twitter
    For Quick Alerts
    ALLOW NOTIFICATIONS  
    For Daily Alerts

    500 ದಿನ ಅಬ್ಬರಿಸಿದ್ದ ಅಪ್ಪು ಸಿನಿಮಾ 'ಮಿಲನ'ಗೆ 15 ವರ್ಷ: ಈ ಚಿತ್ರದ ಬಗ್ಗೆ ನಿಮಗೇನು ಗೊತ್ತು?

    |

    ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅಭಿನಯಿಸಿದ ಸಿನಿಮಾಗಳಲ್ಲೇ ಎವರ್‌ಗ್ರೀನ್ ಸಿನಿಮಾ ಯಾವುದು? ಈ ಪ್ರಶ್ನೆ ಅಭಿಮಾನಿಗಳಿಗೆ ಕೇಳಿದರೆ ಒಬ್ಬೊಬ್ಬರು ಒಂದೊಂದು ಉತ್ತರ ಕೊಡೋದು ಗ್ಯಾರಂಟಿ. ಆದರೆ ಸರ್ವಾನುಮತದಿಂದ ಆಯ್ಕೆ ಮಾಡಿದರೆ, ಸಿಗೋದೇ 'ಮಿಲನ'.

    ಸ್ಯಾಂಡಲ್‌ವುಡ್‌ನಲ್ಲಿ ಅಪ್ಪು ಅಭಿನಯದ 'ಮಿಲನ' ಹೊಸ ದಾಖಲೆಯನ್ನು ಬರೆದಿತ್ತು. ಸಿನಿಮಾ ತೆರೆಕಂಡ ಬಳಿಕ ಈ ಕ್ಲಾಸ್ ರೊಮ್ಯಾಂಟಿಕ್ ಲವ್ ಸ್ಟೋರಿಗೆ ಪ್ರೇಕ್ಷಕರು ಫಿದಾ ಆಗಿದ್ದರು. 'ಮಿಲನ' ಯುವಕ ಜನತೆಗಷ್ಟೇ ಅಲ್ಲದೆ, ಎಲ್ಲಾ ವರ್ಗಕ್ಕೂ ತುಂಬಾನೇ ಇಷ್ಟ ಆಗಿತ್ತು. 'ಮಿಲನ' ಸಿನಿಮಾ ಪುನೀತ್ ಸಿನಿ ಕರಿಯರ್‌ನ ಮೋಸ್ಟ್ ಸಕ್ಸಸ್‌ಫುಲ್ ಸಿನಿಮಾಗಳಲ್ಲೊಂದು ಎಂದು ಸಾಬೀತಾಗಿದೆ. ಇದೇ ಸಿನಿಮಾಗೀಗ 15 ವರ್ಷ.

    'ಸೈಮಾ ಏನಿದ್ರೂ ಅಪ್ಪು, ಅಭಿಷೇಕ್ ಅಂಬರೀಶ್ ರೀತಿ ಹಣಬಲ ಇರೋರಿಗೆ ಸಿಗುತ್ತೆ'; ಇದು ನಿಜನಾ?'ಸೈಮಾ ಏನಿದ್ರೂ ಅಪ್ಪು, ಅಭಿಷೇಕ್ ಅಂಬರೀಶ್ ರೀತಿ ಹಣಬಲ ಇರೋರಿಗೆ ಸಿಗುತ್ತೆ'; ಇದು ನಿಜನಾ?

    'ಮಿಲನ' ಸಿನಿಮಾಗೆ 15 ವರ್ಷ

    'ಮಿಲನ' ಸಿನಿಮಾಗೆ 15 ವರ್ಷ

    ಪವರ್‌ಸ್ಟಾರ್ ಆಗಿದ್ದರೂ, ಅಪ್ಪು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಂಡ ಸಿನಿಮಾವಿದು. ಇದೇ ಮೊದಲ ಬಾರಿಗೆ ಆರ್‌ಜೆಯಾಗಿ ಕಾಣಿಸಿಕೊಂಡಿದ್ದ ಪುನೀತ್‌ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಚ್ಚರಿಯ ದಾಖಲೆ ಬರೆದಿತ್ತು. ಪವರ್‌ಸ್ಟಾರ್ ಬದಲು ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಂಡಿದ್ದ ಪುನೀತ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಹಾಡು,ಡೈಲಾಗ್, ಚಿಕ್ಕದೊಂದು ಆಕ್ಷನ್ ಸೀಕ್ವೆನ್ಸ್‌ ಕೂಡ ಪ್ರೇಕ್ಷಕರ ಮನೆ ಮೆಚ್ಚುವಂತೆ ಮಾಡಿತ್ತು. ಸೆಪ್ಟೆಂಬರ್ 14, 2007ರಲ್ಲಿ ತೆರೆಕಂಡಿದ್ದ ಸಿನಿಮಾವೀಗ 15 ವರ್ಷಗಳನ್ನು ಪೂರೈಸಿದೆ.

