ಒಂದು ದಿನ ಮುಂಚೆಯೇ ಲಕ್ಕಿಮ್ಯಾನ್ ಪ್ರದರ್ಶನ; ಪ್ರೀಮಿಯರ್ ಶೋಗಳ ಟಿಕೆಟ್ ದರ ಎಲ್ಲೆಲ್ಲಿ ಎಷ್ಟೆಷ್ಟು?

ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಲಕ್ಕಿಮ್ಯಾನ್ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಶುಕ್ರವಾರ ಬಿಡುಗಡೆಯಾಗಲಿರುವ ಲಕ್ಕಿಮ್ಯಾನ್ ಚಿತ್ರದ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನು ಗುರುವಾರ ಸಂಜೆಯೇ ಆಯೋಜಿಸಲಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಈ ಪ್ರೀಮಿಯರ್ ಪ್ರದರ್ಶನಗಳಿರಲಿದ್ದು, ಈಗಾಗಲೇ ಮುಂಗಡ ಬುಕಿಂಗ್ ಆರಂಭವಾಗಿ ಅಪ್ಪು ಅಭಿಮಾನಿಗಳು ಟಿಕೆಟ್ ಖರೀದಿಗಾಗಿ ಮುಗಿಬಿದ್ದಿದ್ದಾರೆ.

ಈ ವರ್ಷ ತೆರೆ ಕಾಣುತ್ತಿರುವ ಪುನೀತ್ ರಾಜ್‌ಕುಮಾರ್ ಅಭಿನಯ ಇರುವ ಎರಡನೇ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಪುನೀತ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಪುನೀತ್ ನಿಧನದ ನಂತರ ಬಿಡುಗಡೆಯಾಗುತ್ತಿರುವ ಅಪ್ಪು ಅಭಿನಯದ ಎರಡನೇ ಚಿತ್ರ ಇದಾಗಿದ್ದು, ಜೇಮ್ಸ್ ಬಳಿಕ ತಮ್ಮ ನೆಚ್ಚಿನ ನಟನನ್ನು ಮತ್ತೊಮ್ಮೆ ಬೆಳ್ಳೆ ತೆರೆ ಮೇಲೆ ನೋಡಲು ಅಭಿಮಾನಿಗಳು ಸಿದ್ಧರಾಗಿದ್ದಾರೆ. ರಾಜ್ಯದ ಯಾವ ಚಿತ್ರಮಂದಿರಗಳಲ್ಲಿ ಲಕ್ಕಿಮ್ಯಾನ್ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳು ಇರಲಿವೆ ಹಾಗೂ ಟಿಕೆಟ್ ದರವೆಷ್ಟು ಎಂಬುದರ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಈ ಚಿತ್ರಮಂದಿರಗಳಲ್ಲಿ ಪ್ರೀಮಿಯರ್

ಬೆಂಗಳೂರಿನ ಈ ಚಿತ್ರಮಂದಿರಗಳಲ್ಲಿ ಪ್ರೀಮಿಯರ್

ಬೆಂಗಳೂರಿನ ಪಿವಿಆರ್, ಐನಾಕ್ಸ್, ಸಿನಿಪೊಲಿಸ್ ಹಾಗೂ ಗೋಪಾಲನ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಲಕ್ಕಿಮ್ಯಾನ್ ಸಿನಿಮಾದ 23 ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳು ಇವೆ. ಟಿಕೆಟ್ ದರ 236 ರೂಪಾಯಿಗಳಿಂದ ಆರಂಭವಾಗಲಿದ್ದು, ಕೆಲವೆಡೆ ವಿಐಪಿ ಕ್ಲಾಸ್‌ಗಳ ಟಿಕೆಟ್ ದರ 500ರಿಂದ 800 ರೂಪಾಯಿಗಳಷ್ಟಿದೆ. ಒರಾಯನ್ ಮಾಲ್‌ನ ಪಿವಿಆರ್‌ನಲ್ಲಿ ಮಾತ್ರ ಟಿಕೆಟ್ ದರ ತುಸು ಹೆಚ್ಚಿದ್ದು, ಸಂಜೆ 6.05 ಗಂಟೆ ಪ್ರದರ್ಶನದ ಟಿಕೆಟ್ ದರ 240 ರೂಪಾಯಿಗಳಿಂದ ಆರಂಭವಾದರೆ, ರಾತ್ರಿ 9.30ರ ಪ್ರದರ್ಶನದ ಟಿಕೆಟ್ 270 ರೂಪಾಯಿಗಳಿಂದ ಲಭ್ಯವಿದೆ. ಇನ್ನು ಒರಾಯನ್ ಮಾಲ್ ಪಿವಿಆರ್ ಹಾಗೂ ಜಿಟಿ ಮಾಲ್ ಪಿವಿಆರ್‌ನ ಸಂಜೆಯ ಪ್ರದರ್ಶನಗಳ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದ್ದು, ಉಳಿದ ಪ್ರದರ್ಶನಗಳು ವೇಗವಾಗಿ ತುಂಬುತ್ತಿವೆ.

