ಪವರ್‌ ಸ್ಟಾರ್ 'ಲಕ್ಕಿ ಮ್ಯಾನ್‌' ಹಕ್ಕು ಭಾರಿ ಮೊತ್ತಕ್ಕೆ ಮಾರಾಟ!

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಸಿನಿಮಾಗಳಲ್ಲಿ 'ಲಕ್ಕಿಮ್ಯಾನ್' ಕೂಡ ಒಂದು. ಈಗಾಗಲೇ ಚಿತ್ರದ ಟೀಸರ್, ಸಾಂಗ್ ರಿಲೀಸ್ ಆಗಿ ಗಮನ ಸೆಳೆದಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರದ ರಿಲೀಸ್ ದಿನಾಂಕ ಕೂಡ ಫಿಕ್ಸ್ ಆಗಿದೆ.

ಈಗಾಗಲೇ 'ಲಕ್ಕಿಮ್ಯಾನ್' ಚಿತ್ರದ ದಾಖಲೆಗಳ ಪರ್ವ ಶುರುವಾಗಿದೆ. ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದಾರೆ. ದಿವಂಗತ ಪುನೀತ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ.

ಇನ್ನು ಚಿತ್ರದಲ್ಲಿ ಪ್ರಭುದೇವಾ ಹಾಗೂ ಪವರ್ ಸ್ಟಾರ್ ಹಾಡೊಂಡಕ್ಕೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಅದರ ಮೇಕಿಂಗ್‌ನ ಸಣ್ಣ ಝಲಕ್ ಕೂಡ ರಿಲೀಸ್ ಆಗಿದೆ. ಈ ಸಿನಿಮಾ ಮಾಡಿರುವ ಹೊಸ ದಾಖಲೆಯ ಬಗ್ಗೆ ಮುಂದೆ ಓದಿ...

'ಲಕ್ಕಿ ಮ್ಯಾನ್' ವಿತರಣೆ ಹಕ್ಕು ಸೋಲ್ಡ್‌ಔಟ್!

'ಲಕ್ಕಿ ಮ್ಯಾನ್' ವಿತರಣೆ ಹಕ್ಕು ಸೋಲ್ಡ್‌ಔಟ್!

ಸೆಪ್ಟೆಂಬರ್‌ 9ರಂದು 'ಲಕ್ಕಿಮ್ಯಾನ್' ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಎಲ್ಲೆಡೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಇದಕ್ಕೆ ಬೇಡಿಕೆ ಉಂಟಾಗಲು ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಪವರ್‌ ಇರುವುದೂ ಕೂಡ ಒಂದು ಕಾರಣ ಎನ್ನಬಹುದು. ಇದೀಗ ಸಿನಿಮಾ ವಿತರಣೆ ಹಕ್ಕು ಮಾರಾಟವಾಗಿರುವುದಾಗಿ ವರದಿಯಾಗಿದೆ. ಇಡೀ ಕರ್ನಾಟಕದ ವಿತರಣಾ ಹಕ್ಕುಗಳು ಒಂದೇ ದಿನದಲ್ಲಿ ಮಾರಾಟವಾಗಿರುವುದು ವಿಶೇಷ.

ದುಬಾರಿ ಮೊತ್ತಕ್ಕೆ 'ಲಕ್ಕಿ ಮ್ಯಾನ್' ಸೇಲ್!

ದುಬಾರಿ ಮೊತ್ತಕ್ಕೆ 'ಲಕ್ಕಿ ಮ್ಯಾನ್' ಸೇಲ್!

ಪುನೀತ್‌ ರಾಜ್‌ಕುಮಾರ್‌ ಕ್ರೇಜ್ ಕಾರಣ ಪ್ರದರ್ಶಕರು ಸಿನಿಮಾ ಹಕ್ಕುಗಳಿಗಾಗಿ ಮುಗಿಬಿದ್ದಿದ್ದಾರೆ. ಪರಿಣಾಮ ಒಂದೇ ದಿನಕ್ಕೆ ಹಕ್ಕುಗಳು ಮಾರಾಟವಾಗಿದೆ. ಅದು ಕೂಡ ದುಬಾರಿ ಮೊತ್ತಕ್ಕೆ ಈ ಚಿತ್ರದ ಹಕ್ಕುಗಳು ಮಾರಾಟವಾಗಿವೆ. 'ಲಕ್ಕಿ ಮ್ಯಾನ್' ಚಿತ್ರದ ವಿತರಣಾ ಹಕ್ಕು 7 ಕೋಟಿ ಮೌಲ್ಯಕ್ಕೆ ಮಾರಾಟವಾಗಿದೆ ಎನ್ನಲಾಗಿದೆ. ಈ ಚಿತ್ರವನ್ನು ನೋಡಲು ಅಪ್ಪು ಅಭಿಮಾನಿಗಳು ಮಾತ್ರವಲ್ಲದೇ, ಕರುನಾಡಿನ ಜನ ಕೂಡ ಕಾತರರಾಗಿದ್ದಾರೆ. ಅದಕ್ಕೆ ಪುನೀತ್ ರಾಜ್‌ಕುಮಾರ್ ಕಾರಣ.

