For Quick Alerts
  ALLOW NOTIFICATIONS  
  For Daily Alerts

  ಅಪ್ಪು ಮನೆ ಸಮೀಪ ಎದ್ದು ನಿಂತ 'ಲಕ್ಕಿ ಮ್ಯಾನ್' ಕಟೌಟ್: ಅಭಿಮಾನಿಗಳೇ ಅದೃಷ್ಟವಂತರು!

  |

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ಬಳಿಕ ಬಿಡುಗಡೆಯಾಗುತ್ತಿರುವ ಎರಡನೇ ಸಿನಿಮಾ 'ಲಕ್ಕಿ ಮ್ಯಾನ್'. ಕಾಕತಾಳೀಯವೋ ಏನೋ? ಅಪ್ಪು ಈ ಸಿನಿಮಾದಲ್ಲಿ ದೇವರಾದಂತೆ ರಿಯಲ್‌ ಲೈಫ್‌ನಲ್ಲೂ ಹಲವರ ಪಾಲಿಗೆ ದೇವರಾಗಿದ್ದಾರೆ. ಈ ಕಾರಣಪಕ್ಕೆ ಪವರ್‌ಸ್ಟಾರ್ ಫ್ಯಾನ್ಸ್‌ಗೆ ಈ ಸಿನಿಮಾ ವಿಶೇಷ.

  ಪ್ರಭುದೇವ ಹಾಗೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕಿರೋ ಸಿನಿಮಾವಿದು. ಇಬ್ಬರ್ ಡ್ಯಾನ್ಸಿಂಗ್ ದಿಗ್ಗಜರನ್ನು ಒಟ್ಟಿಗೆ ನೋಡುವುದಕ್ಕೆ ಅಪ್ಪು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಚಿತ್ರತಂಡ ಕೂಡ ಈ ಸಿನಿಮಾವನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸಿದೆ. ಹೀಗಾಗಿ ಬಿಡುಗಡೆಗೆ ಹತ್ತಿರವಾಗುತ್ತಿದ್ದಂತೆ ಭರ್ಜರಿ ಪ್ರಚಾರ ಮಾಡುವುದಕ್ಕೆ ಆರಂಭಿಸಿದೆ.

  ಟ್ವಿಟರ್‌ನಲ್ಲಿ ಅಪ್ಪು ಅಭಿಮಾನಿಗಳಿಂದ ಪುನೀತ್ ಚತುರ್ಥಿ!ಟ್ವಿಟರ್‌ನಲ್ಲಿ ಅಪ್ಪು ಅಭಿಮಾನಿಗಳಿಂದ ಪುನೀತ್ ಚತುರ್ಥಿ!

  ಕೆಲವು ದಿನಗಳ ಹಿಂದಷ್ಟೇ 'ಲಕ್ಕಿ ಮ್ಯಾನ್' ಸಿನಿಮಾ ಆಡಿಯೋ ರಿಲೀಸ್ ಆಗಿತ್ತು. ಈ ವೇಳೆ ಕೂಡ ಇಡೀ ಚಿತ್ರತಂಡ ಪುನೀತ್ ರಾಜ್‌ಕುಮಾರ್ ನೆನೆದು ಭಾವುಕರಾಗಿದ್ದರು. ಪ್ರಭುದೇವ, ಅವರ ಸಹೋದರ ನಾಗೇಂದ್ರ ಪ್ರಸಾದ್ ಎಲ್ಲರೂ ಪುನೀತ್ ಗುಣಗಾನ ಮಾಡಿದ್ದರು. ಈಗ ಅಪ್ಪು ಮನೆ ಸಮೀಪ 'ಲಕ್ಕಿಮ್ಯಾನ್' ಕಟೌಟ್ ರೀಚ್ ಆಗಿದೆ. ಅಷ್ಟಕ್ಕೂ 'ಲಕ್ಕಿ ಮ್ಯಾನ್' ಕಟೌಟ್ ಎಲ್ಲಿದೆ? ಪುನೀತ್ ಫ್ಯಾನ್ಸ್ ಏನಂತಿದ್ದಾರೆ? ಸಿನಿಮಾದ ಹೈಲೈಟ್ ಏನು? ಎಂದು ತಿಳಿಯಲು ಮುಂದೆ ಓದಿ.

  ಅಪ್ಪು ಮನೆ ಸಮೀಪ 'ಲಕ್ಕಿ ಮ್ಯಾನ್' ಕಟೌಟ್!

  ಅಪ್ಪು ಮನೆ ಸಮೀಪ 'ಲಕ್ಕಿ ಮ್ಯಾನ್' ಕಟೌಟ್!