ರಾಜ್ಯದ ಉಳಿದೆಡೆ ಟಿಕೆಟ್ ದರವೆಷ್ಟು?

ರಾಜ್ಯದ ಉಳಿದೆಡೆ ಟಿಕೆಟ್ ದರವೆಷ್ಟು?

ಮೈಸೂರಿನ ಪಿವಿಆರ್, ಐನಾಕ್ಸ್ ಹಾಗೂ ಡಿಆರ್‌ಸಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಲಕ್ಕಿಮ್ಯಾನ್ ಪ್ರೀಮಿಯರ್ ಶೋ ಟಿಕೆಟ್ ದರ 170 ಹಾಗೂ 200 ರೂಪಾಯಿಗಳಷ್ಟು ಇದ್ದರೆ, ಸಿಂಗಲ್ ಸ್ಕ್ರೀನ್ ವುಡ್‌ಲ್ಯಾಂಡ್ಸ್ ಟಿಕೆಟ್ ದರ 100 ಮತ್ತು 150 ರೂಪಾಯಿಗಳು. ಶಿವಮೊಗ್ಗದ ಭಾರತ್ ಸಿನಿಮಾಸ್‌ನಲ್ಲಿ 200 ರೂಪಾಯಿ, ಮಂಗಳೂರು ಪಿವಿಆರ್‌ನಲ್ಲಿ 180 ಹಾಗೂ ತುಮಕೂರು ಐನಾಕ್ಸ್‌ನಲ್ಲಿ 236 ರೂಪಾಯಿಗಳಿಗೆ ಲಕ್ಕಿಮ್ಯಾನ್ ಪ್ರೀಮಿಯರ್ ಶೋನ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.

ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗುತ್ತೆ ಲಕ್ಕಿಮ್ಯಾನ್

ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗುತ್ತೆ ಲಕ್ಕಿಮ್ಯಾನ್

ಇನ್ನು ತಮಿಳಿನ 'ಓ ಮೈ ಕಡವುಲೆ' ಚಿತ್ರದ ರಿಮೇಕ್ ಆಗಿರುವ ಲಕ್ಕಿಮ್ಯಾನ್ ಸಿನಿಮಾ ರೊಮ್ಯಾಂಟಿಕ್ ಫ್ಯಾಂಟಸಿ ಎಂಟರ್‌ಟೈನರ್ ಆಗಿದ್ದು, ಈ ಹಿಂದಿನ ಪುನೀತ್ ಸಿನಿಮಾಗಳ ಹಾಗೆ ಇದೂ ಸಹ ಕುಟುಂಬ ಸಮೇತ ಕುಳಿತು ನೋಡಬಹುದಾದಂತಹ ಚಿತ್ರವಾಗಿದೆ. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್, ಡಾರ್ಲಿಂಗ್ ಕೃಷ್ಣ, ಸಂಗೀತ ಶೃಂಗೇರಿ, ರೋಶನಿ ಪ್ರಕಾಶ್, ನಾಗಭೂಷಣ್ ಹಾಗೂ ಸಾಧುಕೋಕಿಲ ನಟಿಸಿದ್ದು, ಪ್ರಭುದೇವ ಹಾಡೊಂದರಲ್ಲಿ ಅಪ್ಪು ಜತೆ ಹೆಜ್ಜೆ ಹಾಕಿದ್ದಾರೆ. ಜಾಕ್ ಮಂಜು ಚಿತ್ರದ ವಿತರಣಾ ಹಕ್ಕನ್ನು ಖರೀದಿಸಿದ್ದು, ರಾಜ್ಯದ ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಲಕ್ಕಿಮ್ಯಾನ್ ಸಿನಿಮಾ ಬಿಡುಗಡೆಯಾಗಲಿದೆ.

More from Filmibeat

English summary
Puneeth Rajkumar and Darling Krishna starrer Luckyman movie premiere show theatres and ticket price details are here. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X