ಜಾಕ್‌ ಮಂಜು ಪಾಲಾದ 'ಲಕ್ಕಿಮ್ಯಾನ್'!

ಜಾಕ್‌ ಮಂಜು ಪಾಲಾದ 'ಲಕ್ಕಿಮ್ಯಾನ್'!

ಇತ್ತೀಚೆಗೆ 'ವಿಕ್ರಾಂತ್ ರೋಣ' ಸಿನಿಮಾ ನಿರ್ಮಿಸಿ ಗೆದ್ದ ನಿರ್ಮಾಪಕ ಜಾಕ್‌ ಮಂಜು, 'ಲಕ್ಕಿಮ್ಯಾನ್' ಚಿತ್ರದ ವಿತರಣೆ ಹಕ್ಕು ಖರೀದಿಸಿದ್ದಾರೆ. ಭಾರೀ ಮೊತ್ತಕ್ಕೆ ಅಪ್ಪು ಕೊನೆಯ ಸಿನಿಮಾ ಹಕ್ಕುಗಳನ್ನು ಮಂಜು ಸ್ವಂತ ಮಾಡಿಕೊಂಡಿದ್ದು, 7 ಕೋಟಿ ರೂ.ಗೆ ಪಡೆದಿದ್ದಾರೆ ಎನ್ನಲಾಗಿದೆ. ಬಹಳ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ. ಇನ್ನು ಡಿಜಿಟಲ್ ರೈಟ್ಸ್, ಸ್ಯಾಟಲೈಟ್, ಓವರ್‌ಸೀಸ್ ಥ್ರಿಯೇಟ್ರಿಕಲ್ ರೈಟ್ಸ್‌ಗೂ ಭಾರೀ ಡಿಮ್ಯಾಂಡ್ ಶುರುವಾಗಿದೆ.

'ಲಕ್ಕಿಮ್ಯಾನ್' ಬಳಿಕ 'ಗಂಧದಗುಡಿ'!

'ಲಕ್ಕಿಮ್ಯಾನ್' ಬಳಿಕ 'ಗಂಧದಗುಡಿ'!

ಪುನೀತ್‌ ರಾಜ್‌ಕುಮಾರ್ ಕೊನೆಯ ಸಿನಿಮಾಗಳಲ್ಲಿ ಮಾತ್ರವೇ ಅವರನ್ನು, ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಸಾಧ್ಯ. ಹಾಗಾಗಿ ದೊಡ್ಡಮಟ್ಟದಲ್ಲಿ ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾಗಳನ್ನು ನೋಡಲು ಮುಗಿಬೀಳುತ್ತಿದ್ದಾರೆ. ಅದಕ್ಕೆ 'ಜೇಮ್ಸ್' ಸಿನಿಮಾ ಉತ್ತಮ ಉದಾಹರಣೆ. 'ಗಂಧದಗುಡಿ' ಸಾಕ್ಷ್ಯಚಿತ್ರ ಬಿಟ್ಟರೆ ಅಪ್ಪು ನಟಿಸಿರೋ ಕೊನೆಯ ಕಮರ್ಷಿಯಲ್ ಸಿನಿಮಾ 'ಲಕ್ಕಿಮ್ಯಾನ್'. ಹಾಗಾಗಿ ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್‌ ಶುರುವಾಗಿದೆ. ಈ ಚಿತ್ರದ ಬಳಿಕ 'ಗಂಧದಗುಡಿ'ಯಲ್ಲಿ ಅಪ್ಪು ಎಂಟ್ರಿ ಕೊಡಲಿದ್ದಾರೆ.

More from Filmibeat

English summary
Puneeth Rajkumar Starrer Last Film Lucky Man Theatrical Rights sold Out For 7 Crore,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X