  ಪುನೀತ್ ರಾಜ್‌ಕುಮಾರ್ ಅಭಿನಯಿಸಿರುವ ಕೊನೆಯ ಸಿನಿಮಾ 'ಲಕ್ಕಿ ಮ್ಯಾನ್'. ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಪುನೀತ್ ರಾಜ್‌ಕುಮಾರ್ ಈ ಸಿನಿಮಾದ ಹೈಲೈಟ್. ಈ ಕಾರಣಕ್ಕೆ ಚಿತ್ರತಂಡ ಪುನೀತ್ ಕಟೌಟ್‌ ಅನ್ನು ಬಹುತೇಕ ಕಡೆ ನಿಲ್ಲಿಸಲು ಸಜ್ಜಾಗಿದ್ದಾರೆ. ಅದರಲ್ಲಿ ಅಪ್ಪು ನೆನಪಿಗಾಗಿ, ಅವರ ಮನೆಯ ಸಮೀಪವೇ 'ಲಕ್ಕಿ ಮ್ಯಾನ್' ಸಿನಿಮಾದ ಕಟೌಟ್ ಅನ್ನು ನಿಲ್ಲಿಸಲಾಗಿದೆ. ಸದಾಶಿವನಗರದ ಸರ್ಕಲ್‌ನಲ್ಲಿ ಅಪ್ಪು ಭಾವಚಿತ್ರವಿರುವ 'ಲಕ್ಕಿ ಮ್ಯಾನ್' ಸಿನಿಮಾದ ಕಟೌಟ್‌ ಇಡಲಾಗಿದೆ.

  ಪುನೀತ್ ಫ್ಯಾನ್ಸ್ ಫುಲ್ ಹ್ಯಾಪಿ!

  ಪುನೀತ್ ಫ್ಯಾನ್ಸ್ ಫುಲ್ ಹ್ಯಾಪಿ!

  ಪುನೀತ್ ರಾಜ್‌ಕುಮಾರ್ ಅಗಲಿದ ದಿನದಿಂದ ಅವರ ಅಭಿಮಾನಿಗಳ ನೋವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಅಪ್ಪು ನಮ್ಮೊಂದಿಗಿಲ್ಲ ಅನ್ನೋ ಭಾವನೆ ಬರಲೇ ಬಾರದೆಂದು ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈಗ 'ಲಕ್ಕಿ ಮ್ಯಾನ್' ಚಿತ್ರತಂಡ ಅಪ್ಪು ಕಟೌಟ್ ನಿಲ್ಲಿಸಿದ್ದಕ್ಕೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಗಣೇಶ ಹಬ್ಬದ ಜೊತೆ ಪುನೀತ್ ಕಟೌಟ್ ನೋಡಿ ಸಂಭ್ರಮಿಸಿದ್ದಾರೆ.

  ಅಭಿಮಾನಿಗಳ ಪಾಲಿಗೆ ಅಪ್ಪು ದೇವರು

  ಅಭಿಮಾನಿಗಳ ಪಾಲಿಗೆ ಅಪ್ಪು ದೇವರು

  'ಲಕ್ಕಿಮ್ಯಾನ್' ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ರಿಯಲ್‌ ಲೈಫ್‌ನಲ್ಲೂ ಪವರ್‌ಸ್ಟಾರ್ ಹಲವರ ಪಾಲಿಗೆ ದೇವರಾಗಿದ್ದಾರೆ. ನಟನೆಯಷ್ಟೇ ಅಲ್ಲ. ಯಾರಿಗೂ ಗೊತ್ತಿಲ್ಲದಂತೆಯೇ ಪುನೀತ್ ರಾಜ್‌ಕುಮಾರ್ ಅದೆಷ್ಟೋ ಮಂದಿ ಸಹಾಯಹಸ್ತ ಚಾಚಿದ್ದರು. ಅವರ ಅಭಿಮಾನಿಗಳಿಗಷ್ಟೇ ಅಲ್ಲ. ಎಲ್ಲರಿಗೂ ಮಾದರಿಯಾಗಿ ಹೊರಟು ಹೋಗಿದ್ದಾರೆ. ಈ ಕಾರಣಕ್ಕೆ ಪವರ್‌ಸ್ಟಾರ್ ಕೇವಲ ಸಿನಿಮಾದಲ್ಲಷ್ಟೇ ಅಲ್ಲ. ನಿಜ ಜೀವನದಲ್ಲೂ ಅದೆಷ್ಟೋ ಮಂದಿಗೆ ದೇವರೇ ಆಗಿದ್ದಾರೆ.

  ಮುಂದಿನ ತಿಂಗಳು 'ಲಕ್ಕಿ ಮ್ಯಾನ್' ಎಂಟ್ರಿ

  ಮುಂದಿನ ತಿಂಗಳು 'ಲಕ್ಕಿ ಮ್ಯಾನ್' ಎಂಟ್ರಿ

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಗೀತಾ ಶೃಂಗೇರಿ ಮತ್ತು ರೋಶನಿ ಪ್ರಕಾಶ್ ಕೂಡ ಸಿನಿಮಾದ ಪ್ರಮುಖ ಭಾಗ. ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಪ್ರಭುದೇವ ಹಾಗೂ ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರೋ ಒಂದು ಹಾಡನ್ನು ಬೆಳ್ಳಿತೆರೆ ಮೇಲೆ ನೋಡುವುದಕ್ಕೆ ಕಾದು ಕೂತಿದ್ದಾರೆ.

  English summary
  Puneeth Rajkumar Starrer Lucky Man Movie Cutout at Sadashiva Nagar Bengaluru, Know More.
  Tuesday, August 30, 2022, 15:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X