    ಮಲಯಾಳಂಗೆ ಡಬ್

    ಮಲಯಾಳಂಗೆ ಡಬ್

    ಪ್ರಕಾಶ್ ನಿರ್ದೇಶಿಸಿದ 'ಮಿಲನ' ಸಿನಿಮಾ ಮಲಯಾಳಂಗೆ ಡಬ್ ಆಗಿತ್ತು. ಕನ್ನಡ 'ಮಿಲನ' ಮಲಯಾಳಂನಲ್ಲಿ 'ಇಷ್ಟಂ ಎನಿಕ್ಕಿಷ್ಟಂ' ಎಂಬ ಟೈಟಲ್ ಇಟ್ಟುಕೊಂಡು ರಿಲೀಸ್ ಆಗಿತ್ತು. ಮೂಲಗಳ ಪ್ರಕಾರ, ಇದು ಮಲಯಾಳಂಗೆ ಡಬ್ ಆದ ಪುನೀತ್ ರಾಜ್‌ಕುಮಾರ್ ಅಭಿನಯದ ಮೊದಲ ಸಿನಿಮಾ. ಮಲಯಾಳಂ ಭಾಷೆಯಲ್ಲೂ 'ಮಿಲನ'ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಮಲಯಾಳಂ ನಟಿ ಪಾರ್ವತಿಗೆ ಇದು ಮೊದಲ ಕನ್ನಡ ಸಿನಿಮಾ ಆಗಿತ್ತು.

    ನಮ್ಮ ಅಕ್ಕನ ಮದ್ವೇಲಿ ಮುಸ್ಲಿಂ ಬಿರಿಯಾನಿಗಾಗಿ ಅಪ್ಪು 15 ನಿಮಿಷ ಕ್ಯೂನಲ್ಲಿ ನಿಂತಿದ್ದರು: ಆಶಿತಾನಮ್ಮ ಅಕ್ಕನ ಮದ್ವೇಲಿ ಮುಸ್ಲಿಂ ಬಿರಿಯಾನಿಗಾಗಿ ಅಪ್ಪು 15 ನಿಮಿಷ ಕ್ಯೂನಲ್ಲಿ ನಿಂತಿದ್ದರು: ಆಶಿತಾ

    ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಿಗೆ ಕಿಕ್

    ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಿಗೆ ಕಿಕ್

    ಆಗತಾನೇ ಮಲ್ಟಿಪ್ಲೆಕ್ಸ್‌ ಥಿಯೇಟರ್‌ಗಳು ತಲೆ ಎತ್ತುತ್ತಿದ್ದವು. ಪಿವಿಆರ್, ಐನಾಕ್ಸ್ ಅಂತ ಕಂಪನಿಗಳು ಬೆಂಗಳೂರಿಗೆ ಕಾಲಿಟ್ಟಿದ್ದರು. ಇಂತಹ ಮಲ್ಟಿಪ್ಲೆಕ್ಸ್‌ನಲ್ಲಿ 'ಮಿಲನ'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲೂ ಕನ್ನಡ ಸಿನಿಮಾಗಳು ವರ್ಷಗಟ್ಟಲೆ ಓಡುತ್ತೆ ಅನ್ನೋದನ್ನು ಈ ಸಿನಿಮಾ ಪ್ರೂವ್ ಮಾಡಿತ್ತು. ಸುಮಾರು 500 ದಿನ ನಾನ್‌ ಸ್ಟಾರ್ ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಲ್ಲಿ ತೆರೆಕಂಡ ಸಿನಿಮಾವಿದು.

    ಬೇರೆ ಬೇರೆ ಭಾಷೆಗಳಿಗೆ ರಿಮೇಕ್

    ಬೇರೆ ಬೇರೆ ಭಾಷೆಗಳಿಗೆ ರಿಮೇಕ್

    'ಮಿಲನ' ಸಿನಿಮಾ 2014ರಲ್ಲಿ ಒಡಿಯಾ ಭಾಷೆಗೆ ರಿಮೇಕ್ ಆಗಿತ್ತು. 'ಸಂಥಿಂಗ್ ಸಂಥಿಂಗ್ 2' ಅನ್ನೋ ಟೈಟಲ್‌ನಲ್ಲಿ ರಿಲೀಸ್ ಆಗಿತ್ತು. 2016ರಲ್ಲಿ ಬಂದ ಬಂಗಾಳಿ ಸಿನಿಮಾ 'ಕಿ ಕೊರೆ ಟೊಕೆ ಬೊಲ್ಬೊ' ಕೂಡ 'ಮಿಲನ' ಸಿನಿಮಾದಿಂದ ಪ್ರೇರಣೆ ಹೊಂದಿದೆ ಎನ್ನಲಾಗಿದೆ. 2013ರಲ್ಲೇ ತೆರೆಕಂಡಿದ್ದ ತಮಿಳಿನ 'ರಾಜ ರಾಣಿ' ಕೂಡ 'ಮಿಲನ' ಸಿನಿಮಾದ ಪ್ರೇರಣೆ ಎನ್ನಲಾಗಿದೆ.

    ಅಪ್ಪು ಕಂಡು ಚಿತ್ರಮಂದಿರದಲ್ಲೇ ಗಳಗಳನೆ ಅತ್ತ ಫ್ಯಾನ್ಸ್; ಭಾವುಕ ವಿಡಿಯೋ ಹಂಚಿಕೊಂಡ ಲಕ್ಕಿಮ್ಯಾನ್ ಕೃಷ್ಣಅಪ್ಪು ಕಂಡು ಚಿತ್ರಮಂದಿರದಲ್ಲೇ ಗಳಗಳನೆ ಅತ್ತ ಫ್ಯಾನ್ಸ್; ಭಾವುಕ ವಿಡಿಯೋ ಹಂಚಿಕೊಂಡ ಲಕ್ಕಿಮ್ಯಾನ್ ಕೃಷ್ಣ

    English summary
    Puneeth Rajkumar Starrer Milana Movie Completes 15 Years; Know Unknown Facts about the movie,
    Thursday, September 15, 2022, 17:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X