For Quick Alerts
  ALLOW NOTIFICATIONS  
  For Daily Alerts

  ಶ್ರೀವಿಷ್ಣು ಅವತಾರದಲ್ಲಿ 'ಲಕ್ಕಿಮ್ಯಾನ್' ಅಪ್ಪು: ಹೊಸ ಟ್ರೈಲರ್ ನೋಡಿ ಫ್ಯಾನ್ಸ್ ಭಾವುಕ!

  |

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ 'ಲಕ್ಕಿಮ್ಯಾನ್' ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್ ಆಗಿದೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಈ ಟ್ರೈಲರ್ ರಿಲೀಸ್ ಮಾಡಿದ್ದರು. ಆದರೆ ಗಣೇಶ ಹಬ್ಬದ ಸಂಭ್ರಮದಲ್ಲಿ ಇಂದು ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿದೆ. ನಾಗೇಂದ್ರ ಪ್ರಸಾದ್ ನಿರ್ದೇಶನದ 'ಲಕ್ಕಿಮ್ಯಾನ್' ಮುಂದಿನ ವಾರ ತೆರೆಗೆ ಬರಲಿದೆ.

  ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಚಿತ್ರದ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದಾರೆ. ಅಪ್ಪು ಈ ಚಿತ್ರದಲ್ಲಿ ಶ್ರೀವಿಷ್ಣುವಾಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್‌ ಲವ್, ಫ್ರೆಂಡ್‌ಶಿಫ್, ಲೈಫ್‌ಗೆ ಗೈಡ್ ಆಗಿ ಗಾಡ್ ಆಗಿ ಪುನೀತ್ ರಾಜ್‌ಕುಮಾರ್ ಮಿಂಚಿದ್ದಾರೆ. ಟ್ರೈಲರ್ ನೋಡುವ ಅಷ್ಟು ಹೊತ್ತು ಪುನೀತ್ ರಾಜ್‌ಕುಮಾರ್ ನೆನಪಿನಲ್ಲೇ ಅಭಿಮಾನಿಗಳು ಭಾವುಕರಾಗುತ್ತಾರೆ. ಈ ರೊಮ್ಯಾಂಟಿಕ್ ಫ್ಯಾಂಟಸಿ ಸಿನಿಮಾ ಪ್ರೇಕ್ಷಕರಿಗ ಮಸ್ತ್ ಮನರಂಜನೆ ನೀಡುವ ಸುಳಿವು ಟ್ರೈಲರ್‌ನಲ್ಲಿ ಸಿಗುತ್ತಿದೆ.

  'ಲಕ್ಕಿಮ್ಯಾನ್' ಚಿತ್ರದಲ್ಲಿ ಸಾಧು ಕೋಕಿಲ, ನಾಗಭೂಷಣ್, ಸುಂದರ್‌ ರಾಜ್‌, ರೋಶನಿ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ. ಅಪ್ಪು, ಸಾಧು ಕಾಂಬಿನೇಷನ್‌ ಕಾಮಿಡಿ ದೃಶ್ಯಗಳು ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಡಾರ್ಲಿಂಗ್ ಕೃಷ್ಣ ಲವರ್‌ ಬಾಯ್ ಆಗಿ ಫ್ಯಾಮಿಲಿಮ್ಯಾನ್ ಆಗಿ ಟ್ರಯಾಂಗಲ್ ಲವ್‌ ಸ್ಟೋರಿಯಲ್ಲಿ ಮುಳುಗಿ ತೇಲಿದ್ದಾರೆ. ಮುಳುಗಿದಾಗ ಕೈ ಹಿಡಿದು ಮೇಲೆತ್ತಲು ದೇವರಾಗಿ ಪುನೀತ್ ರಾಜ್‌ಕುಮಾರ್ ಇದ್ದಾರೆ. ಇನ್ನು ಪ್ರಭುದೇವಾ ಜೊತೆ ಅಪ್ಪು ಸ್ಪೆಷಲ್ ಡ್ಯಾನ್ಸ್‌ ನಂಬರ್ ಕೂಡ ಚಿತ್ರದಲ್ಲಿದೆ. ಅದೆಲ್ಲದರ ಝಲಕ್ ಟ್ರೈಲರ್‌ನಲ್ಲಿ ನೋಡಬಹುದು.

