For Quick Alerts
  ALLOW NOTIFICATIONS  
  For Daily Alerts

  ಅಪ್ಪು ಲಕ್ಕಿ ಥಿಯೇಟರ್‌ನಲ್ಲಿ 'ಲಕ್ಕಿಮ್ಯಾನ್' ದರ್ಶನ: ಒಟ್ಟು ಎಷ್ಟು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಗೊತ್ತಾ?

  |

  ಬಹುನಿರೀಕ್ಷಿತ 'ಲಕ್ಕಿಮ್ಯಾನ್' ಸಿನಿಮಾ ಬಿಡುಗಡೆಗೆ ಇನ್ನೊಂದೇ ದಿನ ಬಾಕಿ ಇರೋದು. ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಕೊನೆ ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳು ಸಿದ್ಧತೆ ನಡೆಸಿದ್ದಾರೆ. ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಒಂದು ದಿನ ಮೊದಲೇ ಸಿನಿಮಾ ಪೇಯ್ಡ್ ಪ್ರೀಮಿಯರ್ ಶೋಗಳು ಶುರುವಾಗ್ತಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

  ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದಾರೆ. ಚಿತ್ರದ ಕೀ ರೋಲ್‌ನಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ್ದು, ಇದು ಅಪ್ಪು ಕೊನೆಯ ಸಿನಿಮಾ ಅನ್ನುವುದು ಬೇಸರದ ಸಂಗತಿ. ಚಿತ್ರದಲ್ಲಿ ಪ್ರಭುದೇವಾ ಹಾಗೂ ಅಪ್ಪು ಡ್ಯಾನ್ಸ್‌ ನಂಬರ್‌ ಒಂದಕ್ಕೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.

  ಅಪ್ಪು ಮತ್ತು ನಾನು ಈ ಚಿತ್ರ ಮಾಡುವ ಯೋಜನೆ ಹಾಕಿದ್ವಿ ಎಂದ ರಮ್ಯಾ; ಮಿಸ್ ಆಯ್ತು ದೊಡ್ಡ ಸಿನಿಮಾ!ಅಪ್ಪು ಮತ್ತು ನಾನು ಈ ಚಿತ್ರ ಮಾಡುವ ಯೋಜನೆ ಹಾಕಿದ್ವಿ ಎಂದ ರಮ್ಯಾ; ಮಿಸ್ ಆಯ್ತು ದೊಡ್ಡ ಸಿನಿಮಾ!

  ಜಾಕ್‌ ಮಂಜು ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಖರೀದಿಸಿದ್ದು ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ. ರಾಜ್ಯಾದ್ಯಂತ ಅಂದಾಜು 400 ಸ್ಕ್ರೀನ್‌ಗಳಲ್ಲಿ 'ಲಕ್ಕಿಮ್ಯಾನ್' ಕಾರುಬಾರು ಶುರುವಾಗಲಿದೆ. ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಮುಂಬೈ, ಚೆನ್ನೈ, ದೆಹಲಿ, ಹೈದರಾಬಾದ್‌, ಅಹಮದಾಬಾದ್, ನೋಯ್ಡಾ ಸೇರಿದಂತೆ ಹಲವು ನಗರಗಳಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ತಮಿಳುನಾಡಿನ ಡೆಂಕಣಿ ಕೋಟೆ, ಹೊಸೂರು, ಕೇರಳದ ಸುಲ್ತಾನ್ ಬತ್ತೇರಿಯಲ್ಲೂ ಸಿನಿಮಾ ಪ್ರದರ್ಶನವಾಗಲಿದೆ. 'ಲಕ್ಕಿಮ್ಯಾನ್' ಸಿನಿಮಾ ಬೇರೆ ಭಾಷೆಗಳಿಗೆ ಡಬ್ ಆಗಿಲ್ಲ. ಕನ್ನಡ ವರ್ಷನ್‌ ಎಲ್ಲಾ ಕಡೆ ಬಿಡುಗಡೆಯಾಗುತ್ತಿರುವುದು ವಿಶೇಷ.

  ಗಾಂಧಿನಗರದ ಕೆಜಿ ರಸ್ತೆಯ ನರ್ತಕಿ ಥಿಯೇಟರ್‌ನಲ್ಲಿ 'ಲಕ್ಕಿಮ್ಯಾನ್' ಸಿನಿಮಾ ಬಿಡುಗಡೆ ಆಗುತ್ತಿದೆ. ನರ್ತಕಿ ಪುನೀತ್‌ ರಾಜ್‌ಕುಮಾರ್ ಲಕ್ಕಿ ಥಿಯೇಟರ್‌. 10 ತಿಂಗಳಿನಿಂದ ಈ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನವೇ ನಿಂತು ಹೋಗಿತ್ತು. ಆದರೆ 'ಲಕ್ಕಿಮ್ಯಾನ್' ಸಿನಿಮಾ ಪುಣ್ಯ ಅನ್ನುವಂತೆ ಈ ಥಿಯೇಟರ್ ಬಾಗಿಲು ತೆರೆಯುತ್ತಿದೆ. ಈಗಾಗಲೇ ಥಿಯೇಟರ್‌ ಮುಂದೆ ಅಪ್ಪು ಕಟೌಟ್ ಎದ್ದು ನಿಂತಿದೆ. ಥಿಯೇಟರ್ ಅಂಗಳದಲ್ಲಿ ದೊಟ್ಟಮಟ್ಟದಲ್ಲಿ ಸೆಲೆಬ್ರೇಷನ್ ಮಾಡಿ 'ಲಕ್ಕಿಮ್ಯಾನ್' ಸ್ವಾಗತಕ್ಕೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

  Puneeth Rajkumar Starrer Luckyman to hit 400 screens across India

  ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ಪುನೀತ್ ರಾಜ್‌ಕುಮಾರ್ ಜೊತೆಗೆ ನಾಗಭೂಷಣ್, ಸುಂದರ್‌ ರಾಜ್, ಸುಧಾ ಬೆಳವಾಡಿ, ಸಾಧುಕೋಕಿಲ, ರೋಶನಿ ಚಿತ್ರದ ತಾರಾಬಳಗದಲ್ಲಿ ಇದ್ದಾರೆ. ವಿ2 ವಿಜಯ್ ವಿಕ್ಕಿ ಮ್ಯೂಸಿಕ್‌ನಲ್ಲಿ ಈಗಾಗಲೇ 'ಲಕ್ಕಿಮ್ಯಾನ್' ಸಿನಿಮಾ ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಛಾಯಾಗ್ರಾಹಕ ಜೀವ ಶಂಕರ್ ಬಹಳ ಸೊಗಸಾಗಿ ಚಿತ್ರವನ್ನು ಸೆರೆ ಹಿಡಿದಿದ್ದಾರೆ.ಪಿ. ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್. ಸುಂದರ ಕಾಮರಾಜ್ 'ಲಕ್ಕಿಮ್ಯಾನ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜ್ಯಾದ್ಯಂತ ಮಳೆಯ ನಡುವೆಯೂ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ.

  English summary
  Puneeth Rajkumar Starrer Luckyman to hit 400 screens across India. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X