ ಅದನ್ನೇ ಹೇಳುತ್ತಿವೆ.
ಇದರ ಜೊತೆಗೆ ಸಾಕಷ್ಟು ಅಂಶಗಳು ಚಿತ್ರದ ಮೆಲಿನ ನಿರೀಕ್ಷೆಗೆ ಕಾರಣ ಆಗಿವೆ. ಸದ್ಯ ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದ್ದು, ಜೇಮ್ಸ್ ಆದಷ್ಟು ಬೇಗ ತೆರೆಗೆ ತರಲು ಚಿತ್ರ ತಂಡ ಸಜ್ಜಾಗುತ್ತಿದೆ.

ಸದ್ಯಲ್ಲೇ ಸಿಗಲಿದೆ 'ಜೇಮ್ಸ್' ಹೊಸ ಅಪ್ಡೇಟ್!
ಇನ್ನೂ 'ಜೇಮ್ಸ್' ಸಿನಿಮಾದಲ್ಲಿ ಅಪ್ಪು ಅವರ ಪಾತ್ರ ಹೇಗೆ ಇರಲಿದೆ. ಡಬ್ಬಿಂಗ್ ವಿಚಾರಕ್ಕೆ ಬಂದರೆ ಅವರ ಧ್ವನಿಯನ್ನು ಯಾರು ಡಬ್ ಮಾಡುತ್ತಾರೆ? ಎನ್ನುವ ವಿಚಾರಗಳ ಕುರಿತು ಸಾಕಷ್ಟು ಚರ್ಚೆಗಳು ಬಂದು ಹೋಗಿವೆ. ಇದಕ್ಕೆಲ್ಲ ಸಮಯ ಬೇಕಾಗುತ್ತದೆ. ಸದ್ಯದಲ್ಲಿಯೇ ಈ ವಿಚಾರಗಳ ಕುರಿತಾಗಿ ಚಿತ್ರ ತಂಡ ಮಾತನಾಡಲಿದೆ. ಸದ್ಯ ಉಳಿದ ಚಿತ್ರದ ಕೆಲಸಗಳನ್ನು ಮಾಡಲು ಚಿತ್ರ ತಂಡ ಮುಂದಾಗಿದೆ.


Click it and Unblock the Notifications