  ವಿ2 ವಿಜಯ್ ವಿಕ್ಕಿ ಮ್ಯೂಸಿಕ್‌ನಲ್ಲಿ ಈಗಾಗಲೇ 'ಲಕ್ಕಿಮ್ಯಾನ್' ಸಿನಿಮಾ ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಛಾಯಾಗ್ರಾಹಕ ಜೀವ ಶಂಕರ್ ಬಹಳ ಸೊಗಸಾಗಿ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಇನ್ನು ಟೀಸರ್ ಕೊನೆಯಲ್ಲಿ ಪುನೀತ್ ರಾಜ್‌ಕುಮಾರ್ ಶ್ರೀವಿಷ್ಣುವಿನ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಬಾರದಲೋಕಕ್ಕೆ ಪಯಣ ಬೆಳೆಸಿರುವ ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳ ಮನಸ್ಸಿನಲ್ಲಿ ದೇವರ ಸ್ಥಾನ ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ದೇವರಾಗಿಯೇ ಕಾಣಿಸಿಕೊಂಡಿರುವುದು ವಿಪರ್ಯಾಸ.

  Puneeth Rajkumar Starrer Luckyman Movie New Trailer Released

  ನಿರ್ಮಾಪಕ ಜಾಕ್‌ ಮಂಜು ಭಾರೀ ಮೊತ್ತಕ್ಕೆ 'ಲಕ್ಕಿಮ್ಯಾನ್' ಸಿನಿಮಾ ವಿತರಣೆ ಹಕ್ಕುಗಳನ್ನು ಕೊಂಡುಕೊಂಡಿದ್ದಾರೆ. ಈಗಾಗಲೇ ಚಿತ್ರದ ಪ್ರದರ್ಶನ ಹಕ್ಕುಗಳು ಸಹ ಮಾರಾಟವಾಗಿದೆ. ಪಿ. ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್. ಸುಂದರ ಕಾಮರಾಜ್ 'ಲಕ್ಕಿಮ್ಯಾನ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ರಾಜ್ಯಾದ್ಯಂತ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. 'ಲಕ್ಕಿಮ್ಯಾನ್' ಸಿನಿಮಾ ಕಟೌಟ್‌ಗಳು ಸಿದ್ಧವಾಗಿವೆ. ಅಪ್ಪು ನಟನೆಯ ಕೊನೆಯ ಕಮರ್ಷಿಯಲ್ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

  Recommended Video

  Kiran Yogeshwar | ಅಪ್ಪು ಸರ್ ಮೀಟ್ ಮಾಡಿದೀನಿ ನಾನು | Puneeth Rajkumar

  ರಾಜ್ಯಾದ್ಯಂತ 300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಲಕ್ಕಿಮ್ಯಾನ್' ಸಿನಿಮಾ ರಿಲೀಸ್ ಆಗುತ್ತಿದೆ. ನಿರ್ದೇಶಕ ಯೋಗರಾಜ್‌ ಭಟ್ ಈ ಚಿತ್ರದಲ್ಲೂ ಯೋಗರಾಜ್ ಭಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಅಪ್ಪು ನಟನೆಯ ಕೊನೆಯ ಸಿನಿಮಾ ಅನ್ನುವ ಕಾರಣಕ್ಕೆ ಸಿನಿಂಆ ಭಾರೀ ಕುತೂಹಲ ಮೂಡಿಸಿದೆ. ತಮಿಳಿನ 'ಓ ಮೈ ಕಡವುಲೇ' ಚಿತ್ರದ ರೀಮೇಕ್ ಆಗಿರುವ ಈ ಚಿತ್ರಕ್ಕೆ ಪ್ರಭುದೇವಾ ಸಹೋದರ ಸಾರಥ್ಯ ವಹಿಸಿಕೊಂಡಿದ್ದಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಅಪ್ಪು ಮಾಡಿದ್ದಾರೆ.

  English summary
  Puneeth Rajkumar Starrer Luckyman Movie New Trailer Released. Know More.
  Wednesday, August 31, 2022, 23:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X