ದೀಪಾವಳಿ ಹಬ್ಬದ ಪ್ರಯುಕ್ತ ನಿಮ್ಮ ಮುಂದೆ 'ನಟ ಸಾರ್ವಭೌಮ'.!
Recommended Video

'ಅಂಜನಿಪುತ್ರ' ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ಚಿತ್ರವೇ 'ನಟ ಸಾರ್ವಭೌಮ'. 'ರಣ ವಿಕ್ರಮ' ಬಳಿಕ ಅಪ್ಪು ಹಾಗೂ ನಿರ್ದೇಶಕ ಪವನ್ ಒಡೆಯರ್ ಒಂದಾಗಿರುವುದು ಈ ಸಿನಿಮಾದಲ್ಲೇ.!
ಕಳೆದ ಮೂರ್ನಾಲ್ಕು ತಿಂಗಳುಗಳಿಂದ 'ನಟ ಸಾರ್ವಭೌಮ' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿತ್ತು. ಮೈಸೂರು ಹಾಗೂ ಬಳ್ಳಾರಿಯಲ್ಲಿ ಶೆಡ್ಯೂಲ್ ಪ್ಯಾಕಪ್ ಆದ್ಮೇಲೆ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿತ್ತು.
ಸದ್ಯಕ್ಕೆ ಕೆಲವೇ ಕೆಲವು ದೃಶ್ಯಗಳು ಹಾಗೂ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಪೆಂಡಿಂಗ್ ಇದೆ. ಇವಿಷ್ಟು ಮುಗಿದರೆ, 'ನಟ ಸಾರ್ವಭೌಮ'ನಿಗೆ ಕುಂಬಳಕಾಯಿ ಹೊಡೆದ ಹಾಗೆ.

ಸೆಪ್ಟೆಂಬರ್ 18 ರಿಂದ ಮತ್ತೆ 'ನಟ ಸಾರ್ವಭೌಮ' ಶೂಟಿಂಗ್ ಶುರುವಾಗಲಿದ್ದು, ಇಡೀ ಚಿತ್ರತಂಡ ಕೊಲ್ಕತ್ತಾಗೆ ಹಾರಲಿದೆ. ಅಲ್ಲಿ ಕೆಲ ಸನ್ನಿವೇಶಗಳನ್ನು ಚಿತ್ರೀಕರಿಸಿದ್ಮೇಲೆ ಹಾಡುಗಳ ಶೂಟಿಂಗ್ ನಡೆಯಲಿದೆ.
ಈ ವರ್ಷದ ದೀಪಾವಳಿ ಹಬ್ಬದ ಹೊತ್ತಿಗೆ 'ನಟ ಸಾರ್ವಭೌಮ' ಚಿತ್ರವನ್ನ ತೆರೆಗೆ ತರಲು ಪವನ್ ಒಡೆಯರ್ ಮನಸ್ಸು ಮಾಡಿದ್ದಾರೆ. ಅಂದುಕೊಂಡಿದ್ದೆಲ್ಲಾ ಸಲೀಸಾಗಿ ನಡೆದರೆ, ದೀಪಾವಳಿ ಹಬ್ಬವನ್ನ ನೀವು 'ನಟ ಸಾರ್ವಭೌಮ'ನ ಜೊತೆಗೆ ಆಚರಿಸಬಹುದು.


Click it and Unblock the Notifications











